»   » ಪರಸಂಗದ ಗೆಂಡೆತಿಮ್ಮನ ತೆರೆಗೆ ತಂದ ಶಿವರಾಂ ಇನ್ನಿಲ್ಲ

ಪರಸಂಗದ ಗೆಂಡೆತಿಮ್ಮನ ತೆರೆಗೆ ತಂದ ಶಿವರಾಂ ಇನ್ನಿಲ್ಲ

Subscribe to Filmibeat Kannada


ಬೆಂಗಳೂರು :ಪರಸಂಗದ ಗೆಂಡೆತಿಮ್ಮ ದಂತಹ ಉತ್ತಮ ಚಿತ್ರಗಳನ್ನು ಕನ್ನಡ ಚಿತ್ರರಸಿಕರಿಗೆ ನೀಡಿದ ಹಿರಿಯ ಚಲನಚಿತ್ರ ನಿರ್ದೇಶಕ ಮಾರುತಿ ಶಿವರಾಂ(75) ಇನ್ನಿಲ್ಲ.

ಬುಧವಾರ ರಾತ್ರಿ ಮೃತಪಟ್ಟ ಶಿವರಾಂ ಅವರ ಅಂತ್ಯಕ್ರಿಯೆ, ಗುರುವಾರ ನೆರವೇರಿತು. ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ.

ಸುಮಾರು 40 ವರ್ಷಗಳ ಕಾಲ ಚಿತ್ರರಂಗದಲ್ಲಿದ್ದ ಮಾರುತಿ ಶಿವರಾಂ ನಾಲ್ಕೇ ಚಿತ್ರಗಳನ್ನು ನಿರ್ದೇಶಿಸಿದರೂ, ನಾಲ್ಕರಲ್ಲಿ ಮೂರು ರಾಜ್ಯ ಪ್ರಶಸ್ತಿಗಳಿಸಿದ್ದವು. ಈ ಪೈಕಿ ಆಲನಹಳ್ಳಿ ಕೃಷ್ಣ ಅವರ ಕಾದಂಬರಿ ಆಧಾರಿತ ಚಿತ್ರ ಪರಸಂಗದ ಗೆಂಡೆತಿಮ್ಮ ಅಪಾರ ಯಶಸ್ಸು ಗಳಿಸಿತ್ತು. ಈ ಚಿತ್ರದ ಹಾಡುಗಳ ಮೂಲಕ ಕವಿ ದೊಡ್ಡರಂಗೇಗೌಡ ಚಿತ್ರ ಸಾಹಿತಿಯಾಗಿ ಹೆಸರುವಾಸಿಯಾದರು.

ಮಹಾತ್ಯಾಗ, ಅನುರಕ್ತ,ಬಂಧಿ ಚಿತ್ರಗಳನ್ನು ಶಿವರಾಂ ನಿರ್ದೇಶಿಸಿದ್ದರು. ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದ ಇವರು ರಿಯಲ್ ಸೆಲ್ ಎಂಬ ನಾಟಕವನ್ನು ನಿರ್ದೇಶಿಸಿ, ವಿಶ್ವದಾದ್ಯಂತ ಪ್ರದರ್ಶನ ಮಾಡಿದ್ದರು.

(ದಟ್ಸ್ ಕನ್ನಡ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada