»   » ‘ ಸತ್ಯಹರಿಶ್ಚಂದ್ರ’ಕ್ಕಿಂತಲೂ ‘ಸಿರಿವಂತ’ ಚೆನ್ನಾಗಿದೆಯಾ?

‘ ಸತ್ಯಹರಿಶ್ಚಂದ್ರ’ಕ್ಕಿಂತಲೂ ‘ಸಿರಿವಂತ’ ಚೆನ್ನಾಗಿದೆಯಾ?

Subscribe to Filmibeat Kannada


ಸೋತು, ಕಂಗಾಲಾಗಿ ಅಡ್ಡಡ್ಡ ಮಲಗಿದ್ದ ಸ್ಯಾಂಡಲ್‌ವುಡ್‌ನಲ್ಲಿ ಈಗ ‘ಸಿರಿವಂತ’ನದೇ ಮಾತು. ‘ಸಿರಿವಂತ’ ಚಿತ್ರದ ಸುತ್ತ ಹತ್ತಾರು ಕತೆಗಳು.. ಸಿನಿಮಾ ಬಗ್ಗೆ ಮಾತಾಡಿದವರೆಲ್ಲರೂ ಅತ್ತಿದ್ದಾರೆ..

ಚಿತ್ರದಲ್ಲಿ ವಿಷ್ಣು ಸಾಯೋ ದೃಶ್ಯ, ಚಟ್ಟದ ಮೇಲೆ ಮಲಗೋ ದೃಶ್ಯ ಕಂಡು ಪ್ರೇಕ್ಷಕರು ಗಲಿಬಿಲಿಗೊಂಡಿದ್ದಾರೆ. ಇದು ಸಿನಿಮಾ ಮಾತ್ರವಲ್ಲ.. ಅನ್ನೋ ಫೀಲಿಂಗ್‌ ಎಲ್ಲರಲ್ಲಿದೆ.

ಈ ಸಿನಿಮಾಕ್ಕೆ ಸಂಬಂಧಿಸಿದ ಕೆಲ ಸಂಗತಿಗಳು :

  • ಸಿರಿವಂತ ಚಿತ್ರದ ನಂತರ ನಟ ದೊಡ್ಡಣ್ಣ ಬದಲಾಗಿದ್ದಾರೆ. ಕುಡಿತ, ಸುಳ್ಳುತನ, ಮೋಸ ಎಲ್ಲವನ್ನು ಬಿಟ್ಟು ಅತಿ ಸಭ್ಯರಾಗಿದ್ದಾರೆ!

  • ಸಿನಿಮಾ ವೀಕ್ಷಿಸಿದ ಸೆನ್ಸಾರ್‌ ಸಮಿತಿ ಸದಸ್ಯರೂ ಅತ್ತರಂತೆ!

  • ಸಿರಿವಂತ ನೋಡಿದ ದೇವೇಗೌಡರು ಬಿಕ್ಕಿಬಿಕ್ಕಿ ಅತ್ತರು. ಇಂಥ ಚಿತ್ರ ನಾನು ನೋಡೇ ಇಲ್ಲ ಎಂದು ಭಾವುಕರಾದರು!

  • ಸಿರಿವಂತ ಚಿತ್ರದಲ್ಲಿ ಶ್ರುತಿ ದೊಡ್ಡದಾಗಿ ಕುಂಕುಮ ಇಟ್ಟುಕೊಂಡು, ಪಾರ್ವತಮ್ಮ ರಾಜ್‌ಕುಮಾರ್‌ ರೀತಿ ಅವರು ಕಾಣಿಸುತ್ತಾರೆ. ಪಾರ್ವತಮ್ಮ ಅವರನ್ನು ಅನುಕರಿಸಿ ಎಂದು ಸೂಚನೆ ನೀಡಿದ ನಿರ್ದೇಶಕ ನಾರಾಯಣ್‌ಗೆ, ಕೆಲವೇ ಕ್ಷಣಗಳಲ್ಲಿ ಫೋನ್‌ ಬಂತು.. ರಾಜ್‌ ಕುಮಾರ್‌ ಹೃದಯಾಘಾತಕ್ಕೆ ಒಳಗಾದರು ಎಂಬ ಸುದ್ದಿ ಗೊತ್ತಾಯಿತು!

  • ರಾಜ್‌ಕುಮಾರ್‌ ಸಾವಿನ ದುಃಖದಲ್ಲಿದ್ದ ವಿಷ್ಣುವರ್ಧನ್‌, ಸಿರಿವಂತ ಚಿತ್ರದ ಕತೆ ಕೇಳಿಯೇ ಅಭಿನಯಿಸಲು ಒಪ್ಪಿಗೆ ನೀಡಿದರು. ಚಿತ್ರ ಅವರ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ಚಿತ್ರೀಕರಣ ಸಂದರ್ಭದಲ್ಲಿ ಅನಾರೋಗ್ಯದಿಂದ ಆಸ್ಪತ್ರೆ ಸೇರಬೇಕಾಯಿತು. ಈಗಲೂ ವಿಷ್ಣು ಅಳುತ್ತಲೇ ಇರುತ್ತಾರೆ.

  • ನಿರ್ದೇಶಕ ನಾರಾಯಣ್‌, ನಿರ್ಮಾಪಕ ರಾಕ್‌ಲೈನ್‌ ಅತ್ತೂ ಅತ್ತೂ ಕಣ್ಣೀರೇ ಖಾಲಿಯಾಗಿಬಿಟ್ಟಿವೆ.

  • ಅಂದ ಹಾಗೇ ಈ ಸಿರಿವಂತ ‘ಆ ನಲುಗುರು’ ತೆಲುಗು ಚಿತ್ರದ ಕನ್ನಡ ರೀಮೇಕ್‌.

Post your views
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada