»   » ನನ್ನ ಪಾಡಿಗೆ ನನ್ನನ್ನು ಬಿಡಿ- ಲತಾ ಮಂಗೇಶ್ಕರ್‌ಲತಾ ಮೊನ್ನೆ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡಿದ್ದರು, ಯಾಕೆ ಗೊತ್ತೆ ?

ನನ್ನ ಪಾಡಿಗೆ ನನ್ನನ್ನು ಬಿಡಿ- ಲತಾ ಮಂಗೇಶ್ಕರ್‌ಲತಾ ಮೊನ್ನೆ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡಿದ್ದರು, ಯಾಕೆ ಗೊತ್ತೆ ?

Subscribe to Filmibeat Kannada

ಮುಖಪುಟ  --> ಸ್ಯಾಂಡಲ್‌ವುಡ್‌  --> ಕನ್ನಡ ಚಿತ್ರ ಕುಟೀರ  --> ವರದಿಮಾರ್ಚ್‌ 06, 2003

ನನ್ನ ಪಾಡಿಗೆ ನನ್ನನ್ನು ಬಿಡಿ- ಲತಾ ಮಂಗೇಶ್ಕರ್‌
ಲತಾ ಮೊನ್ನೆ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡಿದ್ದರು, ಯಾಕೆ ಗೊತ್ತೆ ?

*ದಟ್ಸ್‌ಕನ್ನಡ ಬ್ಯೂರೊ

ಪುಣೆಯ ಆಸ್ಪತ್ರೆಯಲ್ಲಿ ರೆಸ್ಟ್‌ ತೆಗೆದುಕೊಳ್ಳುತ್ತಿರುವ ಲತಾ ಮಂಗೇಶ್ಕರ್‌ ಮೊನ್ನೆ ಸಿಕ್ಕಾ ಪಟ್ಟೆ ಸಿಟ್ಟು ಮಾಡಿಕೊಂಡಿದ್ದರು!

ವೈರಲ್‌ ಫಿವರ್‌ ಅಂತ ಕೆಲ ದಿನಗಳ ಹಿಂದಷ್ಟೇ ಲತಾ ಮಂಗೇಶ್ಕರ್‌ ಆಸ್ಪತ್ರೆಗೆ ದಾಖಲಾಗಿದ್ದರು. ರಾಜ್ಯಸಭೆಯ ಅಧಿವೇಶನಗಳಿಗೆ ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ಆರೋಪವೇ ಅವರ ಅವತ್ತಿನ ಕೆಂಡಮಂಡಲ ಸಿಟ್ಟಿಗೆ ಕಾರಣ. ಅದೂ ಕೂಡ ಬಾಲಿವುಡ್‌ ನಟಿ ಕಮ್‌ ರಾಜ್ಯಸಭಾ ಸದಸ್ಯೆ ಶಬನಾ ಆಜ್ಮಿ ಕೂಡ ಲತಾ ಮಂಗೇಶ್ಕರ್‌ ಅವರ ಗೈರು ಹಾಜರಿಯನ್ನು ಆಕ್ಷೇಪಿಸಿದ್ದು ಲತಾಗೆ ಅವಮಾನ ಮಾಡಿದ ಹಾಗಾಗಿತ್ತು. ಲತಾ ಮುಂದೆ ಶಬಾನಾ ಮೊನ್ನೆ ಮೊನ್ನಿನ ಹುಡುಗಿ ಅಲ್ಲವೇ ?

‘ಹಾಡುವುದನ್ನು ಹೊರತು ಪಡಿಸಿ ಇತರ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳೆಂದರೆ ನಂಗೆ ಅಷ್ಟಕ್ಕಷ್ಟೇ. ಇಷ್ಟಕ್ಕೂ ನಾನೇನು ಮಾಡಿದರೆ ಇವರಿಗೇನು ಕಷ್ಟ ? ನನ್ನ ಪಾಡಿಗೆ ನನ್ನನ್ನು ಬಿಡಬಾರದೇ ... ಜನರ ಮಾತುಗಳನ್ನು ನಾನು ಅಷ್ಟು ಗಂಭೀರವಾಗಿ ಪರಿಗಣಿಸುವುದಿಲ್ಲ . ಆದರೆ ಈ ಬಾರಿ ಯಾಕೋ ಅತಿಯಾಯಿತಪ್ಪ...’ ಎಂದು ಗೊಣಗುವಾಗ ಬೈಯ್ಯುವಾಗ ಟಾಪ್‌ ಗಾಯಕಿಯ ಕಂಠ ಸಿಟ್ಟಿನಿಂದ ದೊರಗಾಗಿತ್ತು.

