ಗೂಳಿ ಬೆಡಗಿ ಮಮತಾ ಮೋಹನ್ ದಾಸ್ ಎಂಗೇಜ್‌ಮೆಂಟ್
ನಟಿ ಮಮತಾ ಮೋಹನ್ ದಾಸ್ ಮದುವೆ ಸುದ್ದಿ ಪಕ್ಕಾ ಆಗಿದೆ. ಈ ಹಿಂದೊಮ್ಮೆ ಆಕೆ ತನ್ನ ಎಂಗೇಜ್‌ಮೆಂಟ್ ಬಗ್ಗೆ ಮಾತನಾಡಿದ್ದಳು. ಜನವರಿ 11ರಂದು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದೇನೆ. ಬಳಿಕ 2012ರಲ್ಲಿ ಪೀಪೀಪೀ ಡುಂ ಡುಂ ಡುಂ ಗಟ್ಟಿಮೇಳ ಮೊಳಗಲಿದೆ.
ಈಕೆ ಮದುವೆಯಾಗುತ್ತಿರುವ ವರಮಹಾಶಯನ ಹೆಸರು ಮಾತ್ರ ಇನ್ನೂ ಗೊತ್ತಾಗಿಲ್ಲ. ಈತ ಈಕೆಯ ಬಾಲ್ಯಮಿತ್ರನಂತೆ. ಸದ್ಯಕ್ಕೆ ಬಹ್ರೇನ್‌ನಲ್ಲಿ ಉದ್ಯಮಿಯಾಗಿ ಸೆಟ್ಲ್ ಆಗಿದ್ದಾನೆ. ಸದ್ಯಕ್ಕೆ ಎಂಗೇಜ್‌ಮೆಂಟ್ ಮಾಡಿಕೊಂಡು, ಕೈಯಲ್ಲಿರುವ ಪ್ರಾಜೆಕ್ಟ್‌ಗಳನ್ನು ಮುಗಿಸಿ ಬಳಿಕ ಹಸೆಮಣೆ ಏರುವುದಾಗಿ ಮಮತಾ ಹೇಳಿಕೊಂಡಿದ್ದಾರೆ.
ಮಮತಾ ಮೋಹನ್ ದಾಸ್ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸಖತ್ ಬ್ಯುಸಿ. ಸಾಲದಕ್ಕೆ ಈಕೆ ಗಾಯಕಿ ಕೂಡ. 'ಗೂಳಿ' ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಪರಿಚಯವಾಗಿದ್ದರು. ಮತ್ತೆ ಈಕೆಗೆ ಕನ್ನಡದಲ್ಲಿ ನಟಿಸುವ ಚಾನ್ಸ್ ಸಿಗಲೇ ಇಲ್ಲ ಎಂಬುದು ದುರಂತ. (ಏಜೆನ್ಸೀಸ್)
More from Filmibeat
English summary
Kannada Gooli fame actress-singer Mamta Mohandas' engagement date fixed. She is getting engaged on November 11 to her Bahrain based childhood friend and a distant relative in Kochi.


Click it and Unblock the Notifications











