ಕೋರ್ಟ್ ಮೆಟ್ಟಿಲೇರಿದ ನವರಸ ನಾಯಕ ಜಗ್ಗೇಶ್
ನಟ ಜಗ್ಗೇಶ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಅವರ ಮೇಲೆ ಯಾವುದೇ ಆಪಾದನೆ ಬಂದಿಲ್ಲ, ಆದರೂ ಯಾಕೆ ಹೋಗಿದ್ದಾರೆ ಎಂದು ಯೋಚಿಸುವ ಅಗತ್ಯವಿಲ್ಲ. ಕಾರಣ ಚಿತ್ರದ ನಿರ್ದೇಶಕರು ಹೇಳಿದ್ದಾರೆ, ಜಗ್ಗೇಶ್ ಹೋಗಿದ್ದಾರೆ. ಹೋಗಿರುವದು ಲಾಯರ್ ಆಗಿ, ಕ್ರಿಮಿನಲ್ ಆಗಿ ಅಲ್ಲ.
ಹೊಸ ಚಿತ್ರ ಮಂಜುನಾಥ ಬಿ ಎ ಎಲ್ ಎಲ್ ಬಿ ಯಲ್ಲಿ ಜಗ್ಗೇಶ್ ಲಾಯರ್. ಎದ್ದೇಳು ಮಂಜುನಾಥ ಚಿತ್ರದಂತೆಯೇ ಇಲ್ಲಿಯೂ ಜಗ್ಗೇಶ್ ಕುಡುಕನ ಪಾತ್ರ ಮಾಡುತ್ತಿದ್ದಾರೆ. ಬನ್ನಿ ನಿಮ್ಗೂ ಹಾಕ್ ಸ್ತೀನಿ..! ಎನ್ನುವುದು ಚಿತ್ರದ ಅಡಿಬರಹ. ಹಾಸ್ಯ ನಟರಾಗಿದ್ದ ಮೋಹನ್, ನರಸಿಂಹ ಚಿತ್ರದ ನಂತರ ಈ ಚಿತ್ರಕ್ಕೆ ನಿರ್ದೆಶನ ಮಾಡುತ್ತಿದ್ದಾರೆ.
ದಂಢಂ ದಶಗುಣಂ ಚಿತ್ರ ಮಾಡಿ ಸೋತಿದ್ದ ಎ.ಗಣೇಶ್, ಸಹೋದರ ಸುರೇಶ್ ಹೆಸರಿನಲ್ಲಿ ಈ ಮಂಜುನಾಥ ಬಿ ಎ ಎಲ್ ಎಲ್ ಬಿ ನಿರ್ಮಿಸುತ್ತಿದ್ದಾರೆ. ಇದೊಂದು ಪಕ್ಕಾ ಕಾಮಿಡಿ ಚಿತ್ರ. ಮುರಳಿ ಮೀಟ್ಸ್ ಮೀರಾ ಚಿತ್ರದಲ್ಲಿ ನಾಯಕಿಯಾಗಿದ್ದ ರೀಮಾವೊರಾ ಜಗ್ಗೇಶ್ ಗೆ ನಾಯಕಿ. ವಿನಯ್ ಚಂದ್ರ ಸಂಗೀತ, ಅಶೋಕ್ ಛಾಯಾಗ್ರಹಣ ಚಿತ್ರಕ್ಕಿದೆ. ಡಿಸೆಂಬರ್ 14ರಿಂದ ಶೂಟಿಂಗ್ ಪ್ರಾರಂಭವಾಗಲಿದೆ


Click it and Unblock the Notifications