ಫೆ. 17ರ ಅಧಿವೇಶನವನ್ನು ಮಿಸ್‌ ಮಾಡಿಕೊಂಡಿದ್ದೀರಿ. ನಿಮ್ಮ ಮೇಲಿನ ಆರೋಪದ ಬಗ್ಗೆ ಏನು ಹೇಳ್ತೀರಿ ಅಂತ ಕೇಳಿದರೆ ಲತಾ ಸಮಜಾಯಿಷಿ ನೀಡುವುದು ಹೀಗೆ-

‘ಫೆ. 14 ರಂದು ನಂಗೆ ಎ. ಆರ್‌. ರೆಹಮಾನ್‌ ಅವರೊಂದಿಗೆ ಕಾರ್ಯಕ್ರಮ ನೀಡುವುದಿತ್ತು. ಪೂರ್ವಯೋಜಿತವಾದ ಈ ಕಾರ್ಯಕ್ರಮದ ನಂತರ ಅಧಿವೇಶನಕ್ಕೆ ಹಾಜರಾಗುವುದು ಎಂದು ನಿರ್ಧರಿಸಿದ್ದೆ. ಆದರೆ ನಡುವೆ ನಂಗೆ ಆ್ಯಕ್ಸಿಡೆಂಟ್‌ ಆಗಿ ಬೆನ್ನು ನೋವು ಕಾಣಿಸಿಕೊಂಡಿತು. ನಂತರ ಈ ವೈರಲ್‌ ಫಿವರ್‌ ಬೇರೆ. ವೈದ್ಯರ ಸಲಹೆ ಮೇರೆಗೆ ನಾನು ಅಧಿವೇಶನಕ್ಕೆ ಹಾಜರಾಗದೇ ಇರಬೇಕಾಯಿತು. ಇಷ್ಟಕ್ಕೂ ಈ ಎಲ್ಲದರಿಂದ ಶಬಾನಾ ಆಜ್ಮಿಗೇನು ತೊಂದರೆಯಾಯ್ತು ? ನಂಗೆ ನನ್ನ ಕರ್ತವ್ಯ ಏನು ಅಂತ ಗೊತ್ತಿದೆ’ ಎಂದು ಮುಗುಮ್ಮಾಗಿ ಹೇಳಿದರು.

‘ಸಂಗೀತವೊಂದೇ ನನ್ನ ಬದುಕಿನ ಧ್ಯೇಯ. ನಾನು ಹಾಡುಗಾರ್ತಿ ಮತ್ತು ಸಂಗೀತವನ್ನು ನಾನು ಚೆನ್ನಾಗಿ ಬಲ್ಲೆ. ನಾನು ರಾಜ್ಯ ಸಭೆಯಲ್ಲಿ ಕುಳಿತು ಏನು ಮಾಡಲಿ ? ಪ್ರಾಮಾಣಿಕವಾಗಿ ಹೇಳಬೇಕಿದ್ದರೆ ನಾನು ಅಲ್ಲಿ ಸುಮ್ಮನೇ ಕುಳಿತುಕೊಳ್ಳುವುದಕ್ಕಷ್ಟೇ ಹೋಗುತ್ತೇನೆ. ಈ ಪ್ರತಿಷ್ಠಿತ ಗೌರವದ ಬಗ್ಗೆ ನನಗೆ ಆಸಕ್ತಿಯೇ ಇರಲಿಲ್ಲ. ನಾನು ತುಂಬಾ ಗೌರವಿಸುವ ವ್ಯಕ್ತಿಯಾಬ್ಬರು ಒತ್ತಾಯಿಸಿದ್ದಕ್ಕೆ ಮಾತ್ರ ಈ ಗೌರವವನ್ನು ಒಪ್ಪಿಕೊಂಡಿದ್ದೇನೆ. ಮುಂದಿ ಕ್ರಮದ ಬಗ್ಗೆಯೂ ನಾನು ಅವರಲ್ಲಿ ಚರ್ಚೆ ನಡೆಸಿಯೇ ನಿರ್ಧಾರಕ್ಕೆ ಬರುತ್ತೇನೆ’ ಎಂದರು ಲತಾ ಮಂಗೇಶ್ಕರ್‌.


ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...