For Quick Alerts
  ALLOW NOTIFICATIONS  
  For Daily Alerts

  ‘ಸುಂಟರಗಾಳಿ’ ಜೋಡಿ ಜೊತೆ ರಾಧಿಕಾ

  By Staff
  |

  ಸುಂಟರಗಾಳಿ ಜೋಡಿ ದರ್ಶನ್‌, ರಕ್ಷಿತಾ ಮತ್ತು ನಿರ್ದೇಶಕ ಓಂ ಪ್ರಕಾಶ್‌ರಾವ್‌ ಕಾಂಬಿನೇಷನ್‌ನಲ್ಲಿ ಮತ್ತೊಂದು ಹೊಸ ಚಿತ್ರ ಸೆಟ್ಟೇರಿದೆ.

  ಓಂ ಪ್ರಕಾಶ್‌ರಾವ್‌ ನಿರ್ಮಿಸಿ, ನಿದೇಶಿಸುತ್ತಿರುವ ಈ ಚಿತ್ರದ ಹೆಸರು ‘ಮಂಡ್ಯ’. ದರ್ಶನ್‌ ಜೋಡಿಯಾಗಿ ರಕ್ಷಿತಾ ಜೊತೆ ರಾಧಿಕಾ ಸಹಾ ನಟಿಸುತ್ತಿದ್ದಾರೆ. ಹೀಗಾಗಿ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ತೀವ್ರ ಕುತೂಹಲವಿದೆ.

  ಕಳೆದ ಹದಿನೈದು ವರ್ಷಗಳಿಂದ ಗಾಂಧಿನಗರದಲ್ಲಿ ಸೈಕಲ್‌ ತುಳಿದಿದ್ದ ಓಂ ಪ್ರಕಾಶ್‌ ರಾವ್‌ --ಲಾಕಪ್‌ ಡೆತ್‌, ಸಿಂಹದ ಮರಿ, ಏ.ಕೆ.47ನಂತಹ ಹಿಟ್‌ ಚಿತ್ರಗಳನ್ನು ನಿರ್ದೇಶಿಸಿದ್ದರೂ, ತಾರಾಮೌಲ್ಯ ಸಿಕ್ಕಿರಲಿಲ್ಲ. ‘ಕಲಾಸಿಪಾಳ್ಯ’ ಚಿತ್ರದ ನಂತರ ಅವರಿಗೊಂದು ಅಸ್ತಿತ್ವ ಸಿಕ್ಕಿದೆ. ಈ ವಿಶ್ವಾಸದಿಂದಲೇ ಚಿತ್ರ ಸೆಟ್ಟೇರುವ ಮೊದಲೇ ಹಂಚಿಕೆದಾರರು ‘ಮಂಡ್ಯ’ ಚಿತ್ರದ ಹಂಚಿಕೆಯ ಹಕ್ಕನ್ನು ಪಡೆದಿದ್ದಾರೆ.

  ಓಂ ಪ್ರಕಾಶ್‌ ರಾವ್‌ ನಿರ್ಮಾಣದ ‘ತುಂಟ’ ಚಿತ್ರ ಮುಕ್ತಾಯದ ಹಂತದಲ್ಲಿದೆ. ಅದು ತೆರೆಕಾಣುವ ಮೊದಲೇ ‘ಮಂಡ್ಯ’ಚಿತ್ರವನ್ನು ಅವರು ಕೈಗೆತ್ತಿಕೊಂಡಿದ್ದಾರೆ.

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X