»   » ರೀಮೇಕ್‌ ಚಿತ್ರಗಳಿಗೆ ರಾಜ್ಯ ಸರ್ಕಾರದಿಂದ ರತ್ನಗಂಬಳಿ!

ರೀಮೇಕ್‌ ಚಿತ್ರಗಳಿಗೆ ರಾಜ್ಯ ಸರ್ಕಾರದಿಂದ ರತ್ನಗಂಬಳಿ!

Posted By:
Subscribe to Filmibeat Kannada

ಬೆಂಗಳೂರು: ಕನ್ನಡ ಚಿತ್ರರಂಗದ ಅಭಿವೃದ್ಧಿ ದೃಷ್ಟಿಯಿಂದ ರೀಮೇಕ್‌ ಚಿತ್ರಗಳಿಗೆ ಶೇ.100ರಷ್ಟು ಸಂಪೂರ್ಣ ತೆರಿಗೆ ವಿನಾಯಿತಿ ನೀಡುವುದಾಗಿ ವಾರ್ತಾ ಸಚಿವ ಬಿ.ಶಿವರಾಂ ಬುಧವಾರ ತಿಳಿಸಿದರು.

ಕಂಠೀರವ ಸ್ಟುಡಿಯೋದಲ್ಲಿ ನೂತನವಾಗಿ ಮಿನಿ ಹವಾನಿಯಂತ್ರಿತ ಘಟಕ ಹಾಗೂ ಚಿತ್ರೀಕರಣ ತಾಣಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಚಿತ್ರರಂಗದ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ರೀಮೇಕ್‌ ಚಿತ್ರಗಳಿಗೆ ಸಂಪೂರ್ಣ ರಿಯಾಯಿತಿ ನೀಡಲಾಗುತ್ತಿದ್ದು, ಈ ಆದೇಶವು 15ದಿನಗಳಲ್ಲಿ ಜಾರಿಗೆ ಬರುಲಿದೆ. ಆದರೆ ಈ ಚಿತ್ರಗಳಿಗೆ ಸಹಾಯಧನ ಅಥವಾ ಪ್ರಶಸ್ತಿ ಇರುವುದಿಲ್ಲ ಎಂದರು.

ಜೊತೆಗೆ ಕನ್ನಡ ಚಲನಚಿತ್ರ ಅಕಾಡೆಮಿಗೆ ಇನ್ನೇರಡು ದಿನಗಳಲ್ಲಿ ಮುಖ್ಯಮಂತ್ರಿ ಸಹಿ ಹಾಕಲಿದ್ದು, ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದಾಗಿ ಈ ಸಂದರ್ಭದಲ್ಲಿ ಅವರು ತಿಳಿಸಿದರು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada