»   » ‘ಬೇಡರ ಕಣ್ಣಪ್ಪ’ 50 ರ ಬೆಡಗು !

‘ಬೇಡರ ಕಣ್ಣಪ್ಪ’ 50 ರ ಬೆಡಗು !

Posted By: ಸುಕನ್ಯಾ ಪಿ.
Subscribe to Filmibeat Kannada

'ನಾನು ಇನ್ನು ಅಭಿನಯಿಸಿದರೆ ಯಾವುದಾದರು ಅಂಗವಿಕಲನ ಪಾತ್ರ ಮಾಡಬೇಕಷ್ಟೆ " ಎಂದು ವಿನಮ್ರವಾಗಿ ಭಕ್ತನಂತೆ ನುಡಿದವರು ಮತ್ತ್ಯಾರೂ ಅಲ್ಲ ! ಕನ್ನಡದ ಮೇರುನಟ , -ನ-ಟಸಾರ್ವಭೌಮ, ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ.ರಾಜ್‌ ಕುಮಾರ್‌.

ರಾಜ್‌ಗೆ ಈಗ 76ರ ಹರೆಯ. ಈ ವಯಸ್ಸಲ್ಲೂ ಅವರ ಮನಸ್ಸು ತುಡಿಯುತ್ತಿರುವುದು, ಪೂರ್ಣ ಸಾಮ-ರ್ಥ್ಯ-ವ-ನ್ನು ಬೇ-ಡು-ವಂ-ಥ ಪಾತ್ರ-ಗ-ಳ-ತ್ತ-ಲೇ. ಆ ಕಾರ-ಣ-ದಿಂ-ದ-ಲೇ 'ಭಕ್ತ ಅಂಬರೀಶ"-ನಿ-ಗೆ ಇನ್ನೂ ಮೋಕ್ಷ ಒದ-ಗಿ ಬಂದಿ-ಲ್ಲ .

ರಾಜ್‌ ಈ ಮಾತನ್ನು ಹೇಳುವಾಗ ಹಳೆ ನೆನಪುಗಳು ಗರಿ ಗೆದರುತ್ತವೆ. ರಾಜ್‌ ಚಿತ್ರರಂಗಕ್ಕೆ ಬಂದು 'ಅರ್ಧ ಶತಮಾನ " ವಾಗುತ್ತಿದೆ. 1954ರಲ್ಲಿ 'ಬೇಡರಕಣ್ಣಪ್ಪ " ಚಿತ್ರದ ಭಕ್ತಿ ಪ್ರಧಾನ 'ಕಣ್ಣಪ್ಪ " ಪಾತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ರಾಜ್‌ ಮತ್ತೆ ಹಿಂತಿರುಗಿ ನೋಡಿದ್ದಿಲ್ಲ. ಅವರ ಮೊದಲ ಚಿತ್ರಕ್ಕೆ ಈಗ 50ರ ಹರೆಯ. ಕನ್ನ-ಡಿ-ಗ-ರು ಖುಷಿ ಪಡ-ಲಿ-ಕ್ಕೆ ಇನ್ನೇ-ನು ಬೇಕು ?

ಅರ್ಧಶತಮಾನದ ಹಿಂದೆ....
ಬಾಲ್ಯದಿಂದಲೇ ಮುತ್ತು ರಾಜ್‌ ತಮ್ಮ ತಂದೆ ಪುಟ್ಟಸ್ವಾಮಯ್ಯರೊಂದಿಗೆ ಗುಬ್ಬಿ ವೀರಣ್ಣ ಕಂ-ಪನಿಯಲ್ಲಿ ಅಭಿನಯಿಸುತ್ತಿದ್ದರು. ಆಗಿನ ಕಾಲಕ್ಕೆ ಗುಬ್ಬಿ ವೀರಣ್ಣ ಕಂ-ಪನಿಯ ನಟ ತ್ರಿಮೂರ್ತಿಗಳೆಂದೇ ಖ್ಯಾತರಾದವರು ಬಿ.ವಿ.ಕಾರಂತ, ರಾಜ್‌ ಮತ್ತು ವಾಸುದೇವರಾವ್‌.

ಅದೊಂದು ದಿನ ತಂದೆಯ ಮರಣ ಹಾಗೂ ತನ್ನ ಭವಿಷ್ಯದ ಚಿಂತೆಯಲ್ಲಿ ಬಸ್ಸಲ್ಲಿ ಸಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದ ರಾಜ್‌ಗೆ ಎಚ್‌.ಎಲ್‌.ಎನ್‌.ಸಿಂಹ ಸಿಗುತ್ತಾರೆ. ಅವರು ರಾಜ್‌ ತಂದೆಯ ಆಪ್ತ ಸ್ನೇಹಿತ.

'ಗುಣ ಸಾಗರಿ" ಚಿತ್ರದ ಯಶಸ್ಸಿನಿಂದ ಪುಳಕಿತಗೊಂಡ ಗುಬ್ಬಿವೀರಣ್ಣ (ಕರ್ನಾಟಕ ಗುಬ್ಬಿ ಫಿಲಂಸ್‌) 'ಬೇಡರ ಕಣ್ಣಪ್ಪ" ಚಿತ್ರ ತಯಾರಿಕೆಗೆ ಅಣಿಯಾಗುತ್ತಿದ್ದರು. ಚಿತ್ರದ ನಾಯಕ 'ಕಣ್ಣಪ್ಪ"ನ ಪಾತ್ರಕ್ಕೆ ಭಕ್ತಿ-ವಿನಯದ, ಗಟ್ಟಿ-ಮುಟ್ಟಾದ, ಸ್ಪುರದ್ರೂಪಿ ಯುವಕನನ್ನು ಹುಡುಕಿಕೊಡಲು ಸಿಂಹರಿಗೆ ಹೇಳಿದ್ದರಂತೆ. ಪಾತ್ರಧಾರಿಯ ಹುಡುಕಾಟದಲ್ಲಿದ್ದ ಸಿಂಹ ಅವರಿಗೆ ಬಸ್ಸಲ್ಲಿ ಸಿಕ್ಕ ರಾಜ್‌ ಮೇಲೆ ಮನಸ್ಸು ಹರಿಯಿತು. ಮೊದಲೇ ಸ್ನೇಹಿತನ ಪುತ್ರ. ಅಭಿನಯ ಕಣ್ಣಾರೆ ಕಂಡಾಗಿದೆ. ಬಾಕಿ ಉ-ಳಿ-ದಿ-ದ್ದು ಸ್ಕಿೃೕನ್‌ ಟೆಸ್ಟ್‌ ಮಾತ್ರ !

ಅದಕ್ಕಾಗಿ ರಾಜ್‌ಗೆ ಮದರಾಸಿಗೆ ಬುಲಾವು ಬಂತು. ರಾಜ್‌ ಪಾಸಾದರು. ಅಂದಿನ ಮುತ್ತುರಾಜ್‌, ಸಿಂಹ ಕೃಪೆಯಿಂದ ರಾಜ್‌ಕುಮಾರ್‌ ಆದರು. ಬೇಡ-ರ ಕಣ್ಣ-ಪ್ಪ ಚಿತ್ರ ಸೆಟ್ಟೇರಿತು. ಕಾಲಕ್ಕೆ ತಕ್ಕಂತೆ ಮೆಗಾಹಿಟ್‌ ಆಯಿತು. ಈ ರಾಜಕುಮಾರನನ್ನ 'ಸ್ಟಾರ್‌"ಪದವಿ ಬೆನ್ನು ಹತ್ತಿತು. ಭಕ್ತಿ, ಸಾಂಸಾರಿಕ, ಸಾಮಾಜಿಕ ಹೀಗೆ 50 ವರ್ಷಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದರು. 1956ರಲ್ಲಿ 'ಮಹಿಷಾಸುರ ಮರ್ದಿನಿಯ" ಮೂಲಕ ಹಿನ್ನಲೆ ಗಾಯಕರೂ ಆದರು.

... ಐವತ್ತು ವರ್ಷಗಳು ಕಳೆದು ಹೋದವು. ಮತ್ತೆ ಅಣ್ಣಾವ್ರು 'ಭಕ್ತಿ ಪ್ರಧಾನ" ಚಿತ್ರ 'ಭಕ್ತ ಅಂಬರೀಷ "ದಲ್ಲಿ ಬರುತ್ತಾರೆಂದು ಅಭಿಮಾನಿ ದೇವರುಗಳು ಕಾದಿದ್ದಾರೆ. ಈ ಸುವರ್ಣಮಹೋತ್ಸವದ ಸಂಭ್ರಮ ಆಚರಿಸುವ ನೆನಪು ಯಾರಿಗಾದರು ಆಗಿದೆಯೇ......

English summary
Golden jubilee of Dr.raj kumar's screen life. From bedara kannappa to Shabdavedi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada