»   » ನೀವು ಊಹಿಸಲಾಗದ ಮೆಗಾ ಸಿನಿಮಾಕ್ಕೆ ಭರದ ಸಿದ್ಧತೆ!

ನೀವು ಊಹಿಸಲಾಗದ ಮೆಗಾ ಸಿನಿಮಾಕ್ಕೆ ಭರದ ಸಿದ್ಧತೆ!

Subscribe to Filmibeat Kannada


ಕನಸುಗಾರ ರವಿಚಂದ್ರನ್‌ ಹೊಸ ಕನಸುಗಳನ್ನು ಹೊಸೆಯುತ್ತಿದ್ದಾರೆ! ಇದು ಯಾರೂ ಊಹಿಸದ ಕನಸು... ದಾಖಲೆ ಬರೆಯುವಂತಹ ಕನಸು... ಕನ್ನಡ ಚಿತ್ರೋದ್ಯಮದ ಒಗ್ಗಟ್ಟು ಬಿಂಬಿಸುವ ಕನಸು... ಕನಸುಗಾರನ ಈ ಸಿನಿಮಾದಲ್ಲಿ ಒಬ್ಬರಲ್ಲ ಇಬ್ಬರಲ್ಲ 260ಕಲಾವಿದರ ದಂಡೇ ಇರುತ್ತದೆಯಂತೆ! ಅಬ್ಬಬ್ಬಾ!!!

ಈ ಚಿತ್ರದ ಹೆಸರು ‘ಮದುವೆಮನೆ’. ಇದು ರವಿಚಂದ್ರನ್‌ ವೃತ್ತಿಬದುಕಿನ ಮಹೋನ್ನತ ಕನಸು. ಈ ಚಿತ್ರವನ್ನು ಕನ್ನಡ ಚಿತ್ರೋದ್ಯಮವೇ ನಿರ್ಮಿಸಿ, ನಿರ್ದೇಶಿಸುತ್ತಿದೆ. ನಿರ್ಮಾಣ ವೆಚ್ಚ ಸುಮಾರು 9ಕೋಟಿ ರೂಪಾಯಿ. ಚಿತ್ರಕ್ಕೆ ಬಂಡವಾಳ ಹೂಡಲು ಮೋಸರ್‌ ಬೇರ್‌ ಸಂಸ್ಥೆ ಮುಂದೆ ಬಂದಿದೆ. ಒಂದು ವಿಶೇಷವೆಂದರೆ, ಚಿತ್ರ ನಿರ್ಮಾಣದಲ್ಲಿ ಪಾಲ್ಗೊಳ್ಳುವ ಯಾರಿಗೂ ಸಂಭಾವನೆ ಇಲ್ಲ. ಜುಲೈ ತಿಂಗಳಲ್ಲಿ ಮುಹೂರ್ತ ನಡೆಯಲಿದೆ. ಇಷ್ಟು ಮಾಹಿತಿಗಳು ಸದ್ಯಕ್ಕೆ ಎಲ್ಲೆಡೆ ಚರ್ಚಿತ.

ಮದುವೆಮನೆಯಲ್ಲಿ ಬಂಧುಮಿತ್ರರೆಲ್ಲಾ ಒಟ್ಟಾಗಿ ಸಂಭ್ರಮಿಸುವ ರೀತಿಯಲ್ಲೇ, ಉದ್ಯಮದ ಸದಸ್ಯರು ಸಂಭ್ರಮದಿಂದ ಪಾಲ್ಗೊಳ್ಳಲಿದ್ದಾರೆ. ಒಟ್ಟು 260 ಕಲಾವಿದರು ಚಿತ್ರದಲ್ಲಿ ನಟಿಸುವ ಕುರಿತು ಮಾತುಗಳು ಕೇಳಿ ಬಂದಿವೆ. ಈ ಎಲ್ಲಾ ಕಲಾವಿದರಿಗೂ ಅವಕಾಶವಾಗುವಂತೆ ಕತೆ---ಚಿತ್ರಕತೆ ರಚಿಸುವ ಕೆಲಸಕ್ಕಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದೆ.

ತಂಡದ ಪರಿಚಯ :

  • ಮೊದಲ ತಂಡ -ಟಿ.ಎಸ್‌.ನಾಗಾಭರಣ, ದಿನೇಶ್‌ ಬಾಬು, ಪಿ.ಎಚ್‌.ವಿಶ್ವನಾಥ್‌, ಬಿ.ಸುರೇಶ್‌.
  • ಎರಡನೇ ತಂಡ -ಮಹೇಂದರ್‌, ಬಿ.ಎ.ಮಧು, ಅಜಯ್‌ ಕುಮಾರ್‌, ಶಶಾಂಕ್‌.
  • ಮೂರನೇ ತಂಡ -ಯೋಗರಾಜ್‌ ಭಟ್‌, ಸೂರಿ, ಪ್ರೀತಮ್‌, ರಂಗನಾಥ್‌.
  • ನಾಲ್ಕನೇ ತಂಡ -ಕೆ.ವಿ.ರಾಜು, ಎಂ.ಎಸ್‌. ರಮೇಶ್‌, ನಂಜುಂಡ, ಆರ್ಯ.
ಈ ಚಿತ್ರದ ಬಗ್ಗೆ ಆಸಕ್ತಿ ತೋರಿರುವ ನಿರ್ದೇಶಕರ ಸಂಘ, ಕಲಾವಿದರ ಸಂಘ ಹಾಗೂ ಚಿತ್ರ ಸಾಹಿತಿಗಳ ಸಂಘ ಉಚಿತವಾಗಿ ಕೆಲಸ ಮಾಡಲು ಒಪ್ಪಿಕೊಂಡಿವೆ. ಈ ಚಿತ್ರದಿಂದ ಬರುವ ಲಾಭವನ್ನು ಸ್ಯಾಂಡಲ್‌ವುಡ್‌ ಕಲ್ಯಾಣಕ್ಕೆ ಬಳಸಿಕೊಳ್ಳುವ ಮಾತುಗಳು ಕೇಳಿ ಬರುತ್ತಿವೆ.

ಎಲ್ಲವೂ ಅಂದುಕೊಂಡಂತೆಯೇ ಆದರೆ, ಸ್ಯಾಂಡಲ್‌ವುಡ್‌ ಪ್ರಕಾಶಿಸಲಿದೆ... ಭಾರತೀಯ ಚಿತ್ರರಂಗ ಸಾಕ್ಷಿಯಾಗಲಿದೆ! ದೂರದಲ್ಲಿರುವ ಅಣ್ಣಾವ್ರು, ಅಲ್ಲಿಂದಲೇ ಹರ್ಷದ ಕಣ್ಣೀರು ಸುರಿಸುತ್ತಾರೆ...

ಈ ಚಿತ್ರದ ಬಗ್ಗೆ ಓದುಗರು ಅಭಿಪ್ರಾಯ ಬರೆಯಬಹುದು...

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada