For Quick Alerts
  ALLOW NOTIFICATIONS  
  For Daily Alerts

  ಕಡೆಗೂ ಬಿಕಿನಿಗೆ ಓಕೆ ಅಂದ್ಲು ಮಾದಕ ನಟಿ ತ್ರಿಷಾ

  By Rajendra
  |

  ಬಿಲ್ ಕುಲ್ ಅಂದ್ರು ಬಿಕಿನಿ ತೊಡಲ್ಲ ಎನ್ನುತ್ತಿದ್ದ ತ್ರಿಷಾ ಕಡೆಗೂ ತಮ್ಮ ಮನಸನ್ನು ಬದಲಾಯಿಸಿಕೊಂಡಿದ್ದಾರೆ. ಲಂಗಾ ದಾವಣಿಗೆ ಗುಡ್ ಬೈ ಹೇಳಿ ಬಿಕಿನಿಗೆ ಶರಣೆಂದಿದ್ದಾರೆ. ತಮ್ಮ ಮಾದಕ ಮೈಮಾಟದಿಂದ ತೆಲುಗು, ತಮಿಳಿನಲ್ಲಿ ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಗಳಿಸಿದ ನಟಿ ತ್ರಿಷಾ.

  ತೆಲುಗಿನಲ್ಲಿ 'ಬಾಡಿ ಗಾರ್ಡ್' ಎಂಬ ಚಿತ್ರದಲ್ಲಿ ತ್ರಿಷಾ ಅಭಿನಯಿಸುತ್ತಿದ್ದಾರೆ. ಈ ಚಿತ್ರ ತಮಿಳಿನಿಂದ ಮಲಯಾಳಂಗೆ ರೀಮೇಕ್ ಆಗಿತ್ತು. ಈಗ ಅಲ್ಲಿಂದ ತೆಲುಗಿಗೆ ರೀಮೇಕ್ ಆಗುತ್ತಿದೆ. ಚಿತ್ರದ ನಾಯಕ ನಟ ವಿಕ್ಟರಿ ವೆಂಕಟೇಶ್. ಸದ್ಯಕ್ಕೆ ಹೈದರಾಬಾದ್‌ನಲ್ಲಿ ಚಿತ್ರೀಕರಣ ಬರದಿಂದಸಾಗಿದೆ.

  ವಿಷಯ ಅದಲ್ಲ. ಹೆಚ್ಚು ಹಣ ಕೊಟ್ಟರೆ ಬಿಕಿನಿ ತೊಡಲು ತಮ್ಮದೇನು ಅಭ್ಯಂತರವಿಲ್ಲ ಎಂದಿದ್ದಾರೆ. ತಾವು ಪಡೆಯುವ ಸಂಭಾವನೆ ಜೊತೆಗೆ ರು.25 ಲಕ್ಷ ಎಕ್ಟ್ರಾ ಕೊಟ್ಟರೆ ಬಿಕಿನಿ ತೊಡಲು ಸಿದ್ಧ ಎಂದಿದ್ದಾರೆ ತ್ರಿಷಾ. ಸದ್ಯಕ್ಕೆ ತಲೆ ಮೇಲೆ ಕೈಹೊತ್ತಿ ಕುಳಿತಿರುವ ಚಿತ್ರದ ನಿರ್ಮಾಪಕರು ಇನ್ನೂ ಏನೂ ಹೇಳಿಲ್ಲವಂತೆ. ಒಟ್ಟಿನಲ್ಲಿ ನಿರ್ಮಾಪಕರ ಜೇಬಿನ ಮೇಲೆ ತ್ರಿಷಾ ಬಿಕಿನಿ ವಿಚಾರ ನಿಂತಿದೆ. (ಏಜೆನ್ಸೀಸ್)

  English summary
  The latest buzz is that actress Trisha Krishnan ready to wear bikini. She has decided to show off her curves in a bikini on screen for Telugu Body Guard. But, for that she is demanding extra 25 lakhs from the producer to wear the Bikini.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X