»   » 80ಚಿತ್ರಗಳ ಖ್ಯಾತ ತಮಿಳು ನಿರ್ದೇಶಕ ಕೆ.ಶಂಕರ್‌ ಇನ್ನಿಲ್ಲ

80ಚಿತ್ರಗಳ ಖ್ಯಾತ ತಮಿಳು ನಿರ್ದೇಶಕ ಕೆ.ಶಂಕರ್‌ ಇನ್ನಿಲ್ಲ

Posted By:
Subscribe to Filmibeat Kannada


ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಸಿನಿಮಾಗಳನ್ನು ನಿದೇಶಿಸಿದ್ದ ಶಂಕರ್‌, ತಮಿಳುನಾಡು ಸರ್ಕಾರ ನೀಡುವ ರಾಜಾ ಸಂದೌ ಪ್ರಶಸ್ತಿಗೂ ಪಾತ್ರರಾಗಿದ್ದರು.

ಖ್ಯಾತ ನಿರ್ದೇಶಕ ಹಾಗೂ ಸಂಕಲನಕಾರ ಕೆ.ಶಂಕರ್‌(80) ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ, ನಾಲ್ವರು ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಎವಿಎಂ ಸ್ಟುಡಿಯೋದಲ್ಲಿ ತಮಿಳು ಸಿನಿಮಾ ಸಂಕಲನಕಾರನಾಗಿ ಅವರು ಚಿತ್ರರಂಗ ಪ್ರವೇಶಿಸಿದರು. ಆನಂತರ ‘ಡಾಕ್ಟರ್‌’ ಸಿನಿಮಾ ಮೂಲಕ ನಿದೇಶಕರಾಗಿ ಚಿತ್ರೋದ್ಯಮಕ್ಕೆ ಪರಿಚಿತರಾದರು.

ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಸಿನಿಮಾಗಳನ್ನು ನಿದೇಶಿಸಿದ್ದ ಅವರು, ತಮಿಳುನಾಡು ಸರ್ಕಾರ ನೀಡುವ ರಾಜಾ ಸಂದೌ ಪ್ರಶಸ್ತಿಗೂ ಪಾತ್ರರಾಗಿದ್ದರು.

ತಮಿಳುನಾಡು ಮಾಜಿ ಮುಖ್ಯಮಂತ್ರಿ-ಖ್ಯಾತನಟ ದಿವಂಗತ ಎಂ.ಜಿ.ರಾಮಚಂದ್ರನ್‌ ಅಭಿನಯದ ಕುದಿಯಿರುಂತ ಕೋಯಿಲ್‌, ಅಡಿಮೈ ಪೆಣ್‌ ಹಾಗೂ ಹಾಲಿ ಮುಖ್ಯಮಂತ್ರಿ-ಖ್ಯಾತನಟಿ ಜಯಲಲಿತಾ ಅಭಿನಯದ ಗೌರಿಕಲ್ಯಾಣಂನಂತಹ ಭರ್ಜರಿ ಯಶಸ್ಸು ಕಂಡ ಚಿತ್ರಗಳನ್ನು ನಿದೇಶಿಸಿದ್ದರು.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ-ಸುಪ್ರಸಿದ್ಧ ನಟ ದಿವಂಗತ ಎನ್‌.ಟಿ.ರಾಮರಾವ್‌ ಅಭಿನಯದ ತೆಲುಗು ಪೌರಾಣಿಕ ಚಿತ್ರ ಭೂಕೈಲಾಸವನ್ನೂ ಅವರು ನಿರ್ದೇಶಿಸಿದ್ದರು.

ತಾಯ್‌ ಮೂಕಾಂಬಿಕೈ, ವರವಾನ್‌ ವಡಿವೇಲನ್‌ ಮೊದಲಾದ ಚಿತ್ರಗಳು ಶಂಕರ್‌ ಅವರಿಗೆ ಭಾರೀ ಜನಪ್ರಿಯತೆ ತಂದುಕೊಟ್ಟಿದ್ದವು.

Post your views

ಮುಖಪುಟ / ಸ್ಯಾಂಡಲ್‌ವುಡ್‌

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X