ಗೂಳಿ ಬೆಡಗಿ ಮಮತಾ ಮೋಹನ್‌ದಾಸ್‌ಗೆ ತಾಳಿಭಾಗ್ಯ

By Rajendra

ಸುದೀಪ್ ಜೊತೆ 'ಗೂಳಿ' ಚಿತ್ರದಲ್ಲಿ ಅಭಿನಯಿಸಿದ್ದ ಹಾಟ್ ಬೆಡಗಿ ಮಮತಾ ಮೋಹನ್ ದಾಸ್‌ಗೆ ಕಂಕಣಭಾಗ್ಯ ಕೂಡಿಬಂದಿದೆ. ಶೀಘ್ರದಲ್ಲೆ ಈಕೆ ಹಸೆಮಣೆ ಏರಲಿದ್ದು ಬಾಲ್ಯ ಸ್ನೇಹಿತನನ್ನು ವರಿಸಲಿದ್ದಾರೆ. ಆದರೆ ತನ್ನ ಬಾಲ್ಯ ಸ್ನೇಹಿತನ ಬಗ್ಗೆ ಮಾತ್ರ ತುಟಿಬಿಚ್ಚಿಲ್ಲ ಮಮತಾ ಮೋಹನ್ ದಾಸ್.

ನವೆಂಬರ್ 11ಕ್ಕೆ ನಿಶ್ಚಿತಾರ್ಥ ನಡೆಯಲಿದ್ದು, ಅದಕ್ಕೂ ಮುನ್ನ ತನ್ನ ಬಾಯ್ ಫ್ರೆಂಡ್ ಬಗ್ಗೆ ಡೀಟೇಲ್ ಆಗಿ ಹೇಳುತ್ತೇನೆ ಎಂದಿದ್ದಾರೆ ಮಮತಾ. ಬಹರೇನ್‌ನಲ್ಲಿ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿರುವ ಈತನೊಂದಿಗೆ ಮಮತಾ ಬಾಲ್ಯದಲ್ಲಿ ಕಣ್ಣಾಮುಚ್ಚಾಲೆ, ಯೌವ್ವನದಲ್ಲಿ ಐಸ್‌ಪೈಸ್ ಆಡಿದ್ದಾಗಿ ಸುದ್ದಿ ಇದೆ.

ಈಗ ಇಬ್ಬರೂ ಒಂದು ಅಂಡರ್‌ಸ್ಟ್ಯಾಂಡಿಗ್‌ಗೆ ಬಂದು ಮದುವೆಯಾಗಲು ನಿರ್ಧರಿಸಿದ್ದಾರೆ. ನಾವಿಬ್ಬರೂ ಮೇಡ್ ಫಾರ್ ಈಚ್ ಅದರ್ ಎನ್ನುವ ಮಮತಾ, ಆತನ ಮತ್ತು ಈಕೆಯ ಆಸಕ್ತಿಗಳೂ ಒಂದೇ ತೆರನಾಗಿವೆಯಂತೆ. "ನಮ್ಮಿಬ್ಬರ ಸಂಬಂಧ ಹೀಗೆ ಬಿಟ್ಟರೆ ಹಳಿತಪ್ಪುತ್ತದೆ. ಮದುವೆ ಮೂಲಕ ಈ ಸಂಬಂಧವನ್ನು ಬಂಧಿಸುತ್ತಿದ್ದೇವೆ. ನಮ್ಮ ಮದುವೆ ಮನೆಯವರ ಕಡೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ" ಎಂದಿದ್ದಾರೆ. (ಏಜೆನ್ಸೀಸ್)

More from Filmibeat

English summary
Actress and playback singer Mamta Mohandas ) is entering wedlock soon. She has acted in Kannada movie Gooli with Sudeep. Mamta has not revealed anything about her boyfriend. Her engagement has been fixed on November 11th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X