twitter
    For Quick Alerts
    ALLOW NOTIFICATIONS  
    For Daily Alerts

    ಸೆಪ್ಟೆಂಬರ್ 7ಕ್ಕೆ ಕನ್ನಡ ಚಿತ್ರೀಕರಣ ಟೋಟಲ್ ಬಂದ್!

    By Rajendra
    |

    South Indian Film Industry strike on 7th sep
    ಬುಧವಾರ(ಸೆಪ್ಟೆಂಬರ್ 7) ಚಿತ್ರೀಕರಣ ಟೋಟಲ್ ಆಗಿ ಬಂದ್ ಆಗಲಿದೆ. ಕೇವಲ ಕನ್ನಡ ಚಿತ್ರಗಳ ಚಿತ್ರೀಕರಣವಷ್ಟೆ ಅಲ್ಲ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರೀಕರಣವೂ ಬಂದ್ ಆಗಲಿದೆ. ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಈ ಬಂದ್‌ಗೆ ಕರೆಕೊಟ್ಟಿದೆ.

    ದಕ್ಷಿಣ ಭಾರತ ಚಲನಚಿತ್ರ ಕಾರ್ಮಿಕರ ಒಕ್ಕೂಟ (ಎಫ್‌ಈಎಫ್‌ಎಸ್‌ಐ) ಶೇ.50ರಿಂದ 100ರವರೆಗೆ ತಮ್ಮ ವೇತನವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತ ಫಿಲಂ ಚೇಂಬರ್ ಆಫ್ ಕಾಮರ್ಸ್ ಬಂದ್‌ಗೆ ಕರೆಕೊಟ್ಟಿದೆ.

    ಸರ್ವಾನುಮತದಿಂದಸೆಪ್ಟೆಂಬರ್ 7ರಂದು ಬಂದ್‌ಗೆ ಕರೆ ನೀಡಲಾಗಿದೆ. ಈ ನಾಲ್ಕು ಭಾಷೆಗಳಲ್ಲಿಯಾವುದೇ ಹೊಸ ಚಿತ್ರ ಸೆಟ್ಟೇರುವುದಾಗಲಿ, ಚಿತ್ರೀಕರಣವಾಗಲಿ ನಡೆಸುವಂತಿಲ್ಲ ಎಂದು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕಲ್ಯಾಣ್ ತಿಳಿಸಿದ್ದಾರೆ. ಚೆನ್ನೈನಲ್ಲಿ ನಡೆದ ಸಭೆಯಲ್ಲಿ ದಕ್ಷಿಣದ ಎಲ್ಲ ನಿರ್ಮಾಪಕರ ಒಪ್ಪಿಗೆ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ.

    English summary
    The representatives of producers from four South Indian film industries – Kannada,Tamil, Telugu and Malayalam – have decided to stop the shooting of all new films commencing from September 7. The Film Employees’ Federation of South India (FEFSI), demanding 50 to 100% salary 
 hike.
    Tuesday, September 6, 2011, 17:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X