»   » ಶುಭ್ರ ಇಮೇಜ್‌ನೊಂದಿಗೆ ಬಂದಿದ್ದಾಳೆ ಶುಭ್ರ ಅಯ್ಯಪ್ಪ

ಶುಭ್ರ ಇಮೇಜ್‌ನೊಂದಿಗೆ ಬಂದಿದ್ದಾಳೆ ಶುಭ್ರ ಅಯ್ಯಪ್ಪ

Subscribe to Filmibeat Kannada


2005ರಲ್ಲಿ ಫೋರ್ಡ್ ಇಂಟರ್‌ನ್ಯಾಷನಲ್ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ಗೆದ್ದ ಬೆಡಗಿ, ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾಳೆಂದ ಕೂಡಲೆ ಮತ್ತೊಂದು ಥಳಕು ಬಳುಕಿನ ರಸದೌತಣಕ್ಕೆ ಪಡ್ಡೆ ಹುಡುಗರು ಸಜ್ಜಾಗಬೇಕಿಲ್ಲ!

ಮಾಡೆಲಿಂಗ್‌ನಲ್ಲಿ ಛಾಪು ಒತ್ತಿರುವ ಐದು ಮುಕ್ಕಾಲಡಿ ಎತ್ತರದ ಸಪೂರ ದೇಹದ ಈ ಬೆಡಗಿ ಹೆಸರಿಗೆ ತಕ್ಕಂತೆ ಚಿತ್ರರಂಗದಲ್ಲಿ ಅತ್ಯಂತ ಶುಭ್ರ ಇಮೇಜ್ ಹೊಂದಬಯಸಿದ್ದಾಳೆ. ತನ್ನ ಮನೆತನಕ್ಕೆ ಕಳಂಕ ತರಲು ಈಕೆಗೆ ಸುತಾರಾಂ ಇಷ್ಟವಿಲ್ಲ. ಈಕೆ ಶುಭ್ರ ಅಯ್ಯಪ್ಪ.

ಇಂದ್ರದಲ್ಲಿ ದರ್ಶನ್‌ರ ಚಂದ್ರಿಕೆಯಾಗಿ ಪ್ರಥಮ ಬಾರಿಗೆ ಚಿತ್ರರಂಗಕ್ಕೆ ಪಾದಾರ್ಪಣ ಮಾಡುತ್ತಿದ್ದಾರೆ. ಲಂಗ ದಾವಣಿ ತೊಟ್ಟು ಅಪ್ಪಟ ಬ್ರಾಹ್ಮಣ ಹುಡುಗಿಯಾಗಿ ನಟಿಸಲಿದ್ದಾರೆ.

ನಾನು ಅತ್ಯಂತ ಸಂಪ್ರದಾಯಸ್ತ ಮನೆತನದಿಂದ ಬಂದ ಹುಡುಗಿ. ಅಶ್ಲೀಲತೆಗೆ ಜಾಗವೇ ಇಲ್ಲ. ನಾನು ತೊಡುವ ಉಡುಗೆತೊಡುಗೆ ಬಗ್ಗೆಯೂ ಕಾಳಜಿ ವಹಿಸುತ್ತೇನೆ ಎಂದು ಅತ್ಯಂತ ಕ್ಲೀನಾದ ಸ್ಟೇಟ್‌ಮೆಂಟ್ ನೀಡಿದ್ದಾರೆ ಈ ಕೊಡಗಿನ ಬೆಡಗಿ

ಓದಿಗೆ ಪ್ರಥಮ ಪ್ರಾಶಸ್ತ್ಯ. ನಟನೆಯೇನಿದ್ದರೂ ನಂತರ. ಜೀವನವನ್ನು ತುಂಬಾ ಆನಂದಿಸಬಯಸುವ ಶುಭ್ರ ಪಳಗಿದ್ದು ಪ್ರಸಾದ್ ಬಿದ್ದಪ್ಪ ಗರಡಿಯಲ್ಲಿ. ಓದಿದ್ದು ಬೆಂಗಳೂರಿನ ಬಾಲ್ಡ್‌ವಿನ್ ಶಾಲೆ ಮತ್ತು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ.

ಕನ್ನಡ ಎಷ್ಟರ ಮಟ್ಟಿಗೆ ಬರುತ್ತದೋ ಗೊತ್ತಿಲ್ಲ. ಈಗಿನ ಯಾವ ನವನಟಿ ಅಪ್ಪಟ ಕನ್ನಡದಲ್ಲಿ ಮಾತಾಡುತ್ತಾರೆ ನೀವೆ ಹೇಳಿ. ರಮ್ಯ, ರಕ್ಷಿತ, ರೇಖಾ, ಡೈಸಿ, ದೀಪಿಕಾ... ಊಹುಂ!

ಕನ್ನಡ ಬರದಿದ್ದರೇನಂತೆ ಅಶ್ಲೀಲತೆಗೆ ಮಣೆ ಹಾಕುತ್ತಿಲ್ಲವಲ್ಲ ಅಷ್ಟೇ ಸಾಕು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada