»   » ರಸಿಕರ ಮೈಬಿಸಿಯೇರಿಸಿದ ಚೆಲುವೆ ರಮ್ಯಕೃಷ್ಣ ಎಲ್ಲಿರುವೆ?

ರಸಿಕರ ಮೈಬಿಸಿಯೇರಿಸಿದ ಚೆಲುವೆ ರಮ್ಯಕೃಷ್ಣ ಎಲ್ಲಿರುವೆ?

Subscribe to Filmibeat Kannada


‘ಪರಂಪರಾ’ ಹಿಂದಿ ಚಿತ್ರದಲ್ಲಿ ವಿನೋದ ಖನ್ನಾನನ್ನು ತುಟಿಗೆ ತುಟಿ ಹಚ್ಚಿ ಚುಂಬಿಸಿ ನೆಲೆ ಕಂಡುಕೊಳ್ಳದಿದ್ದರೂ ದಕ್ಷಿಣದಲ್ಲಿ ಹಾಟ್‌ ನಟಿಯಾಗಿ ಬೆಳೆದವರು.

‘ಬಾ ಬಾರೋ ರಸಿಕ.. ನೋಡೆನ್ನಾ.. ತಳುಕಾ.. ಮೈ ಪುಳಕ.. ’ ಎಂದು ಮಾದಕತೆಯಿಂದ ಮೈಕುಲುಕಿಸಿ ಸಿನಿ ರಸಿಕರನ್ನು ಕೆರಳಿಸಿದ್ದ, ತಮ್ಮ ಚೂಪುಕಂಗಳಿಂದ ಸೆಳೆದಿದ್ದ, ಭಾವಪೂರ್ಣ ಅಭಿನಯದಿಂದ ಪ್ರೇಕ್ಷಕರ ಆಕರ್ಷಿಸಿದ್ದ ರಮ್ಯಾ ಕೃಷ್ಣ, ಈಗ ಫುಲ್‌ಟೈಮ್‌ ಗೃಹಿಣಿ.

ಸಂಸಾರದ ತಾಪತ್ರಯ, ಮನೆ-ಮಕ್ಕಳು ಎಂದು ಅವರೀಗ ಬ್ಯುಸಿ. ಪುತ್ರ ಋತ್ವಿಕ್‌ಗೀಗ ಒಂದು ವರ್ಷ ಎಂಟು ತಿಂಗಳು. ತಮ್ಮ ಮಗನ ಆರೈಕೆಯಲ್ಲಿ ತೊಡಗಿಸಿಕೊಂಡಿರುವ ರಮ್ಯಾ ಅವರಿಗೀಗ ಟೈಮೇ ಇಲ್ಲವಂತೆ. ಆಗಾಗ ಸ್ವಲ್ಪ ಸಮಾಜ ಸೇವೆ ಮಾಡೋದು ಉಂಟಂತೆ.

ಮೊನ್ನೆಮೊನ್ನೆ ತನಕ ಕನ್ನಡದ ‘ಬಂಗಾರದ ಬೇಟೆ’ ಮಾದರಿಯ ತೆಲುಗು-ತಮಿಳು ಕಾರ್ಯಕ್ರಮಗಳಲ್ಲಿ ಮಣಗಟ್ಟಲೇ ಬಂಗಾರ ಹೇರಿಕೊಂಡು ರಮ್ಯಾ, ಮಿಂಚಿದ್ದರು. ಈ ಎಲ್ಲವುಗಳ ಮಧ್ಯೆ, ಬಣ್ಣದ ಬದುಕಿಗೆ ಅವರಿಂದ ಒಂದು ತಾತ್ಕಾಲಿಕ ನಮಸ್ಕಾರ.

‘ಕೃಷ್ಣ ರುಕ್ಮಿಣಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ ರಮ್ಯಾ, ನಂತರ ಸಾಲು ಸಾಲಾಗಿ ಅವಕಾಶಗಳನ್ನು ಗಿಟ್ಟಿಸಿದವರು. ಹೈದರಾಬಾದ್‌ ಮೂಲದ ಈಯಮ್ಮ, ತೆಲುಗು, ತಮಿಳು, ಕನ್ನಡದಲ್ಲಿ ತಮ್ಮದೇ ಆದ ಸ್ಥಾನ ಹೊಂದಿದ್ದಾರೆ. ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ರಮ್ಯಾರನ್ನು ಕಂಡರೆ, ಒಂದು ಕ್ಷಣ ಅಚ್ಚರಿಯಾಗುತ್ತದೆ. ತುಸು ದಪ್ಪಾ ಅನ್ನೋದು ಬಿಟ್ಟರೆ, ರಮ್ಯಾ ಈಗಲೂ ಚೆಲುವೆಯೇ.

‘ಪರಂಪರಾ’ ಹಿಂದಿ ಚಿತ್ರದಲ್ಲಿ ವಿನೋದ ಖನ್ನಾನನ್ನು ತುಟಿಗೆ ತುಟಿ ಹಚ್ಚಿ ಚುಂಬಿಸಿ ನೆಲೆ ಕಂಡುಕೊಳ್ಳದಿದ್ದರೂ ದಕ್ಷಿಣದಲ್ಲಿ ಹಾಟ್‌ ನಟಿಯಾಗಿ ಬೆಳೆದವರು. ‘ಪಡಯಪ್ಪನ್‌’ ಚಿತ್ರದಲ್ಲಿ ರಜನಿಕಾಂತ್‌ಗೆ ಸರಿಸಾಟಿಯಾಗಿ ಅಭಿನಯಿಸಿದ್ದನ್ನು ಜನ ಇನ್ನೂ ಮರೆತಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada