ತಾಜ್ ಮಹಲ್ ಚಂದ್ರು ಬಾಳಸಂಗಾತಿ ಯಮುನಾ
ಭರವಸೆಯ ಚಿತ್ರ ನಿರ್ದೇಶಕ ಆರ್ ಚಂದ್ರು ಅವರ ಹೊಸ 'ಪ್ರೇಮ್ ಕಹಾನಿ' ಇದು. ಅವರು ಸದ್ದಿಲ್ಲದಂತೆ, ಸುಳಿವಿಲ್ಲದಂತೆ ಮದುವೆ ಮಾಡಿಕೊಂಡಿದ್ದಾರೆ. ಶನಿವಾರ (ಸೆ.4) ಆರತಕ್ಷತೆ ಕಾರ್ಯಕ್ರಮ ನಡೆಯುವವರೆಗೂ ಅವರು ಮದುವೆಯಾಗುತ್ತ್ತಿದ್ದಾರೆ ಎಂಬ ನಂಬಿಕೆ ಯಾರಿಗೂ ಬರಲಿಲ್ಲ.
ಯಮುನಾ ಅವರನ್ನು ಕೈಹಿಡಿಯುವ ಮೂಲಕ ಆರ್ ಚಂದ್ರು ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಬೆಂಗಳೂರು ಬಳ್ಳಾರಿ ರಸ್ತೆಯ ಚಿಕ್ಕಜಾಲ ಬಳಿಯಿರುವ ಕೆಎನ್ ಎಸ್ ಸಭಾಂಗಣದಲ್ಲಿ ಮದುವೆ ಕಾರ್ಯಕ್ರಮ ನೆರವೇರಿತು. ಭಾನುವಾರ (ಸೆ.5) ಬೆಳಗ್ಗೆ 9.15ರಿಂದ 1015ರ ಶುಭ ಮುಹೂರ್ತದಲ್ಲಿ ಯಮುನಾ ಅವರು ಚಂದ್ರು ಬಾಳ ಸಂಗಾತಿಯಾದರು.
ಆರತಕ್ಷತೆ ಕಾರ್ಯಕ್ರಮಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪೂಜಾಗಾಂಧಿ, ರಾಘವೇಂದ್ರ ರಾಜ್ ಕುಮಾರ್, ಸಂಜನಾ, ಅಜಯ್, ತರುಣ್, ನಿರ್ಮಾಪಕ ಕನಕಪುರ ಶ್ರೀನಿವಾಸ್, ನಿರ್ದೇಶಕ ಎಂ ಎಸ್ ರಮೇಶ್, ಮಹೇಶ್ ಬಾಬು, ಯೋಗಿಶ್ ಹುಣಸೂರು, ಗೀತ ಸಾಹಿತಿ ಕವಿರಾಜ್ ಸೇರಿದಂತೆ ಹಲವರು ಆಗಮಿಸಿ ಶುಭ ಹಾರೈಸಿದರು.
ಆರ್ ಚಂದ್ರು ನಿರ್ದೇಶನದ 'ತಾಜ್ ಮಹಲ್' ಚಿತ್ರಅವರಿಗೆ ಉತ್ತಮ ಹೆಸರು ತಂದುಕೊಟ್ಟಿತ್ತು. ಬಳಿಕ ಅವರ ನಿರ್ದೇಶನದಲ್ಲಿ 'ಪ್ರೇಮ್ ಕಹಾನಿ' ಚಿತ್ರ ಬಂದಿತ್ತು. ಈಗ ಶಿವರಾಜ್ ಕುಮಾರ್ ನಾಯಕ ನಟನಾಗಿ 'ಮೈಲಾರಿ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವನ್ನು ಕನಕಪುರ ಶ್ರೀನಿವಾಸ್ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆಯೂ ಉತ್ತಮ ನಿರೀಕ್ಷೆಗಳಿವೆ.


Click it and Unblock the Notifications











