»   » ಪವರ್ ಸ್ಟಾರ್ ಪುನೀತ್ Vs ಗೋಲ್ಡನ್ ಸ್ಟಾರ್ ಗಣೇಶ್

ಪವರ್ ಸ್ಟಾರ್ ಪುನೀತ್ Vs ಗೋಲ್ಡನ್ ಸ್ಟಾರ್ ಗಣೇಶ್

Posted By:
Subscribe to Filmibeat Kannada


ಸ್ಯಾಂಡಲ್‌ವುಡ್‌ನಲ್ಲೀಗ ಯಾರು ನಂ.1? ಪುನೀತ್? ಗಣೇಶ್? ಆದರೆ ಅವರಿಬ್ಬರೂ ನಾವು ರೇಸಿನ ಕುದುರೆಗಳಲ್ಲ ಅನ್ನುತ್ತಿದ್ದಾರೆ!

  • ಪುಷ್ಪಪಾದ
ಮುಂಗಾರು ಮಳೆಗಣೇಶ್‌ಗೆ ಪುನೀತ್ ಹೊಡೆದನಂತೆ ಎಂಬುದು ಗಾಂಧಿನಗರದಲ್ಲಿ ಗುಸುಗುಸು ಆಗಿ, ಕೊನೆಗೆ ಇದೆಲ್ಲ ಸುಳ್ಳು ಸುಳ್ಳು ಸುಳ್ಳು ಎಂದು ಗಣೇಶ್ 3 ಸಲ ಹೇಳಿ ತೆರೆಎಳೆದದ್ದು ಆಯಿತು.

ಇಬ್ಬರ ನಡುವೆ ಸ್ಪರ್ಧೆ ಇರುವುದು ನಿಜವಾದರೂ, ಕೈ ಮಾಡುವ ಮಟ್ಟಕ್ಕೆ ಪುನೀತ್ ಹೋಗೋದಿಲ್ಲ. ಯಾಕೆಂದರೆ ಪುನೀತ್ ಈಗ ಡೀಸೆಂಟ್ ಮತ್ತು ಬೇಡಿಕೆಯಲ್ಲಿರುವ ನಟ. ತನ್ನ ಮುಖಕ್ಕೆ ತಾನೇ ಮಸಿ ಬಳಿದುಕೊಳ್ಳುವ ದಡ್ಡ ಪುನೀತ್ ಅಲ್ಲ ಎಂಬುದು ಅವರನ್ನು ಬಲ್ಲವರು ಹೇಳೋ ಮಾತು.

ಆದರೆ ಒಂದಂತೂ ಸತ್ಯ. ಪುನೀತ್‌ಗೆ ಗಣೇಶ್ ನಿಜಕ್ಕೂ ಸ್ಪರ್ಧಿ. ಪುನೀತ್ ಪವರ್ ಸ್ಟಾರ್ ಆದರೆ, ನಮ್ಮ ಗಣೇಶ್ ಗೋಲ್ಡನ್ ಸ್ಟಾರ್ ಎಂಬುದು ಗಣೇಶ್ ಅಭಿಮಾನಿಗಳ ಮಾತು.

ಮುಂಗಾರು ಮಳೆ ಗೆದ್ದದ್ದೇ ತಡ, ಗಣೇಶ್ ರೇಟು ಗಗನಕ್ಕೇರಿದೆ. ಚಾನ್ಸ್ ಕೊಟ್ಟರೆ ಸಾಕು ಎಂದು ಕೈಕಾಲಿಗೆ ತೊಡರಿಕೊಳ್ಳುತ್ತಿದ್ದ ಗಣೇಶ್, ಈಗ ಸುಲಭಕ್ಕೆ ಸಿಗುವುದಿಲ್ಲ. ದರ್ಶನ್, ಸುದೀಪ್ ಅವರೆಲ್ಲರೂ 20ರ ಮೇಲೆ 50ರ ಒಳಗೆ ಎಂದು ಚೌಕಾಸಿ ಮಾಡುತ್ತಿದ್ದರೆ, ಚೆಲುವಿನ ಚಿತ್ತಾರ ಚಿತ್ರಕ್ಕೆ ನಾರಾಯಣ್‌ರಿಂದ ಗಣೇಶ್ ಪಡೆದದ್ದು ಬರೋಬ್ಬರಿ 70ಲಕ್ಷ.

ಒಂದು ಹಿಂದೆ ಒಂದು ಚಿತ್ರ ಬಂದರೂ, ಗಣೇಶ್ ಮಾರ್ಕೇಟ್ ಮಂಕಾಗಿಲ್ಲ. ಹುಡುಗಾಟ ಬಿಡುಗಡೆಯಾದ, ಇಪ್ಪತ್ತೇ ದಿನಕ್ಕೆ ಚೆಲುವಿನ ಚಿತ್ತಾರ ಬಂತು. ಅವನ ಚಿತ್ರಗಳಿಗೆ ಅವನ ಚಿತ್ರಗಳೇ ಸ್ಪರ್ಧೆ ನೀಡುತ್ತಾ, ಸದ್ಯಕ್ಕೆ ಮೂರು ಚಿತ್ರಗಳು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿವೆ.

ಇತ್ತ ನಿರ್ಮಾಪಕರ ಪಾಲಿನ ಕಾಮಧೇನುವಾಗಿರುವ ಪುನೀತ್ ಒಂದು ದೊಡ್ಡ ಹಿಟ್‌ಗಾಗಿ ಕಾಯುತ್ತಿದ್ದಾರೆ. ಅರಸು ಗೆದ್ದರೂ, ಗೆಲುವಿನ ಪ್ರಮಾಣ ಸಾಲದು ಎಂಬ ಕೊರಗು ಸದಾಶಿವನಗರದ ಮನೆಯಲ್ಲಿದೆ. ಹೀಗಾಗಿ ಚಿತ್ರದ ಆಯ್ಕೆಯಲ್ಲಿ ಪುನೀತ್, ಈಗ ಇನ್ನಷ್ಟು ಎಚ್ಚರವಹಿಸಿದ್ದಾರೆ. ಬಿಂದಾಸ್ ಬಗ್ಗೆ ಅವರಿಗೆ ಒಂದಿಷ್ಟು ವಿಶ್ವಾಸ. ನೋಡೋಣ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada