twitter
    For Quick Alerts
    ALLOW NOTIFICATIONS  
    For Daily Alerts

    ರಾಷ್ಟ್ರ ಪ್ರಶಸ್ತಿಯ ರೇಸ್‌ನಲ್ಲಿ ‘ಬೇರು’

    By Staff
    |

    ಬೆಂಗಳೂರು : 2004-05ನೇ ಸಾಲಿನ ರಾಷ್ಟ್ರಪ್ರಶಸ್ತಿ ಗೆ ಚಲನಚಿತ್ರಗಳ ಆಯ್ಕೆ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಪ್ರಶಸ್ತಿಯ ರೇಸ್‌ನಲ್ಲಿ ಈ ಬಾರಿ ಕನ್ನಡದ ಐದು ಚಿತ್ರಗಳಿವೆ.

    ಪ್ರಶಸ್ತಿಗಾಗಿ ಈ ಸಲ 107ಚಿತ್ರಗಳು ಕಣದಲ್ಲಿದ್ದು, ಕನ್ನಡ ಭಾಷೆಯ ‘ಹಸೀನಾ’, ‘ಬೇರು’, ‘ಧನ್ಯ’, ‘ಪ್ರತಿಭಾವಂತರು’ ಹಾಗೂ ‘ಮೋನಾಲಿಸಾ’ ಚಿತ್ರಗಳು ರಾಜ್ಯವನ್ನು ಪ್ರತಿನಿಧಿಸಿವೆ.

    ನಾಲ್ಕು ಸ್ವರ್ಣ ಕಮಲ ವಿಜೇತ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ‘ಹಸೀನಾ’ , ಈ ಹಿಂದೆ ಎರಡು ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ಪಿ. ಶೇಷಾದ್ರಿ ಅವರ ‘ಬೇರು’ಚಿತ್ರಗಳು ಪ್ರಶಸ್ತಿಯ ನಿರೀಕ್ಷೆ ಹುಟ್ಟಿಸಿವೆ. ಹೊಸ ನಿರ್ದೇಶಕರ ‘ಧನ್ಯ’ ಮತ್ತು ‘ಪ್ರತಿಭಾವಂತರು’ , ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ‘ಮೋನಾಲಿಸಾ’ ಸ್ಪರ್ಧೆಯಲ್ಲಿವೆ.

    ಹಿಂದಿ ನಿರ್ದೇಶಕ ಸುಧೀರ್‌ ಮಿಶ್ರಾ ಅಧ್ಯಕ್ಷತೆಯ ಆಯ್ಕೆ ಸಮಿತಿ ಪ್ರಶಸ್ತಿಗಳನ್ನು ನೀಡಲಿದೆ. ಈ ಬಾರಿ ನಿರ್ದೇಶಕ ನಾಗಾಭರಣ ಹಾಗೂ ನಿರ್ಮಾಪಕ ಸರೋವರ್‌ ಸಂಜೀವ್‌ ಆಯ್ಕೆ ಸಮಿತಿಯಲ್ಲಿದ್ದಾರೆ. ಜುಲೈ ಎರಡನೆಯ ವಾರದಲ್ಲಿ ಪ್ರಶಸ್ತಿಗಳು ಪ್ರಕಟಗೊಳ್ಳುವ ಸಾಧ್ಯತೆಗಳಿವೆ.

    (ಏಜನ್ಸೀಸ್‌)

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Thursday, April 25, 2024, 11:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X