ಕಲ್ಯಾಣ್ ಕುಮಾರ್ ಪುತ್ರನ ಯಕ್ಕಾ ಚಿತ್ರಕ್ಕೆ ಸೆನ್ಸಾರ್ ಅಸ್ತು
"ಇದು ಇಸ್ಪೀಟಲ್ಲಾ ಗುರು" ಎಂಬ ಅಡಿಬರಹ ಹೊಂದಿರುವ 'ಯಕ್ಕಾ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ನಾಗನಾಥಜೋಶಿ ನಿರ್ಮಿಸಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಪ್ರೇಮಲತಾ.ಎನ್.ಜೋಶಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ಎಂ.ಎನ್.ಕೃಪಾಕರ್ ಸಂಗೀತ ನೀಡಿರುವ 'ಯಕ್ಕಾ' ಚಿತ್ರಕ್ಕೆ ಚಂದ್ರು ಬೆಳವಂಗಲರ ಛಾಯಾಗ್ರಹಣವಿದೆ. ಸಿ.ರವಿಚಂದ್ರನ್ ಸಂಕಲನ, ಆಕ್ಷನ್ ಮೂರ್ತಿ ಸಾಹಸ, ರಾಜ್ ದೇ, ಕಪಿಲ್ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ರಾಜಶೇಖರ್ ಹೆಗಡೆ ಸಂಭಾಷಣೆ ಬರೆದಿದ್ದಾರೆ. ನಾಗನಾಥಜೋಶಿ ಹಾಗೂ ಸೋಮೇಶ್ ಚಿತ್ರದ ಗೀತೆಗಳನ್ನು ರಚಿಸಿದ್ದಾರೆ.
ಕನ್ನಡದ ಮೇರುನಟ ಕಲ್ಯಾಣ್‌ಕುಮಾರ್ ಅವರ ಪುತ್ರ ಭರತ್‌ಕಲ್ಯಾಣ್ ನಾಯಕನಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ರಮೇಶ್‌ಪವಾರ್, ಸುಭಾಷಿಣಿ, ಡಾ.ಚಿಕ್ಕಹೆಜ್ಜಾಜಿ ಮಹದೇವ್, ಪ್ರಣಯಮೂರ್ತಿ, ಮಾಧವಿ, ಮಂಜುನಾಥ್, ಅಜಯ್ ಮುಂತಾದವರಿದ್ದಾರೆ.
ಯಕ್ಕಾ ಸೆನ್ಸಾರ್ ಭರತ್ ಕಲ್ಯಾಣ್ ಕಲ್ಯಾಣ್ ಕುಮಾರ್ ನಾಗನಾಥ್ ಜೋಶಿ yakka bharat kalyan subashini censor kalyan kumar naganath joshi


Click it and Unblock the Notifications