»   » ಮಾಳವಿಕಾ ಮೇಡಂ ಸಾರಥ್ಯದಲ್ಲಿ ‘ಜೀ ಕನ್ನಡ’ ಹೆಜ್ಜೆ!

ಮಾಳವಿಕಾ ಮೇಡಂ ಸಾರಥ್ಯದಲ್ಲಿ ‘ಜೀ ಕನ್ನಡ’ ಹೆಜ್ಜೆ!

Subscribe to Filmibeat Kannada

ಬೆಂಗಳೂರು : ಕಿರುತೆರೆ ಮತ್ತು ಬೆಳ್ಳಿತೆರೆ ನಟಿ ಮಾಳವಿಕಾ ಅವಿನಾಶ್‌ ‘ಜೀ ಕನ್ನಡ’ ಚಾನೆಲ್‌ನ ಕಾರ್ಯಕ್ರಮ ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದಾರೆ.

ಜೀ ಟಿವಿ ಈ ಕುರಿತು ಪ್ರಕಟಣೆ ಹೊರಡಿಸಿದೆ. ಮಾಳವಿಕಾ ಚಾನೆಲ್‌ಗಾಗಿ ವಿವಿಧ ಅಪರೂಪದ ಕಾರ್ಯಕ್ರಮ ರೂಪಿಸುವ ಜವಾಬ್ದಾರಿ ನಿಭಾಯಿಸಲಿದ್ದಾರೆ. ಅವರು ಸದ್ಯಕ್ಕೆ ‘ಯಾರಿಗುಂಟು ಯಾರಿಗಿಲ್ಲ’ ಎಂಬ ಗೇಮ್‌ ಶೋವನ್ನು ಜೀ ಕನ್ನಡದಲ್ಲಿ ನಿರೂಪಿಸುತ್ತಿದ್ದಾರೆ.

ಪ್ರೇಮಾ ಕಾರಂತ ನಿರ್ದೇಶನದ ‘ನಕ್ಕಳಾ ರಾಜಕುಮಾರಿ’ ಎಂಬ ಮಕ್ಕಳ ಚಿತ್ರದ ಮೂಲಕ ಬಾಲನಟಿಯಾಗಿ ಬೆಳ್ಳಿತೆರೆ ಪ್ರವೇಶಿಸಿದ ಮಾಳವಿಕಾ, ವಿದ್ಯಾಭ್ಯಾಸ ಮುಂದುವರಿಸಿ ಕಾನೂನು ಪದವಿ ಪಡೆದವರು. ಆನಂತರ ಟಿ.ಎನ್‌.ಸೀತಾರಾಮ್‌ ನಿರ್ದೇಶನದ ‘ಮಾಯಾಮೃಗ’, ‘ಮನ್ವಂತರ’ ಮತ್ತು ‘ಮುಕ್ತ’ ಧಾರಾವಾಹಿಗಳ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದವರು.

ತಮಿಳಿನ ಜಯಾ ಚಾನಲ್‌ನಲ್ಲಿ ಪ್ರಸಾರವಾಗುತ್ತಿದ್ದ, ಕೆ.ಬಾಲಚಂದರ್‌ ನಿರ್ದೇಶನದ ‘ಅಣ್ಣಿ’ ಧಾರಾವಾಹಿ ಮೂಲಕ ಅವರು ತಮಿಳು ಪ್ರೇಕ್ಷಕರ ಮನವನ್ನೂ ಗೆದ್ದಿದ್ದರು. ಇದಲ್ಲದೆ ಕೆಲವು ಟೀವಿ ಕಾರ್ಯಕ್ರಮಗಳನ್ನೂ ಅವರು ನಡೆಸಿಕೊಟ್ಟಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

Post your views

ಇದನ್ನೂ ಓದಿ :
ಪಾಪ ‘ಮಾಧವಿ ಪಟೇಲ್‌’ಗೆ ಎಷ್ಟೊಂದು ವ್ಯಥೆ!
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada