»   » ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಡಾ.ರಾಜ್‌?

ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಡಾ.ರಾಜ್‌?

Posted By:
Subscribe to Filmibeat Kannada

ಬೀದರ್‌ : ನಗರದಲ್ಲಿ ನಡೆಯಲಿರುವ 72ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಟ ಡಾ.ರಾಜ್‌ಕುಮಾರ್‌ ಉದ್ಘಾಟಿಸುವ ಸಾಧ್ಯತೆಗಳಿವೆ.

ಸಮ್ಮೇಳನದ ಉದ್ಘಾಟನೆಗೆ ಬಹುತೇಕ ಡಾ.ರಾಜ್‌ಕುಮಾರ್‌ ಅವರ ಹೆಸರನ್ನೇ ಅಂತಿಮವಾಗಿ ಪರಿಗಣಿಸಲಾಗಿದೆ. ಒಂದು ವೇಳೆ ಅವರು ಅನಾರೋಗ್ಯದಿಂದ ಆಹ್ವಾನ ನಿರಾಕರಿಸಿದರೆ, ಇತರ ಗಣ್ಯರನ್ನು ಆಹ್ವಾನಿಸುವ ಪ್ರಸ್ತಾಪಗಳಿವೆ ಎಂದು ಪರಿಷತ್ತು ಮೂಲಗಳು ತಿಳಿಸಿವೆ.

ಸಮ್ಮೇಳನ ಉದ್ಘಾಟನೆಗೆ ಡಾ.ರಾಜಕುಮಾರ್‌, ಸಾಹಿತಿಗಳಾದ ಡಾ.ದೇಜಗೌ ಮತ್ತು ಯಶವಂತ ಚಿತ್ತಾಲ ಅವರ ಹೆಸರುಗಳು ಪ್ರಸ್ತಾಪಗೊಂಡಿವೆ. ಈ ಹಿಂದೆ ಅನ್ಯಭಾಷಿಕರೊಬ್ಬರನ್ನು ಕನ್ನಡ ಸಾಹಿತ್ಯ ಪರಿಷತ್‌, ಸಮ್ಮೇಳನದ ಉದ್ಘಾಟನೆಗೆ ಆಯ್ಕೆ ಮಾಡಿ ವಿವಾದಕ್ಕೆ ದಾರಿ ಮಾಡಿತ್ತು. ಡಾ.ರಾಜ್‌ ಪಾಲ್ಗೊಳ್ಳುವುದರಿಂದ ಸಮ್ಮೇಳನ ರಂಗು ಪಡೆಯಲಿದೆ ಎನ್ನಲಾಗಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada