»   » ತೆಲುಗಲ್ಲೂ ಬಿಡಬ್ಯಾಡಾ, ‘ಹೊಡಿ ಮಗ.. ಹೊಡಿ ಮಗ..’!

ತೆಲುಗಲ್ಲೂ ಬಿಡಬ್ಯಾಡಾ, ‘ಹೊಡಿ ಮಗ.. ಹೊಡಿ ಮಗ..’!

Subscribe to Filmibeat Kannada


(ತಿದ್ದು-ಪಡಿ :‘ಜೋಗಿ’ ಚಿತ್ರದ ತೆಲುಗು ಅವ-ತ-ರ-ಣಿ-ಕೆ ‘ಯೋಗಿ’ ಚಿತ್ರಕ್ಕೆ ರಾಗ-ಸಂಯೋ-ಜನೆ ಮಾಡು-ತ್ತಿ-ರು-ವ-ವರು ರಮಣ ಗೋಕುಲ. ಗುರು-ಕಿ-ರ-ಣ್‌ ಪಾತ್ರ ಹಿನ್ನೆಲೆ ಸಂಗೀತ ಮಾತ್ರ-ಸಂಪಾ-ದ-ಕ)

‘ಜೋಗಿ’ ಚಿತ್ರದ ತೆಲುಗು ಅವತರಣಿಕೆಗೆ ಕೂಡ, ಗುರುಕಿರಣ್‌ ಸಂಗೀತ ನೀಡಿದ್ದಾರೆ. ಪ್ರಭಾಸ್‌ ಅಭಿನಯದ ಈ ಚಿತ್ರಕ್ಕೆ ತೆಲುಗಿನಲ್ಲಿ ‘ಯೋಗಿ’ ಎಂದು ಹೆಸರಿಡಲಾಗಿದೆ.

ಕನ್ನಡದಲ್ಲಿ ಸಾಲು ಸಾಲಾಗಿ ಹಿಟ್‌ ಸಂಗೀತ ನೀಡಿದ ಗುರುಕಿರಣ್‌ಗೆ ಈಗ ಶುಕ್ರದೆಶೆ. ಅಪ್ತಮಿತ್ರ, ಜೋಗಿ ಚಿತ್ರದಿಂದ ಶುರುವಾದ ಯಶಸ್ಸಿನ ಸರಪಳಿ, ಕರ್ನಾಟಕ ದಾಟಿ ಅಂಧ್ರದವರೆಗೂ ಹಬ್ಬಿದೆ.

‘ಅಪ್ತಮಿತ್ರ’ ಚಿತ್ರದ ನಿರ್ದೇಶಕ ಪಿ. ವಾಸು, ತೆಲುಗಿನ ತಮ್ಮ ಚಿತ್ರ ‘ಮಹಾರಥಿ’ಗೆ ಸಂಗೀತ ನೀಡಲು ಗುರುಕಿರಣ್‌ಗೆ ಅವಕಾಶ ನೀಡಿದ್ದರು. ಈ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಗುರುಕಿರಣ್‌, ಅಲ್ಲಿನ ಪ್ರೇಕ್ಷಕರ ಮೋಡಿ ಮಾಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.

ಈಗ ಹೊಸ ಸುದ್ದಿಯೆಂದರೆ ‘ಜೋಗಿ’ ಚಿತ್ರದ ತೆಲುಗು ಅವತರಣಿಕೆಗೆ ಕೂಡ, ಗುರುಕಿರಣ್‌ ಸಂಗೀತ ನೀಡಿದ್ದಾರೆ. ಪ್ರಭಾಸ್‌ ಅಭಿನಯದ ಈ ಚಿತ್ರಕ್ಕೆ ತೆಲುಗಿನಲ್ಲಿ ‘ಯೋಗಿ’ ಎಂದು ಹೆಸರಿಡಲಾಗಿದೆ. ರಮಣ ಗೋಕುಲ ಚಿತ್ರಕ್ಕೆ ಸಾಹಿತ್ಯ ಒದಗಿಸಿದ್ದಾರೆ. ಸಂಕ್ರಾತಿಯ ಹೊತ್ತಿಗೆ ಬಿಡುಗಡೆಯಾಗಲಿರುವ ಈ ಚಿತ್ರವನ್ನು ವಿ. ವಿನಾಯಕ್‌ ನಿರ್ದೇಶಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada