»   » ‘ಅರಸ್‌’ಗೆ ಅರಸಿಯರಾದ ರಮ್ಯಾ, ಮೀರಾ ಜಾಸ್ಮಿನ್‌!

‘ಅರಸ್‌’ಗೆ ಅರಸಿಯರಾದ ರಮ್ಯಾ, ಮೀರಾ ಜಾಸ್ಮಿನ್‌!

Posted By:
Subscribe to Filmibeat Kannada

‘ಅರಸ್‌’ ಸಿನಿಮಾದಲ್ಲಿ ಇಬ್ಬರು ನಾಯಕಿಯರು. ಒಬ್ಬಳು ನಮ್ಮೂರಿನ ರಮ್ಯಾ. ಈಕೆಗೆ ಇದು ಪುನೀತ್‌ ಜೊತೆ ಅಭಿನಯಿಸಿದ ಮೂರನೇ ಚಿತ್ರ. ಇವರಿಬ್ಬರು ಜೋಡಿಯ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ(‘ಅಭಿ’ ಮತ್ತು ‘ಆಕಾಶ್‌’) ಹೀಗಾಗಿಯೇ ‘ಅರಸ್‌’ಬಗ್ಗೆ ಇನ್ನೊಂದು ನಿರೀಕ್ಷೆ.

ಈ ಚಿತ್ರದ ಇನ್ನೊಬ್ಬ ನಾಯಕಿ ಪಕ್ಕದೂರಿನ ಮೀರಾ ಜಾಸ್ಮಿನ್‌. ಈ ಹೆಸರು ಕೇಳಿದವರೇ ನೀವು ‘ಮೌರ್ಯ’ ಚಿತ್ರದ ತೆಲುಗು ಅಮ್ಮಾಯಿಯ ಪಾತ್ರವನ್ನು ನೆನಪು ಮಾಡಿಕೊಳ್ಳುವಿರಿ!

ಎಸ್‌.ನಾರಾಯಣ್‌ ನಿರ್ದೇಶನ ಮತ್ತು ರಾಕ್‌ಲೈನ್‌ ನಿರ್ಮಾಣದ ಈ ಚಿತ್ರ ಅಷ್ಟಾಗಿ ಓಡಲಿಲ್ಲ(ಪುನೀತ್‌ರ ಇತರೇ ಯಶಸ್ವಿ ಚಿತ್ರಗಳಂತೆ). ಆದರೂ ಮೀರಾ ಜಾಸ್ಮಿನ್‌ರ ಮೋಹಕ ರೂಪ, ಭಾವಪೂರ್ಣ ಅಭಿನಯ ಎಲ್ಲರ ಎದೆಯಲ್ಲಿ ಅಚ್ಚಾಗಿದೆ. ಮೀರಾಳ ಇನ್ನೊಂದು ಹೆಗ್ಗಳಿಕೆ ಎಂದರೆ ಈಕೆ, ರಾಷ್ಟ್ರಪ್ರಶಸ್ತಿ ವಿಜೇತ ನಟಿ.

ನಿರ್ದೇಶಕ ಮಹೇಶ್‌ ಬಾಬು ನಿರ್ದೇಶನದ ‘ಅರಸ್‌’ ಚಿತ್ರದ ಮೊದಲ ಹಂತದ 25ದಿನಗಳ ಚಿತ್ರೀಕರಣ ಬೆಂಗಳೂರಿನಲ್ಲಿ ಮುಗಿದಿದ್ದು, ಆಸ್ಟ್ರೇಲಿಯಾದಲ್ಲಿ ಹಾಡಿನ ಚಿತ್ರೀಕರಣ ಸಾಗಿದೆ. ಜನಾರ್ದನ ಮಹರ್ಷಿ ಕತೆ, ಹಂಸಲೇಖ, ನಾಗೇಂದ್ರ ಪ್ರಸಾದ್‌, ಕಲ್ಯಾಣ್‌ ಮತ್ತಿತರರು ಬರೆದ ಹಾಡುಗಳನ್ನು ಚಿತ್ರ ಹೊಂದಿದೆ.

ಮೀರಾ ಜಾಸ್ಮಿನ್‌ ಫೋಟೋಗ್ಯಾಲರಿ

Post your views

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada