»   » ಕನ್ನಡವನ್ನು ರಕ್ಷಿತಾ ಯಾಕೆ ಇಂಗ್ಲಿಷ್‌ ಥರಾ ಮಾತಾಡ್ತಾರೆ ಗೊತ್ತ ?

ಕನ್ನಡವನ್ನು ರಕ್ಷಿತಾ ಯಾಕೆ ಇಂಗ್ಲಿಷ್‌ ಥರಾ ಮಾತಾಡ್ತಾರೆ ಗೊತ್ತ ?

Posted By: Staff
Subscribe to Filmibeat Kannada

ಸ್ವಿಮ್ಮಿಂಗ್‌ ಪೂಲ್‌ಗೆ ಸೀರೆ ಉಟ್ಟುಕೊಂಡು ಹೋಗೋಕೆ ಆಗುತ್ತಾ ? ಸ್ವಿಮ್‌ ಸೂಟೇ ಹಾಕ್ಕೊಂಡು ಹೋಗಬೇಕು ಅಲ್ವ..ಎಕ್ಸ್‌ಪೋಸ್‌ ಮಾಡುವ ಬಗ್ಗೆ ರಕ್ಷಿತಾ ಅಭಿಪ್ರಾಯವಿದು. ಲಿಮಿಟ್ಟಾಗಿ ಎಕ್ಸ್‌ಪೋಸ್‌ ಮಾಡಲು ರಕ್ಷಿತಾ ಶತಸಿದ್ಧ. ಟಿವಿ ಸಂದರ್ಶನವೊಂದರಲ್ಲಿ ಇಂಗ್ಲಿಷ್‌ ಆ್ಯಕ್ಸೆಂಟಲ್ಲೇ ಕನ್ನಡವನ್ನು ಉದುರಿಸುತ್ತಿದ್ದ ರಕ್ಷಿತಾ ಎರಗಿಬಂದ ಪ್ರಶ್ನೆಗಳಿಗೆ ಸಮರ್ಥವಾಗಿಯೇ ಉತ್ತರಿಸಿದರು.

'ಈಗಿನ ನಾಯಕಿಯರು ಕನ್ನಡವನ್ನು ಚೆನ್ನಾಗಿ ಮಾತಾಡಲ್ಲ. ಇಂಗ್ಲಿಷಲ್ಲೇ ಹೆಚ್ಚು ಮಾತಾಡ್ತಾರೆ ಅನ್ನುವ ಅಭಿಪ್ರಾಯವಿದೆ. ಇದಕ್ಕೆ ನೀವೇನಂತೀರಿ", ಎಂಬ ಪ್ರಶ್ನೆಗೆ ರಕ್ಷಿತಾ ಕೊಟ್ಟ ಉತ್ತರ- ಇರಬಹುದು. ನಾನು 10 ವರ್ಷ ಮುಂಬಯಿನಲ್ಲೇ ಓದಿದ್ದು. ಆಮೇಲೆ ಇಲ್ಲಿಗೆ ಬಂದ ನಂತರ ಕನ್ನಡ ಕಲಿತೆ. ಈಗ ಸ್ವಲ್ಪ ಬರೆಯೋಕೂ ಬರುತ್ತೆ. ಈಗ ಕನ್ನಡದಲ್ಲೇ ಮಾತಾಡ್ತಿದ್ದೀನಲ್ಲ :)

ತಲೆತುಂಬಾ ಮಲ್ಲಿಗೆ ಮುಡಿದಿದ್ದ ರಕ್ಷಿತಾಗೆ ಅದು ಒಪ್ಪುತ್ತಿರಲಿಲ್ಲ. ಇವತ್ತೂ ಗೆಳತಿಯರೊಡನೆ ಹರಟುವ, ರೆಸ್ಟೋರೆಂಟ್‌ಗೆ ಹೋಗಿ ಮಜಾ ಮಾಡುವ ರಕ್ಷಿತಾ ಕಣ್ಣಲ್ಲಿ ಬಾಲಿವುಡ್‌ ಕನಸಿದೆ. ಅದಕ್ಕೆ ಪೂರ್ವ ಸಿದ್ಧತೆಯಲ್ಲಿ ತೊಡಗಿರುವ ರಕ್ಷಿತಾ ತೆಳ್ಳಗೂ ಆಗುತ್ತಿದ್ದಾರೆ !

English summary
Rakshita dreaming bollywood

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada