»   » ಕೈತುಂಬಾ ಸಾಲ. ನಿರ್ದೇಶಕ ಗಂಡನೂ ತಣ್ಣಗಾದರೆ, ರೋಜಾ ತಾನೆ ಇನ್ನೇನು ಮಾಡೋಕಾಗುತ್ತೆ. ಒಂದು ಕಾಲದ ಗ್ಲ್ಯಾಮರ್‌ ತಾರೆ ಈಗ ಅಮ್ಮನ ಪಾತ್ರಧಾರಿ.

ಕೈತುಂಬಾ ಸಾಲ. ನಿರ್ದೇಶಕ ಗಂಡನೂ ತಣ್ಣಗಾದರೆ, ರೋಜಾ ತಾನೆ ಇನ್ನೇನು ಮಾಡೋಕಾಗುತ್ತೆ. ಒಂದು ಕಾಲದ ಗ್ಲ್ಯಾಮರ್‌ ತಾರೆ ಈಗ ಅಮ್ಮನ ಪಾತ್ರಧಾರಿ.

Subscribe to Filmibeat Kannada

ನಿರ್ದೇಶಕ ಸೆಲ್ವಮಣಿ ಜೊತೆ ಮದುವೆಯಾದದ್ದೇ ರೋಜಾ ನಸೀಬು ಬದಲಾಗಿದೆ. ನಿಜ ಜೀವನದಲ್ಲಿ ಇನ್ನೂ ಅಮ್ಮನಾಗಿರದ ರೋಜಾಗೆ ಈಗ ಬರೀ ಅಮ್ಮನ ಪಾತ್ರಕ್ಕೆ ಕರೆಯೋಲೆಗಳು ಬರುತ್ತಿರುವುದರಿಂದ ಆಕೆಗೆ ಬಹಳ ಬೇಜಾರಾಗಿದೆ.

ಹ್ಯಾಪುಮೋರೆ ಹಾಕಿಕೊಂಡು ಮನೆಯ ಪ್ರಾಂಗಣದಲ್ಲಿ ರೋಜಾ ಏನೋ ಯೋಚಿಸುತ್ತಾ ಅಡ್ಡಾಡುತ್ತಿದ್ದಾಗ ಹಾಗೇ ಸುಖಾ ಸುಮ್ಮನೆ ಕಷ್ಟ ತೋಡಿಕೊಂಡರು. ..

‘ಒಂದು ಕಾಲದಲ್ಲಿ ನನ್ನ ಜೊತೆ ಮರ ಸುತ್ತಿದ ನಾಯಕರಿಗೆ ಅಮ್ಮನಾಗಿ ಈಗ ನಾನು ನಟಿಸಬೇಕಂತೆ. ತಪ್ಪು ನನ್ನದೇ. ಅಪರೂಪಕ್ಕೆ ಆ್ಯಂಟಿ ಪಾತ್ರಕ್ಕೆ ಒಪ್ಪಿಕೊಂಡೆ. ಆಮೇಲೆ ಶರತ್‌ಕುಮಾರ್‌ ಸಿನಿಮಾದಲ್ಲಿ ಪಾತ್ರ ತೂಕವಾಗಿತ್ತು ಅನ್ನುವ ಕಾರಣಕ್ಕೆ ಅಮ್ಮನ ಪಾತ್ರ ಮಾಡಿದೆ. ಆದರೀಗ ಅದೇ ನನಗೆ ಮುಳುವಾಗಿದೆ. ಹಾಗಂತ ನಾನು ಸಿಗುವ ಅಮ್ಮನ ಪಾತ್ರಗಳನ್ನೂ ಬಿಡೋಕಾಗುತ್ತಿಲ್ಲ. ಕೈತುಂಬಾ ಸಾಲ ಇದೆ. ಅದನ್ನು ತೀರಿಸೋಕೆ ನಾನು ಹಣ ಸಂಪಾದಿಸಲೇಬೇಕು. ಈ ಸಿನಿಮಾ ಜಗತ್ತೇ ಹೀಗೆ’.

ರೋಜಾಗೆ ಒಂದು ಸಮಾಧಾನ ಅಂದರೆ, ತಮಿಳು- ತೆಲುಗಿನವರು ಅಮ್ಮನ ಪಾತ್ರ ಕೊಟ್ಟರೇನಂತೆ, ಕನ್ನಡದವರು ನಾಯಕಿ ಪಾತ್ರಕ್ಕೆ ಹುಡುಕಿಕೊಂಡು ಬಂದೇ ಬರುತ್ತಾರೆ ಅನ್ನುವ ನಂಬಿಕೆ. ರೋಜಾ ರೇಟು ತಗ್ಗಿದೆ ಅನ್ನೋದು ಗೊತ್ತಾದರೆ ಕನ್ನಡ ನಿರ್ಮಾಪಕರು ತಮಿಳುನಾಡಿಗೆ ಹೋಗಿ ಆಕೆಯ ಮನೆಯ ಕದ ತಟ್ಟುವ ದಿನ ದೂರವಿಲ್ಲ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada