»   » ‘ಹೋಟಲಿಡೋಂದ್ರೆ ಸಿನಿಮಾ ಮಾಡ್ತಾನಂತೆ’

‘ಹೋಟಲಿಡೋಂದ್ರೆ ಸಿನಿಮಾ ಮಾಡ್ತಾನಂತೆ’

Posted By: Super
Subscribe to Filmibeat Kannada

ಆತ ಸ್ಫುರದ್ರೂಪಿ, ಉತ್ತಮ ರಂಗನಟ, ಚಿತ್ರ ಕತೆಗಾರ, ಬಿಬಿಎಮ್‌ ಪಧವೀಧರ , ಬುದ್ಧಿವಂತ! ಚಿತ್ರಕತೆ ಬರೆದ, ನಾಟಕ-ಧಾರವಾಹಿಗಳಲ್ಲಿ ನಟಿಸಿದ , ಆದರೆ ಚಿತ್ರ ನಟನೆಯು ಅವನಿಗೆ ಯಶಸ್ಸನ್ನು ತರಲಿಲ್ಲ. 'ಚಿತ್ರರಂಗದ ಹುಚ್ಚುಬಿಟ್ಟು ಬಿಡು. ಬಿಬಿಎಮ್‌ ಬುದ್ಧಿ ಉಪಯೋಗಿಸಿ ಹೋಟೆಲ್‌ ಆರಂಭಿಸು" ಎಂದು ತಾಯಿ ಹೇಳಿದರು. ಆದರೆ ಇನ್ನೂ ಯಾವುದೇ ನಿರ್ಧಾರ ತೆಗೆದು ಕೊಂಡಿಲ್ಲ ಎಂದು ಹೇಳಿ ಆತ ಮೌನಿಯಾಗುತ್ತಾನೆ.

ಕನ್ನಡ ಚಿತ್ರರಂಗದಲ್ಲಿ ಕಾಲೂರಲು ಯತ್ನಿಸುತ್ತಿರುವ ಈ ಯುವ ಪ್ರತಿಭೆ ಯಾರು ?'ಸಂಗ್ಯಾ ಬಾಳ್ಯಾ" ನಾಟಕದಲ್ಲಿ ಅಭಿನಯಿಸಿ ರಂಗಾಸಕ್ತರ ಗಮನ ಸೆಳೆದ ಈತ ನಟ ಶ್ರಿನಿವಾಸ ಮೂರ್ತಿಯವರ ಮಗ. 1997ರಲ್ಲಿ 'ಚಂದಮಾಮ ಚಕ್ಕುಲಿಮಾಮ" ಧಾರವಾಹಿ ಮೂಲಕ ಕಿರುತೆರೆ ಪ್ರವೇಶಿಸಿದ. ಮುಂದೆ 'ಸಹನಾ", 'ಬೆಳದಿಂಗಳಾಗಿ ಬಾ", 'ಲಾಲಿ "ಇತ್ಯಾದಿ 25 ಕ್ಕೂ ಹೆಚ್ಚು ಧಾರವಾಹಿಗೆ ಸಾಹಿತ್ಯ ರಚಿಸಿದ. ಹಾಡು ಬರೆದ, ತಾನೇ ಹಾಡಿದ, ನಟಿಸಿದ . ಅಷ್ಟು ಮಾತ್ರವಲ್ಲ ಒಬ್ಬ ಉತ್ತಮ ನೃತ್ಯಗಾರ. ದಕ್ಷಿಣ ಭಾರತೀಯ ಮಟ್ಟದ ನೃತ್ಯ ಸ್ಪರ್ಧೆ ಒಂದರಲ್ಲಿ ಮೊದಲ ಬಹುಮಾನ ಪಡೆದ ನಾಟ್ಯ ಪ್ರವೀಣ. ನಟನಿಗಿರ ಬೇಕಾದ ಎಲ್ಲಾ ಕ್ಷೇತ್ರ ಪರಿಣತಿ ಹೊಂದಿದಾತ. 1999ರಲ್ಲಿ 'ಶ್ರಿರಸ್ತು ಶುಭಮಸ್ತು" ಚಿತ್ರದ ಮೂಲಕ ಬೆಳ್ಳಿತೆರೆಗೂ ಕಾಲಿರಿಸಿದ . ಚಿತ್ರ ಒಂದರಲ್ಲಿ ತನ್ನ ತಂದೆಯಾಂದಿಗೆ ತಮ್ಮನಂತೆ ನಟಿಸಿದ. ನಟನೆಯ ಎರಡನೇ ಚಿತ್ರ 'ಬಾಲಶಿವ" ವೂ ನೆಲಕಚ್ಚಿತು. ಆದರೆ ಇವನ ಅಭಿನಯದ ಬಗ್ಗೆ ಯಾರೂ ಬೆರಳು ತೋರಿಸಲಿಲ್ಲ . ಶಹಬಾಸ್‌! ಎಂದವರೇ ಹೆಚ್ಚು.

ಹಾಃ! ನೀವು ಯಾರೆಂದು ಹೇಳ್ಲಿಲಲ್ವ... ಅಯ್ಯೋ! ಅಷ್ಟು ಗೊತ್ತಾಗಿಲ್ವ ಕದಂಬ ಚಿತ್ರದ ವಿಷ್ಣುವರ್ಧನ್‌ ಮಗ. ಚಿತ್ರ ಸೋತರೂ ವಿಮರ್ಶೆಗಳು ಇವರ ಅಭಿನಯವನ್ನು ವರ್ಣಿಸಿವೆ. ಇವನ ಅಭಿನಯಕ್ಕೆ ಮನಸೋತ ನಿರ್ದೇಶಕ ಸುರೇಶ್‌ ಕೃಷ್ಣ ತೆಲುಗು ಚಿತ್ರದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿದ್ದಾರೆ. ನಾಯಕ ಹಾಗೂ ಖಳನಾಯಕ ಎರಡೂ ಪಾತ್ರಗಳಲ್ಲೂ ಅಭಿನಯಿಸಲು ಸಿದ್ಧ ಎನ್ನು ವ ಕಲಾಶ್ರಿಮಂತಿಕೆಯ ನಟರಲ್ಲೊಬ್ಬ.

ನಿಮಗೆ ಈಗಾಗ್ಲೆ ಯಾರು ಎಂದು ಗೊತ್ತಾಗಿರ ಬೇಕಲ್ವ. ಗೊತ್ತಾಗಿಲ್ಲ ಅಂದರೆ ಮಾತ್ರ... ಅವರು 'ನವೀನ್‌ಕೃಷ್ಣ " ಅಂತ ನಾವು ಹೇಳಲ್ಲ. ಅವರ ಅಭಿಪ್ರಾಯದ ಪ್ರಕಾರ ' ಕನ್ನಡ ಚಿತ್ರರಂಗದ ನಿರ್ಮಾಪಕರು ರಂಗ ಪ್ರತಿಭೆಗಳನ್ನು ಚಿತ್ರದಲ್ಲಿ ಬಳಸಿ ಕೊಳ್ಳಬೇಕು. ಉತ್ತರದಲ್ಲಿ ಚಿತ್ರ ಯಶಸ್ಸಿಗೆ ಇದೇ ಕಾರಣ. ರಂಗಕರ್ಮಿಗಳು ಸಿನಿಮಾ ಗುಣಮಟ್ಟವನ್ನು ವೃದ್ಧಿಸಬಲ್ಲರು" . ಹಿಂದೊಮ್ಮೆ ನಾಗಾಭರಣ ಇದೇ ಮಾತನ್ನು ಹೇಳಿದ ನೆನಪು.

English summary
Naveen krishna kannada movies new talent

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada