»   » ಆಗಸ್ಟ್ 8ರಿಂದ ಗಣೇಶನ 'ಬೊಂಬಾಟ್' ಆಟ ಶುರು

ಆಗಸ್ಟ್ 8ರಿಂದ ಗಣೇಶನ 'ಬೊಂಬಾಟ್' ಆಟ ಶುರು

Subscribe to Filmibeat Kannada

'ಬೊಂಬಾಟ್' ಇದು ಗಣೇಶನ ಆಟ. ಖ್ಯಾತ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ, ಹೆಸರಾಂತ ನಿರ್ದೇಶಕ ಡಿ.ರಾಜೇಂದ್ರಬಾಬು ನಿರ್ದೇಶನದ 'ಬೊಂಬಾಟ್' ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಗೋಲ್ದನ್‌ಸ್ಟಾರ್ ಗಣೇಶ್ ಅವರ ಅಭಿನಯ ಹಿಂದಿನ ಚಿತ್ರಗಳಿಗಿಂತ 'ಬೊಂಬಾಟ್'ನಲ್ಲಿ ವಿಭಿನ್ನವಾಗಿದೆ. ಬೆಡಗಿ ರಮ್ಯಾರ ಚುರುಕಿನ ನಟನೆ, ಮನೋಮೂರ್ತಿ ಅವರ ಸಂಗೀತ ಮಾಧುರ್ಯತೆಯ ಈ ಚಿತ್ರ ಹಬ್ಬಹರಿದಿನಗಳ ಶ್ರಾವಣ ಮಾಸದಲ್ಲಿ ಚಿತ್ರರಸಿಕರಿಗೆ ಮುದ ನೀಡಲಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಧ್ವನಿಸುರುಳಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಎಂ.ನೀಲಕಂಠನಾಯ್ಡು ಅರ್ಪಿಸುತ್ತಿರುವ ಈ ಚಿತ್ರಕ್ಕೆ ಜನಾರ್ಧನ್ ಮಹರ್ಷಿ ಕಥೆ ಬರೆದಿದ್ದಾರೆ. ಆ ಕಥೆಗೆ ನಿರ್ದೇಶಕ ಡಿ.ರಾಜೇಂದ್ರಬಾಬು ಚಿತ್ರಕಥೆ ಬರೆದಿದ್ದಾರೆ. ಮನೋಮೂರ್ತಿ ಸಂಗೀತ, ಶೇಖರ್‌ಚಂದ್ರು ಛಾಯಾಗ್ರಹಣ, ಎಂ.ಎಸ್.ರಮೇಶ್ ಸಂಭಾಷಣೆ, ರವಿವರ್ಮ, ಡಿಫರೆಂಟ್‌ಡ್ಯಾನಿ ಸಾಹಸ, ಚಿನ್ನಿಪ್ರಕಾಶ್, ನೋಬಲ್ ನೃತ್ಯ, ರಮೇಶ್‌ಬಾಬು ಕಲೆ, ರಾಜಾರಾವ್ ಮತ್ತು ಸೋಮರಾಜ್ ಸಹನಿರ್ದೇಶನ, ಸುರೇಶ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಗಣೇಶ್, ರಮ್ಯಾ, ಮುಖೇಶ್‌ರಿಷಿ, ರಾಹುಲ್‌ದೇವ್, ಶೋಭರಾಜ್, ಗುರುದತ್, ಅವಿನಾಶ್, ಆದಿಲೋಕೇಶ್, ವಿನಯಾಪ್ರಕಾಶ್, ಶಾಂತಲಾ, ಕುರಿಗಳು ಸುನೀಲ್, ಕೆಂಪೇಗೌಡ, ಕೆ.ವಿ.ಮಂಜಯ್ಯ, ಸಂದೀಪ್, ಪತ್ರಕರ್ತ ವಿಜಯಸಾರಥಿ ಮುಂತಾದವರಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಗಣೇಶರ ಬೊಂಬಾಟ್ಗೆ 'ಯು' ಅರ್ಹತಾ ಪತ್ರ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada