»   » ವಿಷ್ಣುವರ್ಧನ್‌ಗೆ ಏನೇನು ಇಷ್ಟ? ಏನೇನು ಕಷ್ಟ?

ವಿಷ್ಣುವರ್ಧನ್‌ಗೆ ಏನೇನು ಇಷ್ಟ? ಏನೇನು ಕಷ್ಟ?

Subscribe to Filmibeat Kannada


(ನಟ ಡಾ.ವಿಷ್ಟುವರ್ಧನ್‌ರ ಸಾಧನೆ ಮತ್ತು ಸಿನಿ ಬದುಕಿನ ಮೇಲೆ ಬೆಳಕು ಚೆಲ್ಲುವ ಮಾಹಿತಿಗಳ ಕಣಜ; ವಿಷ್ಣುವರ್ಧನ್‌.ಕಾಂ! ಈ ವೆಬ್‌ಸೈಟ್‌ನಲ್ಲಿ ವಿಷ್ಣು ತಮ್ಮ ಅಭಿರುಚಿಗಳನ್ನು ಹಂಚಿಕೊಂಡಿದ್ದಾರೆ. ಆ ಮಾಹಿತಿಯನ್ನು ಅಭಿಮಾನಿಗಳ ಕುತೂಹಲಕ್ಕಾಗಿ ನಾವಿಲ್ಲಿ ಪ್ರಕಟಿಸಿದ್ದೇವೆ- ಸಂಪಾದಕ)

ಇಷ್ಟದ ಉಡುಗೆ : ಸಂದರ್ಭಕ್ಕೆ ತಕ್ಕ ಉಡುಗೆ ತೊಡಲು ಇಷ್ಟ.

ಇಷ್ಟದ ಕಾರ್‌ : ಎಲ್ಲ ಬಗೆಯ ಸ್ಪೋರ್ಟ್ಸ್‌ ಕಾರುಗಳು.

ಇಷ್ಟದ ಅಡುಗೆ : ಇದೇ ಆಗಬೇಕಂತೇನೂ ಇಲ್ಲ. ಆದರೆ ತಿನ್ನುವ ಪದಾರ್ಥಕ್ಕಿಂತ ಮನಸ್ಥಿತಿ ಹಾಗೂ ತಯಾರಿಸುವ ಪ್ರೀತಿ ಮುಖ್ಯ.

ಇಷ್ಟದ ರೆಸ್ಟೋರಂಟ್‌ : ಬೆಂಗಳೂರಿನ ಹೋಟಲ್‌ ತಾಜ್‌ನಲ್ಲಿರುವ ಚೈನೀಸ್‌ ಕ್ಯೂಸಿನ್‌.

ಇಷ್ಟದ ಪುಸ್ತಕ : ದೊಡ್ಡ ಓದುಗನೇನಲ್ಲ. ಸರಳವಾಗಿರುವ ಹಾಗೂ ಓದಿಸಿಕೊಂಡು ಹೋಗುವ ಯಾವುದೇ ಪುಸ್ತಕಗಳು ಇಷ್ಟ. ಒಂದು ಕಾಲದಲ್ಲಿ ಜೇಮ್ಸ್‌ ಹ್ಯಾಡ್ಲೀ ಚೇಸ್‌ ಓದುತ್ತಿದ್ದೆ.

ಇಷ್ಟದ ಲೇಖಕ : ಯಾರೂ ಇಲ್ಲ.

ಮೂಢ ನಂಬಿಕೆ(ಮಿಥ್ಯಾಶ್ರದ್ಧೆ) : ದೇವರ ಮೇಲಿರುವ ದೃಢವಿಶ್ವಾಸ. ಭೂಮಿಯಲ್ಲಿ ದೇವರಿಗಿಂತ ಮಿಗಿಲಾದ ವಸ್ತು ಮತ್ತೊಂದಿಲ್ಲ.

ತುಂಬಾ ಭಯಪಡುವುದು : ಮತ್ತೆ ಮತ್ತೆ ಹುಟ್ಟಿಬರುವುದು.

ಇಷ್ಟದ ಪ್ರಾಣಿಗಳು : ಎಲ್ಲ ಪ್ರಾಣಿಗಳೂ(ಕಾಡುಪ್ರಾಣಿ ಹಾಗೂ ಸಾಕುಪ್ರಾಣಿ) ಇಷ್ಟ. ನಾಯಿ ಎಂದರೆ ಅಚ್ಚುಮೆಚ್ಚು.

ಇಷ್ಟದ ಬಣ್ಣ : ಬಿಳಿ.

ಇಷ್ಟದ ಹಾಲಿವುಡ್‌ ನಟರು : ಬ್ರೂನೋ, ಆರ್ನಾಲ್ಡ್‌ ಸ್ಕ್ವಾರ್‌ಜೆನೆಗರ್‌.

ಇಷ್ಟದ ಹಾಲಿವುಡ್‌ ನಟಿ : ಮರ್ಲಿನ್‌ ಮನ್ರೋ.

ಇಷ್ಟದ ಬಾಲಿವುಡ್‌ ನಟರು : ಶಮ್ಮಿ ಕಪೂರ್‌, ರಾಜ್‌ಕುಮಾರ್‌, ದಿಲೀಪ್‌ಕುಮಾರ್‌.

ಇಷ್ಟದ ಬಾಲಿವುಡ್‌ ನಟಿಯರು : ಮೌಸಮಿ ಚಟರ್ಜಿ, ಶರ್ಮಿಳಾ ಟ್ಯಾಗೋರ್‌, ಹೆಲೆನ್‌.

ಇಷ್ಟವಾದ ನಿರ್ದೇಶಕ : ಪುಟ್ಟಣ್ಣ ಕಣಗಾಲ್‌, ಸುಭಾಷ್‌ ಘಾಯ್‌, ವಿಲಿಯಮ್‌ ವೈಲರ್‌(ಬೆನ್‌-ಹ್ಯೂರ್‌)

ಹವ್ಯಾಸಗಳು : ಕುದುರೆ ಓಡಿಸುವುದು, ಹಾಡುವುದು, ಸುಗಮ ಸಂಗೀತ ಕೇಳುವುದು.

ಇಷ್ಟದ ಕ್ರೀಡೆ : ಕ್ರಿಕೆಟ್‌, ಟೆನಿಸ್‌.

ಇಷ್ಟದ ಕ್ರಿಕೆಟಿಗ : ಸರ್‌ ವಿವಿಯನ್‌ ರಿಚರ್ಡ್ಸ್‌.

ರಜಾದಿನ ಕಳೆಯಲು ಇಷ್ಟಪಡುವ ಸ್ಥಳ : ಆಸ್ಟ್ರೇಲಿಯಾ.

ಮರೆಯಲಾರದ ಕ್ಷಣ : ಜನರೊಂದಿಗೆ ಮನಸಾರೆ ಮಾತಾಡುವ ಎಲ್ಲ ಕ್ಷಣಗಳು.

ಜೀವನದ ದುಃಖಕರ ಕ್ಷಣ : ಯಾವುದೂ ಇಲ್ಲ.

ಇಷ್ಟದ ಸಂಗೀತ : ಯಾವುದೇ ಬಗೆಯ ಶಾಸ್ತ್ರೀಯ ಸಂಗೀತ.

ಅಭಿಮಾನಿಗಳಿಗೆ ಸಂದೇಶ : ಅಕ್ಕರೆ, ಪ್ರೀತಿಯಿಂದ ಇದ್ದರೆ ಯಶಸ್ಸು ಹುಡುಕಿಕೊಂಡು ಬರುತ್ತದೆ.

ನಿಮ್ಮ ಅನಿಸಿಕೆ ಬರೆಯಿರಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada