For Quick Alerts
  ALLOW NOTIFICATIONS  
  For Daily Alerts

  ಸದಭಿರುಚಿ + ತಿಳಿಹಾಸ್ಯ = ವಾದಿರಾಜ್‌

  By ದಟ್ಸ್‌ಕನ್ನಡ ಬ್ಯೂರೊ
  |

  ವಾದಿರಾಜ್‌ ಎಂದಕೂಡಲೇ ನೆನಪಿಗೆ ಬರುವುದು ಕುಳ್ಳ ಶರೀರ ಹಾಗೂ ಸ್ಪಷ್ಟ ಶಾರೀರ. ನಾಯಕಿಯ ಅಣ್ಣನಾಗಿಯಾ ತಮ್ಮನಾಗಿಯಾ ಅಥನಾ ನಾಯಕನ ಗೆಳೆಯನಾಗಿಯಾ ಕಪ್ಪು ಬಿಳುಪು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ವಾದಿರಾಜ್‌ ನಗೆನಟರೆಂದು ಪ್ರಸಿದ್ಧರು. ಆದರೆ, ವಾದಿರಾಜ್‌ ನಟರಷ್ಟೇ ಆಗಿರಲಿಲ್ಲ ; ನಿರ್ಮಾಪಕರೂ ಆಗಿದ್ದರು. ಕನ್ನಡ ಚಿತ್ರೋದ್ಯಮಕ್ಕೆ ವಾದಿರಾಜ್‌ ನಗೆನಟರಾಗಿ ಸಂದ ಸೇವೆಗಿಂತ ನಿರ್ಮಾಪಕರಾಗಿ ಸಂದ ಕೊಡುಗೆಯೇ ಹೆಚ್ಚು .

  ಚಿತ್ರ ನಿರ್ಮಾಣವೆನ್ನುವುದು ವಾದಿರಾಜ್‌ ಪಾಲಿಗೆ ಸಂತೆಗೆ ಮೂರು ಮೊಳ ನೇಯುವ ಮಾರುಕಟ್ಟೆಯ ತಂತ್ರವಾಗಿರಲಿಲ್ಲ . ಗೆದ್ದೆತ್ತಿನ ಬಾಲ ಹಿಡಿಯುವ, ದುಡ್ಡಿಗಾಗಿ ಸಿನಿಮಾ ಮಾಡುವ ಜಾಯಮಾನವೂ ಅವರದ್ದಲ್ಲ . ಸಿನಿಮಾ ಎನ್ನುವುದು ಒಂದು ಮಾಧ್ಯಮ ; ಈ ಮಾಧ್ಯಮದ ಮೂಲಕ ಜನರಿಗೆ ಸಂದೇಶ ನೀಡಬೇಕು, ತಿಳಿವಳಿಕೆ ನೀಡಬೇಕು ಎಂದು ವಾದಿರಾಜ್‌ ನಂಬಿದ್ದರು. 'ನಂದಾದೀಪ"ದಿಂದ 'ಸತಿ ಸಾವಿತ್ರಿ"ವರೆಗಿನ ವಾದಿರಾಜ್‌ ಚಿತ್ರಗಳು ಈ ಮಾತಿಗೆ ಸಾಕ್ಷಿ .

  ಸಾಹಿತ್ಯ ಹಾಗೂ ಸಂಗೀತಕ್ಕೆ ವಾದಿರಾಜ್‌ ತಮ್ಮ ಚಿತ್ರಗಳಲ್ಲಿ ಹೆಚ್ಚು ಗಮನ ನೀಡುತ್ತಿದ್ದರು. ನಾಂದಿ, ನವ ಜೀವನ, ಸೀತೆಯಲ್ಲ ಸಾವಿತ್ರಿ, ಸೀತಾ, ನಾ ಮೆಚ್ಚಿದ ಹುಡುಗ, ಅದೇ ಕಣ್ಣು, ನಮ್ಮಮ್ಮನ ಸೊಸೆ, ದಂಗೆಯೆದ್ದ ಮಕ್ಕಳು, ಪ್ರೇಮಕ್ಕೂ ಪರ್ಮಿಟ್ಟೇ, ಮುಂತಾದ ವಾದಿರಾಜ್‌ ಚಿತ್ರಗಳು ಕನ್ನಡ ಚಿತ್ರ ರಸಿಕರ ಮನಸ್ಸಿನಲ್ಲಿ ಸದಾ ಹಸಿರು.

  ವಾದಿರಾಜ್‌ ಅವರದ್ದು ಕಲಾಕಾರರ ಕುಟುಂಬ. ಅವರ ಸೋದರಿ ಹರಿಣಿ ಕೂಡ ಜನಪ್ರಿಯ ನಟಿ. ವಾದಿರಾಜ್‌ರ ಪ್ರತಿ ಕೆಲಸದಲ್ಲೂ ಸೋದರ ಜವಾಹರ್‌ ಅವರ ಬೆಂಬಲವಿರುತ್ತಿತ್ತು .

  ವಾದಿರಾಜ್‌ ನಿರ್ಮಾಣದ ಅನೇಕ ಚಿತ್ರಗಳು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿವೆ. ಡಾ.ರಾಜ್‌ ಅಭಿನಯದ 'ನಾಂದಿ" ಚಿತ್ರ ಕನ್ನಡದಲ್ಲಿ ಹೊಸ ಅಲೆ ಚಿತ್ರಗಳ ಆರಂಭದ ಚಿತ್ರವೆಂದೇ ಪ್ರಸಿದ್ಧವಾಗಿದೆ. 'ಇನ್ನೊಂದು ಮುಖ" ಮಕ್ಕಳ ಚಿತ್ರ ವಿಮರ್ಶಕರ ಮೆಚ್ಚುಗೆ ಗಳಿಸಿದೆ. 'ಯಾರಿವಳು" ನಾಟಕವನ್ನು ಆಧರಿಸಿದ 'ಇನ್ನೊಂದು ಮುಖ" ಚಿತ್ರ 10ನೇ ಅಂತರರಾಷ್ಟ್ರೀಯ ಭಾರತೀಯ ಚಿತ್ರೋತ್ಸವ ಹಾಗೂ ಇರಾನ್‌ ಚಿತ್ರೋತ್ಸವಗಳಲ್ಲಿ ಭಾಗವಹಿಸಿತ್ತು . 'ನಂದಾ ದೀಪ" ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಹಾಗೂ ಎಂಟು ರಾಜ್ಯ ಪ್ರಶಸ್ತಿಗಳು ಸಂದಿವೆ. ಈ ಚಿತ್ರ ಗುಜರಾತಿಯಲ್ಲೂ ನಿರ್ಮಾಣವಾಗಿದೆ. 'ನಂದಾ ದೀಪ"ದಲ್ಲಿ ಉದಯಕುಮಾರ್‌ ಅಭಿನಯಿಸಿದ್ದ ಪಾತ್ರವನ್ನು ಗುಜರಾತಿಯಲ್ಲಿ ಸಂಜೀವ್‌ಕುಮಾರ್‌ ಪೋಷಿಸಿದ್ದರು.

  ವಾದಿರಾಜ್‌ ಮೂಲತಃ ಉಡುಪಿಯವರು. ಪಣಿಯಾಡಿಯಲ್ಲಿ 1927ರಲ್ಲಿ ಜನಿಸಿದ ವಾದಿರಾಜ್‌- ಗಾಂಧೀಜಿ ಅವರ ವ್ಯಕ್ತಿತ್ವಕ್ಕೆ ಮಾರುಹೋಗಿದ್ದರು. ಒಮ್ಮೆ ಗಾಂಧಿಯನ್ನು ವಾದಿರಾಜ್‌ ಭೇಟಿ ಮಾಡಿದ್ದರಂತೆ. ತಮ್ಮ ತಲೆಯ ಮೇಲೆ ಗಾಂಧೀಜಿ ಕೈಯಿಟ್ಟು ಹರಸಿದುದನ್ನು ವಾದಿರಾಜ್‌ ಸದಾ ಸ್ಮರಿಸುತ್ತಿದ್ದರು.

  ಇತ್ತೀಚಿನ ದಿನಗಳಲ್ಲಿ ವಾದಿರಾಜ್‌ ಸುದ್ದಿಯಲ್ಲಿದ್ದುದು ಕಡಿಮೆ. ಒಂದರ್ಥದಲ್ಲಿ ಅವರದು ವಿಶ್ರಾಂತ ಜೀವನ. ಈಚಿನ ವರ್ಷಗಳಲ್ಲಿ ಎರಡು ಸಂದರ್ಭಗಳಲ್ಲಿ ಅವರು ಸುದ್ದಿಯಲ್ಲಿದ್ದರು. ಒಂದು, 1998-99ರಲ್ಲಿ ಡಾ.ರಾಜ್‌ಕುಮಾರ್‌ ಪ್ರಶಸ್ತಿ ಪಡೆದಾಗ. ಕನ್ನಡ ಚಿತ್ರೋದ್ಯಮಕ್ಕೆ ಗಣನೀಯ ಕೊಡುಗೆ ಸಲ್ಲಿಸಿದ ವ್ಯಕ್ತಿಗಳಿಗೆ ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ಪ್ರಶಸ್ತಿಯಿದು. ಕನ್ನಡಿಗರ ನೆನಪಿನ ಪುಟಗಳಿಂದ ಮಾಸಿಹೋಗಿದ್ದ ಕಲಾವಿದ ವಾದಿರಾಜ್‌ ಈ ಪ್ರಶಸ್ತಿ ಯ ಮೂಲಕ ಮತ್ತೆ ನೆನಪಾಗಿದ್ದರು. ಇದು ಸಂಭ್ರಮದ ಸಂದರ್ಭವಾದರೆ, ಎರಡನೆಯದು ವಿಷಾದದ್ದು :

  ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಮಂಡಳಿ ಸದಸ್ಯರಾಗಿದ್ದ ವಾದಿರಾಜ್‌ ಅವರ ಹೇಳಿಕೆಯಾಂದು ವಿವಾದಕ್ಕೆ ಕಾರಣವಾಗಿತ್ತು . ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಗಳು ರಾಜ್ಯಪ್ರಶಸ್ತಿಗಾಗಿ ಸ್ಪರ್ಧಿಸಬಾರದು ಎಂಬರ್ಥದ

  English summary
  End of an old link! Life and times of Kulla Vadiraj, Kannada cine actor and producer

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X