»   » ಕ್ರೇಜಿಸ್ಟಾರ್ ಜೊತೆ 'ಮಲ್ಲ'ನ ಬೆಡಗಿ ಪ್ರಿಯಾಂಕಾ ಉಪೇಂದ್ರ

ಕ್ರೇಜಿಸ್ಟಾರ್ ಜೊತೆ 'ಮಲ್ಲ'ನ ಬೆಡಗಿ ಪ್ರಿಯಾಂಕಾ ಉಪೇಂದ್ರ

Posted By:
Subscribe to Filmibeat Kannada
<ul id="pagination-digg"><li class="next"><a href="/news/07-priyanka-upendra-ravichandran-acts-remake-traffic-aid0172.html">Next »</a></li></ul>

ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆ ಮತ್ತೆ ನಟಿಸಲಿದ್ದಾರೆ 'ಮಲ್ಲ'ನ ಬೆಡಗಿ ಪ್ರಿಯಾಂಕಾ ತ್ರಿವೇದಿ. ಅವರೀಗ ಕನ್ನಡದ ಸೂಪರ್ ಸ್ಟಾರ್ ಉಪೇಂದ್ರರ ಪತ್ನಿ ಕೂಡ ಆಗಿರುವುದರಿಂದ ಪ್ರಿಯಾಂಕಾ ಉಪೇಂದ್ರ ಎನ್ನಬೇಕು. ಎರಡು ಮಕ್ಕಳ ತಾಯಿಯಾಗಿರುವ ಪ್ರಿಯಾಂಕ ಇತ್ತೀಚಿಗೆ ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಬಾಲಿವುಡ್ ಚಿತ್ರದಲ್ಲೂ ನಟಿಸಿ ಬಂದಿದ್ದಾರೆ.

ಮಲಯಾಳಂ ಸೂಪರ್ ಹಿಟ್ 'ಟ್ರಾಫಿಕ್' ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡಲಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್. ಆ ಚಿತ್ರಕ್ಕೆ ಅವರಿಟ್ಟ ಶೀರ್ಷಿಕೆ 'ಕ್ರೇಜಿಸ್ಟಾರ್'. ಅವರ ಮಡದಿಯಾಗಿ ನಟಿಸಲಿದ್ದಾರೆ ಪ್ರಿಯಾಂಕಾ ಉಪೇಂದ್ರ. ಈ ಬಗ್ಗೆ ಮಾತನಾಡಿರುವ ಪ್ರಿಯಾಂಕ "ಒಂದು ತಿಂಗಳ ಹಿಂದೆ ಈ ಬಗ್ಗೆ ರವಿ ಸರ್ ನಮ್ಮ ಮನೆಗೆ ಬಂದು ನನ್ನ ಹಾಗೂ ಉಪ್ಪಿ ಜೊತೆ ಮಾತನಾಡಿದ್ದರು" ಎಂದಿದ್ದಾರೆ.

"ನನಗೆ ಈ ಚಿತ್ರದಲ್ಲಿ ಒಂದು ಪ್ರಮುಖವಾದ ಪಾತ್ರವಿದೆ ಎಂದಿದ್ದಾರೆ ರವಿಚಂದ್ರನ್. ಅದು ಅವರ ಮಡದಿಯಾಗಿ ಪಾತ್ರ. ಅಷ್ಟೇ ಅಲ್ಲ, ಅದು ನನ್ನ ಈಗಿನ ವಯಸ್ಸು ಹಾಗೂ ಮನಸ್ಥಿತಿಗೆ ತಕ್ಕದಾದ ಪಾತ್ರ. ನಾನು ಈ ಬಗ್ಗೆ ನನ್ನ ಪತಿ ಉಪೇಂದ್ರ ಜೊತೆ ಚರ್ಚಿಸಿ ನಿರ್ಧರಿಸಿದ್ದೇನೆ. ಉಪ್ಪಿ ಈ ವಿಷಯದಲ್ಲಿ ತುಂಬಾ ಸಪೋರ್ಟಿವ್. ನನಗೆ ಚಿತ್ರದ ನಟನೆ ಬಗ್ಗೆ ಕೆಲವು ಟಿಪ್ಸ್ ಗಳನ್ನು ಕೂಡ ನೀಡಿದ್ದಾರೆ" ಎಂದಿದ್ದಾರೆ ಪ್ರಿಯಾಂಕ. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/07-priyanka-upendra-ravichandran-acts-remake-traffic-aid0172.html">Next »</a></li></ul>
English summary
Actress Priyanka Upendra is to act Crazy Star Ravichandran Remake movie Malayalam Traffic. She told that she acted many Bengali and Bollywood movies and now, this is the first Kannada movie after her marriage with Upendra. &#13; &#13;

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada