twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಬೆಳ್ಳಿಪರದೆ ಮೇಲೆ ಪೂಜಾ'ಗಾಂಧಿ'ಗಿರಿ!

    By Staff
    |

    ಕನ್ನಡಕ್ಕೆ ಸಿಕ್ಕ ಕನ್ನಡದವರೇ ಆದ ಕನ್ನಡೇತರ ನಟಿ ಪೂಜಾಗಾಂಧಿ! ಕನ್ನಡ ಚಿತ್ರರಂಗದಲ್ಲಿ 'ಮುಂಗಾರು ಮಳೆ' ಹುಯ್ಯುವ ತನಕ ಅಪರಿಚರಾಗಿದ್ದು ನಂತರ ದಿಢೀರನೆ ಖ್ಯಾತಿಯ ಉತ್ತುಂಗ ಏರಿದ ಹುಡುಗಿ. ಮಿಲನದ ಮೂಲಕ ಮುಂಗಾರು ಮಳೆಯನ್ನು ಮರೆಸಿ ತಾಜ್ ಮಹಲ್ ಹಾಗೂ ಬುದ್ಧಿವಂತನ ಮೂಲಕ ಕನ್ನಡ ಚಿತ್ರರಸಿಕರನ್ನ್ನುಕಾಡುತ್ತಿರುವ ನಟಿ. ಇಂದು (ಅ.7) ಪೂಜಾಗಾಂಧಿಯ ಜನುಮದಿನ ಎಂದು ಹೇಳಲಷ್ಟೇ ಇಷ್ಟೆಲ್ಲಾ ಪೀಠಿಕೆ.

    ಹೆಂಗಸರ ವಯಸ್ಸು, ಗಂಡಸರ ಸಂಬಳ ಕೇಳಬಾರದು ಎಂಬ ಗಾದೆಯೇ ಇರುವುದರಿಂದ ಪೂಜಾ ವಯಸ್ಸು ಇಲ್ಲಿ ಅಪ್ರಸ್ತುತ. ಪ್ರಸ್ತುತ ಪೂಜಾ 'ಗಾಂಧಿ'ನಗರದಲ್ಲಿ ಬ್ಯುಸಿಯಾಗಿರುವ ನಟಿ. ಜನುಮದ ಗೆಳತಿ, ಮಹರ್ಷಿ, ಅನು ಚಿತ್ರಗಳು ತೆರೆಕಾಣಬೇಕಾಗಿವೆ. ತಮಿಳಿನಲ್ಲಿ ಅರ್ಜುನ್ ಸರ್ಜಾ ಜತೆ ಒಂದು ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಇಂದು ಅವರು ಬೆಂಗಳೂರಿನ ರಮಣಶ್ರೀ ಅಂಧರ ಶಾಲೆಯ ಮಕ್ಕಳ ಜೊತೆ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

    ಕನ್ನಡಕ್ಕೆ ಬಂದು ಕನ್ನಡದವರೇ ಆದ ಬಹಳಷ್ಟು ನಟಿಯರು ಇದ್ದಾರೆ. ಅವರಲ್ಲಿ ಮುಖ್ಯವಾಗಿ ಲಕ್ಷ್ಮಿ, ಸರಿತಾ, ಮಾಧವಿ, ಗೀತಾ, ಸುಹಾಸಿನಿ, ಮಾಲಾಶ್ರೀ ಅವರ ಹೆಸರುಗಳನ್ನು ಪ್ರಸ್ತಾಪಿಸಬಹುದು. ಆದರೆ ಇತ್ತಿತ್ತಲಾಗಿ ಹಾಗೆ ಬಂದು ಹೀಗೆ ಹೋಗುವವರು ಹೆಚ್ಚಾಗುತ್ತಿದ್ದಾರೆ. ಆದರೆ ಪೂಜಾಗಾಂಧಿ ಮಾತ್ರ ಇದಕ್ಕೆ ಅಪವಾದ. ಕನ್ನಡ ಚಿತ್ರರಂಗಕ್ಕೆ ತಮ್ಮ ಪ್ರತಿಭೆ, ಸಾಧನೆಗಳನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ ನಟಿ ಎನ್ನಬಹುದು. ಅವರು ಮುಂದೆಯೂ ಸದಭಿರುಚಿಯ ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತಾ ಅವರ ಬಾಳ ಪಯಣ ಹೀಗೇ ಸಾಗಲಿ ಎಂದು ದಟ್ಸ್ ಕನ್ನಡ ಸಿನಿ ತಂಡ ಹಾರೈಸುತ್ತದೆ.

    (ದಟ್ಸ್ ಕನ್ನಡ ಸಿನಿವಾರ್ತೆ)

    Friday, April 19, 2024, 7:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X