ಫಲಿಸಿತು ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೂಜಾಫಲ

By Super

Darshan wife Vijayalakshmi
ಗಂಡ ಹೆಂಡತಿ ಕಿತ್ತಾಡಿಕೊಂಡಿದ್ದು ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಅಲ್ಲಿಂದ ನ್ಯಾಯಾಲಯದ ಬಾಗಿಲು ತಟ್ಟಿದ್ದು, ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸಿದ್ದು ಇವಲ್ಲಾ ರಾದ್ಧಾಂತಗಳು ಮುಗಿದ ಮೇಲೆ ದರ್ಶನ್ ಹಾಗೂ ಆತನ ಪತ್ನಿ ವಿಜಯಲಕ್ಷ್ಮಿಗೆ ಜ್ಞಾನೋದಯವಾದಂತಿದೆ.

ಇಬ್ಬರಿಗೂ ತಮ್ಮತಮ್ಮ ತಪ್ಪಿನ ಅರಿವಾಗಿದೆ. ಅತ್ತ ದರ್ಶನ್ ಜೈಲು ಆಸ್ಪತ್ರೆ ಎಂದು ಹೈರಾಣಾದರೆ ಇತ್ತ ವಿಜಯಲಕ್ಷ್ಮಿ ತನ್ನ ಪತಿಯ ನೆನಪಿನಲ್ಲೇ ಕಾಲ ನೂಕುವಂತಾಯಿತು. ದರ್ಶನ್ ಆದಷ್ಟು ಬೇಗ ಬಿಡುಗಡೆಯಾಗಲಿ ಎಂದು ವಿಜಯಲಕ್ಷ್ಮಿ ಬೇಡಿಕೊಳ್ಳದ ದೇವರಿಲ್ಲ.

ಅವರು ಇಷ್ಟು ದಿನ ಮನೆಯಲ್ಲೇ ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡುತ್ತಿದ್ದರು. ತನ್ನ ಬಾಳಿನಲ್ಲಿ ಎದುರಾದ ಕಹಿ ಘಟನೆಯಿಂದ ಸಿಹಿ ತಿನ್ನುವುದನ್ನು ಬಿಟ್ಟಿದ್ದರು. ಈರುಳ್ಳಿ ಬೆಳ್ಳುಳ್ಳಿ ತಿನ್ನುವುದನ್ನು ಬಿಟ್ಟಿದ್ದರು. ಸಾತ್ವಿಕ ಆಹಾರಕ್ಕೆ ಒಗ್ಗಿಕೊಂಡಿದ್ದರು. ಇವೆಲ್ಲಾ ದರ್ಶನ್ ಬೇಗ ಜೈಲಿನಿಂದ ಮನೆಗೆ ಬರಲಿ ಎಂಬ ಉದ್ದೇಶದಿಂದ ಮಾಡಿದ್ದಾಗಿ ವಿಜಯಲಕ್ಷ್ಮಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇನ್ನು ದರ್ಶನ್ ಕೂಡ ಅಷ್ಟೇ ಜೈಲಿನಲ್ಲಿ ಹನುಮಾನ್ ಚಾಲೀಸ ಓದುತ್ತಿದ್ದರು. ಗಣೇಶನ ಸ್ತ್ರೋತ್ರಗಳನ್ನು ಪಠಿಸುತ್ತಿದ್ದರು. ಪತ್ನಿ ಮೇಲೆ ಕೈಮಾಡಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದರು. ಕೋಪತಾಪ ಎಲ್ಲ ಬಿಟ್ಟು ಶಾಂತಿಮಂತ್ರ ಜಪಿಸುತ್ತಿದ್ದರು. ಇವರಿಬ್ಬರ ಪೂಜಾಫಲ ಕಡೆಗೂ ಪ್ರತಿಫಲ ನೀಡಿದೆ. ಜೈಲಿನಿಂದ ಬಂದ ಕೂಡಲೆ ಕುಟುಂಬ ಸಮೇತ ಧರ್ಮಸ್ಥಳ, ತಿರುಪತಿಗೆ ಯಾತ್ರೆ ಹೊರಡುವ ಸಿದ್ಧತೆಯಲ್ಲಿದ್ದಾರೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Kannada actor Darsahn chants devotional Hanuman Chalisa in Parappana Agrahara central jail for his release, who was under judicial custody for allegedly assaulting and threatening to kill his wife Vijayalakshmi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X