»   » ಗೋಕುಲ ಕೃಷ್ಣ ಬೆಡಗಿ ಅನನ್ಯಾಗೆ ನಿಶ್ಚಿತಾರ್ಥ

ಗೋಕುಲ ಕೃಷ್ಣ ಬೆಡಗಿ ಅನನ್ಯಾಗೆ ನಿಶ್ಚಿತಾರ್ಥ

Posted By:
Subscribe to Filmibeat Kannada

ತಮಿಳಿನ ನಾಡೋಡಿಗಳ್ ಖ್ಯಾತಿಯ ತಾರೆ ಅನನ್ಯಾಗೆ ಕಂಕಣಬಲ ಕೂಡಿಬಂದಿದೆ. ತ್ರಿಶೂರಿನ ಬಿಜಿನೆಸ್‌ಮ್ಯಾನ್ ಆಂಜನೇಯನ್ ಎಂಬುವವರನ್ನು ಅನನ್ಯಾ ಕೈಹಿಡಿಯಲಿದ್ದಾರೆ. ಈಕೆ ಕನ್ನಡದ ಗೋಕುಲ ಕೃಷ್ಣ ಎಂಬ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ.

ಫೆ.ರಂದು ಅನನ್ಯಾ ನಿಶ್ಚಿತಾರ್ಥ ನೆರವೇರಿದೆ. 2008ರಲ್ಲಿ ಬೆಳ್ಳಿತೆರೆಗೆ ಅಡಿಯಿಟ್ಟ ಅನನ್ಯಾ ಹೆಚ್ಚಾಗಿ ಅಭಿನಯಿಸಿದ್ದು ಮಲಯಾಳಂ ಹಾಗೂ ತಮಿಳು ಚಿತ್ರಗಳಲ್ಲಿ. ಈಕೆಯ ಭಾವಿ ಪತಿ ಆಂಜನೇಯನ್ ಸೆಟ್ಸ್‌ನಲ್ಲಿ ಚಿತ್ರೀಕರಣದಲ್ಲಿ ಅನನ್ಯಾರನ್ನು ಹಿಂಬಾಲಿಸುತ್ತಿದ್ದನಂತೆ.

ಇವರಿಬ್ಬರ ನಡುವೆ ಅಂಕುರಿಸಿದ ಪ್ರೇಮ ಈಗ ಮದುವೆ ತನಕ ಬಂದು ನಿಂತಿದೆ. ಈ ಮದುವೆಗೆ ಇಬ್ಬರ ಕುಟುಂಬಿಕರಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹಾಗಾಗಿ ಇಬ್ಬರು ಈಗ ಹಾರ ಬದಲಾಯಿಸಿಕೊಳ್ಳಲು ಮುಂದಾಗಿದ್ದಾರೆ. ಇವರಿಬ್ಬರ ಮದುವೆ ಎರ್ನಾಕುಲಂ ಬಳಿಯ ಪೆರಂಬೂರಿನಲ್ಲಿ ನಡೆಯಲಿದೆ. (ಏಜೆನ್ಸೀಸ್)

English summary
Kannada movie Gokula Krishna fame actress ananya has been engaged to Anjaneyan, a businessman of Thrissur. The Malayalam actress has just finished her work for her first Kannada film directed by Jaya Kannan.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X