»   » ಶಿಲ್ಪಾಶೆಟ್ಟಿ ಮೊಬೈಲ್ ನಂಬರ್ ಪಡೆದವರು ಮಾಡಿದ ತಂಟೆ!

ಶಿಲ್ಪಾಶೆಟ್ಟಿ ಮೊಬೈಲ್ ನಂಬರ್ ಪಡೆದವರು ಮಾಡಿದ ತಂಟೆ!

Subscribe to Filmibeat Kannada


ಮುಂಬೈ, ನ.06 : ನಟಿ ಶಿಲ್ಪಾಶೆಟ್ಟಿ ಅಭಿಮಾನಿಗಳ ಫೋನ್ ಕರೆಗೆ ಬೆಚ್ಚಿಬಿದ್ದ ಘಟನೆ ವರದಿಯಾಗಿದೆ. ಏಕಾಏಕಿ ಹೀಗೆ ಅಭಿಮಾನಿಗಳಿಂದ ಫೊನ್ ಬರುತ್ತಿರುವುದನ್ನು ಕಂಡ ಶಿಲ್ಪಾ ದಂಗಾಗಿ ಪೋಲೀಸರ ಮೊರೆ ಹೋಗಿದ್ದಾಳೆ.

ಆಕೆಯ ಅಭಿಮಾನಿಯೊಬ್ಬ ಇಮೇಲ್ ಮೂಲಕ ಮೊಬೈಲ್ ನಂಬರನ್ನು ಅಂತರ್ಜಾಲದಲ್ಲಿ ಬಿಡುಗಡೆ ಮಾಡಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಮೊಬೈಲ್ ನಂಬರನ್ನು ಅಂತರ್ಜಾಲಕ್ಕೆ ಕೊಟ್ಟವರನ್ನು ಹಿಡಿದುಕೊಡಬೇಕು. ಮಿಸ್ ಬಾಲಿವುಡ್ ಕಾರ್ಯಕ್ರಮಕ್ಕಾಗಿ ಬ್ರಿಟನ್‌ನಲ್ಲಿರುವ ಶಿಲ್ಪಾ ಈ ಕುರಿತು ನೊಂದುಕೊಂಡಿದ್ದಾರೆ. ಆಕೆಗೆ ದಿನಾ ಸಾವಿರಾರು ಕರೆಗಳು, ಎಸ್‌ಎಮ್‌ಎಸ್‌ಗಳು ಬರುತ್ತಿವೆ ಎಂದು ಶಿಲ್ಪಾಶೆಟ್ಟಿಯ ಪತ್ರಿಕಾ ಸಂಪರ್ಕಾಧಿಕಾರಿ ದಲೆ ಭಗವಾರ್‌ಕರ್ ಪೋಲೀಸರಿಗೆ ಕೊಟ್ಟ ದೂರಿನಲ್ಲಿ ತಿಳಿಸಿದ್ದಾರೆ.

ಕೆಲವರು ಆಕೆಯ ಧ್ವನಿ ಕೇಳಲು ಫೋನಾಯಿಸಿದರೆ ಮತ್ತೆ ಕೆಲವರು ಶಿಲ್ಪಾಳನ್ನು ನೇರ ಪಲ್ಲಂಗಕ್ಕೇ ಆಹ್ವಾನಿಸಿದ್ದಾರೆ ಮತ್ತೂ ಕೆಲವರು ಮಿಸ್ ಬಾಲಿವುಡ್ ಕಾರ್ಯಕ್ರಮ ಹೇಗಿದೆ ಎಂದಿದ್ದಾರೆ. ನಾನು ಮಾತನಾಡುತ್ತಿರುವುದು ನಿಜವಾದ ಶಿಲ್ಪಾಳ ಬಳಿಯೇ ಅಥವಾ ಬೇರೆಯವರ ಬಳಿಯೇ ಎಂದು ದೃಢಪಡಿಸಿಕೊಳ್ಳಲು ಆಕೆಗೆ ಪದೇ ಪದೇ ಫೋನಾಯಿಸಿ ಗೋಳುಹುಯ್ದುಕೊಂಡಿದ್ದಾರೆ. ಅಭಿಮಾನಿಗಳ ತಿಕ್ಕಲಾಟ ಮೀತಿಮೀರಿದ್ದರಿಂದ ಶಿಲ್ಪಾ ಆ ಫೋನ್ ನಂಬರನ್ನು ರದ್ದು ಮಾಡಿಕೊಂಡಿರುವುದಾಗಿ ಆಕೆಯ ಸಂಪರ್ಕಾಧಿಕಾರಿ ಸುದ್ದಿಗಾರರಿಗೆ ತಿಳಿಸಿದರು.

ಮುಂಬೈ ಪೋಲೀಸರು ಈ ಕುರಿತು ತನಿಖೆ ಮಾಡುತ್ತಿರುವುದಾಗಿ, ಈ ರೀತಿ ಮಾಡಿ ಖಾಸಗಿ ಫೋನ್ ನಂಬರನ್ನು ಅಂತರ್ಜಾಲಕ್ಕೆ ಬಿಡುಗಡೆ ಮಾಡಿ ಕಿರುಕುಳ ಕೊಟ್ಟ ತಪ್ಪಿಗೆ ಆರು ತಿಂಗಳ ಕಠಿಣ ಕಾರಾಗಾರ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಪೋಲೀಸ್ ಅಧಿಕಾರಿ ಸುಶೀಲ್ ಜೋಷಿ ಎಚ್ಚರಿಸಿದ್ದಾರೆ.

(ಏಜನ್ಸೀಸ್)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada