ವೀರಪ್ಪನ್ ರಾಣಿಯಾಗಿ ಬೆಳಗಾವಿ ಬಾಲೆ ಲಕ್ಷ್ಮಿ ರೈ
ಕಾಡುಗಳ್ಳ, ನರಹಂತಹ, ದಂತಚೋರ, ಮೀಸೆಮಾವ ವೀರಪ್ಪನ್ ಕಾಡಿನ ರಾಣಿಯಾಗಿ ಬೆಳಗಾವಿ ಬಾಲೆ ಲಕ್ಷ್ಮಿ ರೈ ಕಾಣಿಸಿಕೊಳ್ಳಲಿದ್ದಾರೆ. 'ಸೈನೈಡ್' ಖ್ಯಾತಿಯ ಎಎಂಆರ್ ರಮೇಶ್ ನಿರ್ದೇಶಿಸುತ್ತಿರುವ 'ಅಟ್ಟಹಾಸ' ಚಿತ್ರದಲ್ಲಿ ಮುತ್ತುಲಕ್ಷ್ಮಿಯಾಗಿ ಲಕ್ಷ್ಮಿ ರೈ ಅಭಿನಯಿಸಲಿದ್ದಾರೆ.
'ಅಟ್ಟಹಾಸ' ಚಿತ್ರದಲ್ಲಿ ಮುತ್ತುಲಕ್ಷ್ಮಿ ಪಾತ್ರವನ್ನು ವಿಜಯಲಕ್ಷ್ಮಿ, ಪ್ರಿಯಾಮಣಿ, ರಮ್ಯಾ ಪೋಷಿಸಲಿದ್ದಾರೆ ಎಂಬ ಸುದ್ದಿ ಇತ್ತು. ಈಗ ಆ ಪಾತ್ರಕ್ಕೆ ಲಕ್ಷ್ಮಿ ರೈ ಆಯ್ಕೆಯಾಗಿದ್ದಾರೆ ಎನ್ನುತ್ತವೆ ಮೂಲಗಳು. ವೀರಪ್ಪನ್ ಪಾತ್ರದಲ್ಲಿ ನಟ ಕಿಶೋರ್ ಅಭಿನಯಿಸುತ್ತಿರುವುದು ಗೊತ್ತೇ ಇದೆ.
ಉಳಿದಂತೆ ರಾಜ್ ಕುಮಾರ್ ಪಾತ್ರವನ್ನು ಸುರೇಶ್ ಒಬೆರಾಯ್, ಪಾರ್ವತಮ್ಮ ಪಾತ್ರದಲ್ಲಿ ಸುಲಕ್ಷಣಾ ಕಾಣಿಸಲಿದ್ದಾರೆ. ವೀರಪ್ಪನ್ 'ಅಟ್ಟಹಾಸ' ಚಿತ್ರ ಜನವರಿ 26, 2012ರ ಗಣರಾಜ್ಯೋತ್ಸವಕ್ಕೆ ತೆರೆಕಾಣಲಿದೆ. ರಾಜ್‌ಕುಮಾರ್ ಅವರ ಸಹವರ್ತಿಯಾಗಿ 24ವರ್ಷ ಅವರೊಂದಿಗಿದ್ದ ನಾಗಪ್ಪ ಮಾರಡಗಿ ಅವರೂ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಂದೀಪ್ ಚೌಟ ಅವರ ಸಂಗೀತ, ವಿಜಯ್ ಮಿಲ್ಬನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











