»   » ‘ತಂದೆಗೆ ತಕ್ಕ ಮಗ’ ಕ್ಯಾಸೆಟ್‌ ಬಿಡುಗಡೆಗೆ ಧರಂ

‘ತಂದೆಗೆ ತಕ್ಕ ಮಗ’ ಕ್ಯಾಸೆಟ್‌ ಬಿಡುಗಡೆಗೆ ಧರಂ

Posted By:
Subscribe to Filmibeat Kannada

ಆಡಿಯೋ ಕ್ಯಾಸೆಟ್‌ ಬಿಡುಗಡೆ ಸಮಾರಂಭವನ್ನು ಅದ್ಧೂರಿಯಾಗಿ ಏರ್ಪಡಿಸುವ ಪರಿಪಾಠ ರಾಜ್ಯದಲ್ಲಿ ಹೆಚ್ಚಿದೆ. ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಲಿರುವ ಚಿತ್ರ -‘ತಂದೆಗೆ ತಕ್ಕ ಮಗ’.

ಡಿ.11ರಂದು ಗುಲ್ಬರ್ಗದಲ್ಲಿ ಚಿತ್ರದ ಧ್ವನಿ ಸುರಳಿ ಬಿಡುಗಡೆ ಸಮಾರಂಭವನ್ನು, ನಿರ್ಮಾಪಕ ಎಸ್‌.ರಮೇಶ್‌ ಅದ್ಧೂರಿಯಾಗಿ ನಡೆಸಲು ನಿರ್ಧರಿಸಿದ್ದಾರೆ.

ಅಂಬರೀಷ್‌ ಮತ್ತು ಉಪೇಂದ್ರ ತಂದೆ-ಮಗನಾಗಿ ನಟಿಸುತ್ತಿರುವ, ಈ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಮತ್ತು ಸಚಿವ ಮಲ್ಲಿಕಾರ್ಜುನ ಖರ್ಗೆ ಅವರೂ ಪಾಲ್ಗೊಳ್ಳುವರು.

ತಮ್ಮ ಪುತ್ರ ಪವನ್‌ ಕುಮಾರ್‌ ಅವರ ಹೆಸರಲ್ಲಿ ರಮೇಶ್‌ ‘ತಂದೆಗೆ ತಕ್ಕ ಮಗ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿದ್ದಾರೆ, ಎಸ್‌.ಎ.ರಾಜಕುಮಾರ್‌. ಕಮಲ್‌ಹಾಸನ್‌ರ ‘ದೇವರ್‌ ಮಗನ್‌’ ತಮಿಳು ಚಿತ್ರದ ರಿಮೇಕ್‌ ರೂಪವೇ ‘ತಂದೆಗೆ ತಕ್ಕ ಮಗ’.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada