»   » ಮಲಯಾಳಂ ಕಿರುತೆರೆಯಲ್ಲಿ ಶ್ರುತಿ!

ಮಲಯಾಳಂ ಕಿರುತೆರೆಯಲ್ಲಿ ಶ್ರುತಿ!

Posted By:
Subscribe to Filmibeat Kannada

ತಾಯಿ, ತವರು, ತಂಗಿ, ಮಗಳು ಎಂದಾಗ ಎಲ್ಲರಿಗೂ ತಕ್ಷಣ ನೆನಪಾಗುವುದು ಶ್ರುತಿ. ತಮ್ಮ ಚಿತ್ರಗಳಲ್ಲಿ ಲೀಟರ್‌ಗಟ್ಟಲೇ ಕಣ್ಣೀರು ಸುರಿಸಿ, ನಿರ್ಮಾಪಕರ ಕಿಸೆ ತುಂಬಿಸುತ್ತಿದ್ದ ಶ್ರುತಿ, ಮದುವೆ ನಂತರ ಮನೆ ಸೇರಿದ್ದರು. ವೃತ್ತಿ ಬದುಕಿನ ಎರಡನೇ ಹಂತದಲ್ಲಿ ಈಗ ಕಿರುತೆರೆಯತ್ತ ಮುಖ ಮಾಡಿದ್ದಾರೆ.

ಮಲಯಾಳಂನ ಸೂರ್ಯ ಟೀವಿಯಲ್ಲಿ ಪ್ರಸಾರವಾಗುವ ‘ಸ್ತ್ರಿತ್ವ’ ಮೆಗಾ ಧಾರವಾಹಿಯಲ್ಲಿ ಶ್ರುತಿ ನಟಿಸುತ್ತಿದ್ದಾರೆ. ಪ್ರತಿ ರಾತ್ರಿ 7.30ಕ್ಕೆ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಶ್ರುತಿ ಕನ್ನಡ ಕಿರುತೆರೆಯನ್ನು ಬಿಟ್ಟು ಮಲಯಾಳಂ ಧಾರವಾಹಿಗಳನ್ನು ಯಾಕೆ ಆಯ್ಕೆ ಮಾಡಿಕೊಂಡರು ಎನ್ನುವ ಪ್ರಶ್ನೆಗೆ ಅವರೇನೂ ಸ್ಪಷ್ಟವಾಗಿ ಉತ್ತರಿಸಿಲ್ಲ. ಆದರೆ ಸ್ತ್ರೀ ಧಾರಾವಾಹಿ ಮೂಲಕ ಮಲಯಾಳಿಗಳ ಮನಗೆದ್ದ ವಿನಯಪ್ರಸಾದ್‌, ಶ್ರುತಿಗೆ ಮಾದರಿಯಾಗಿದ್ದರೂ ಅಚ್ಚರಿಯೇನಿಲ್ಲ.

ಈ ಹಿಂದೆ ಮಲಯಾಳಂ ನಟ ಮುಮ್ಮಟ್ಟಿ ಜೊತೆ ‘ಒರಾಲ್‌ ಮಾತ್ರಂ’, ಜಯರಾಂ ಜೊತೆ ‘ಕೊಟ್ವಾರಂ ವೀಟಿಲೆ ಅಪ್ಪುಕುಟ್ವನ್‌’ ಚಿತ್ರಗಳಲ್ಲಿ ಅವರು ನಟಿಸಿದ್ದರು. ಒಟ್ಟಿನಲ್ಲಿ ಮಾಜಿ ನಟಿಮಣಿಗಳಿಗೆ ವೇದಿಕೆಯಾಗಿರುವ ಕಿರುತೆರೆ, ಈಗಾಗಲೇ ಸರಿತಾ, ಗೀತಾ, ಭಾನುಪ್ರಿಯ, ಸುಧಾರಾಣಿ, ವಿಜಯಲಕ್ಷ್ಮಿ ಮತ್ತಿತರ ನಟಿಯರಿಗೆಲ್ಲಾ ವೇದಿಕೆ ಕಲ್ಪಿಸಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada