»   » ಚಿತ್ರ ಸಿನಿಮಾದ ಗುರುಕಿರಣ್‌ ಅತ್ಯುತ್ತಮ ಸಂಗೀತ ನಿರ್ದೇಶಕ

ಚಿತ್ರ ಸಿನಿಮಾದ ಗುರುಕಿರಣ್‌ ಅತ್ಯುತ್ತಮ ಸಂಗೀತ ನಿರ್ದೇಶಕ

Posted By: Super
Subscribe to Filmibeat Kannada

ಚೆನ್ನೈ : ದಕ್ಷಿಣ ಭಾರತದ ಭಾಷೆಗಳ 49 ನೇ ವಾರ್ಷಿಕ ಫಿಲಂಫೇರ್‌ ಪ್ರಶಸ್ತಿಗಳು ಪ್ರಕಟವಾಗಿದ್ದು , ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ನಿರ್ದೇಶನದ ಕೋತಿಗಳು ಸಾರ್‌ ಕೋತಿಗಳು ಸಿನಿಮಾ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ.

ಪ್ರಸ್ತುತ ಶತ ದಿನೋತ್ಸವ ಸಂಭ್ರಮದಲ್ಲಿರುವ ಕೋತಿಗಳು ಸಾರ್‌.. ಚಿತ್ರಕ್ಕೆ ಫಿಲಂಫೇರ್‌ ಪ್ರಶಸ್ತಿ ಕೋಡು ಮೂಡಿಸಿದೆ. ನಿರ್ಮಾಪಕರಾದ ಜೈ ಜಗದೀಶ್‌ ಹಾಗೂ ವಿಜಯಲಕ್ಷ್ಮಿ ಸಿಂಗ್‌ ಕೋತಿಗಳು ಸಾರ್‌ ಚಿತ್ರಕ್ಕಾಗಿ ಫಿಲಂಫೇರ್‌ ಪ್ರಶಸ್ತಿ ಪಡೆದಿದ್ದಾರೆ.

ಕೋತಿಗಳು ಸಾರ್‌ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿದ್ದರೂ, ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ದೊರೆತಿರುವುದು ನನ್ನ ಪ್ರೀತಿಯ ಹುಡುಗಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರಿಗೆ. ಹುಚ್ಚ ಚಿತ್ರದ ಅಭಿನಯಕ್ಕಾಗಿ ಸುದೀಪ್‌ ಹಾಗೂ ಕನಸುಗಾರ ಚಿತ್ರದ ಶ್ರೇಷ್ಠ ಅಭಿನಯಕ್ಕಾಗಿ ಪ್ರೇಮ ಅವರು ಅತ್ಯುತ್ತಮ ನಟ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಚಿತ್ರ ಚಿತ್ರದ ಸಂಗೀತಕ್ಕಾಗಿ ಗುರುಕಿರಣ್‌ ಅವರ ಪಾಲಾಗಿದೆ. ಏಪ್ರಿಲ್‌ 20 ರಂದು ಚೆನ್ನೈನ ಜವಾಹರ್‌ಲಾಲ್‌ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಫಿಲಂಫೇರ್‌ ಪ್ರಶಸ್ತಿ ಪಡೆದ ಇತರ ಭಾಷಾ ಚಿತ್ರಗಳ ವಿವರ :

ತಮಿಳು
ಉತ್ತಮ ಚಿತ್ರ : ಆನಂದಂ
ಉತ್ತಮ ನಿರ್ದೇಶನ : ಚೇರನ್‌ (ಪಾಂಡವರ್‌ ಭೂಮಿ)
ಉತ್ತಮ ನಟ : ವಿಕ್ರಮ್‌ (ಕಾಸಿ)
ಉತ್ತಮ ನಟಿ : ಲೈಲಾ (ನಂದಾ)
ಸಂಗೀತ ನಿರ್ದೇಶಕ : ಹ್ಯಾರಿಸ್‌ ಜೈರಾಜ್‌ (ಮಿನ್ನಲೇ)

ಮಲಯಾಳಂ
ಉತ್ತಮ ಚಿತ್ರ : ಮೇಘ ಮಲ್ಹಾರ್‌
ಉತ್ತಮ ನಿರ್ದೇಶನ : ವಿನಯನ್‌ (ಕರುಮಾಡಿಕುಟ್ಟನ್‌)
ಉತ್ತಮ ನಟ : ಜಯರಾಮ್‌ (ತೀರ್ಥದಾನಮ್‌)
ಉತ್ತಮ ನಟಿ : ಸಂಯುಕ್ತಾ ವರ್ಮಾ (ಮೇಘ ಮಲ್ಹಾರ್‌)
ಸಂಗೀತ ನಿರ್ದೇಶಕ : ಸುರೇಶ್‌ ಪೀಟರ್ಸ್‌ (ರಾವಣ ಪ್ರಭು)

ತೆಲುಗು
ಉತ್ತಮ ಚಿತ್ರ : ನುವ್ವು ನೇನು
ಉತ್ತಮ ನಿರ್ದೇಶನ : ತೇಜ (ನುವ್ವು ನೇನು)
ಉತ್ತಮ ನಟ : ಉದಯಕಿರಣ್‌ (ನುವ್ವು ನೇನು)
ಉತ್ತಮ ನಟಿ : ಭೂಮಿಕಾ (ಖುಷಿ)
ಸಂಗೀತ ನಿರ್ದೇಶಕ : ಆರ್‌.ಪಿ.ಪಟ್ನಾಯಕ್‌ (ನುವ್ವು ನೇನು)
(ಇನ್ಫೋ ವಾರ್ತೆ)

English summary
Filmfare award for Kothigau Saar Kothigalu

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada