ಗಾಂಧಿನಗರಕ್ಕೆ ನಿರ್ಮಾಪಕಿಯಾಗಿ ರಾಧಿಕಾ ಆಗಮನ

By Rajendra

ನಟಿ ರಾಧಿಕಾ ಬಾಣಂತನ ಮುಗಿಸಿಕೊಂಡು ಈಗ ಗಾಂಧಿನಗರಕ್ಕೆ ಮರಳಿದ್ದಾರೆ. ಆದರೆ ಈ ಬಾರಿ ಅವರು ತೆರೆ ಮುಂದೆ ಬರುತ್ತಿಲ್ಲ. ನಿರ್ಮಾಪಕಿಯಾಗಿ ತೆರೆಹಿಂದೆ ಸರಿದಿದ್ದಾರೆ. ತನ್ನ ಸೋದರ ರವಿರಾಜ್ ಹೆಸರಿನಲ್ಲಿ ನಿರ್ಮಿಸುತ್ತಿರುವ ಚಿತ್ರಕ್ಕೆ 'ಬೆಂಗಳೂರು 79' ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಎಚ್ ಎಸ್ ಸಹನ.

ಹೆಸರೇ ಹೇಳುವಂತೆ ಇದೊಂದು ಪಕ್ಕಾ ಮಾಸ್ ಚಿತ್ರ. ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದ ಸತ್ಯ ಘಟನೆ ಆಧಾರವಾಗಿ ಚಿತ್ರ ತೆರೆಗೆ ಬರುಲಿದೆ. "ಬಿವೇರ್ ಆಫ್ ಕ್ರಿಮಿನಲ್ಸ್" ಎಂಬುದು ಚಿತ್ರದ ಅಡಿಬರಹ. ಅನೀಶ್ ತೇಜೇಶ್ವರ್ ಹಾಗೂ ಅಭಿನಯಾ ಚಿತ್ರದ ಪ್ರಮುಖ ಪಾತ್ರಧಾರಿಗಳು. ಉಳಿದಂತೆ ರವಿಕಾಳೆ, ಅಜಯ್, ಸಾಧು ಕೋಕಿಲ, ಜಗದೀಶ್, ಸಂಪತ್ ಮತ್ತಿತರರು ತಾರಾಬಳಗದಲ್ಲಿದ್ದಾರೆ.

ಚಿತ್ರದ ತಾಂತ್ರಿಕ ಬಳಗದಲ್ಲಿ ಗುರುಪ್ರಶಾಂತ್ ರೈ ಛಾಯಾಗ್ರಹಣ, ದೇವಿಕೃಪಾ ಸಂಗೀತ, ಕೆ ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ.ಚಿತ್ರದ ನಾಯಕ ನಟ ಅನೀಶ್ ಅವರು 'ನಮ್ ಏರಿಯಾಲ್ ಒಂದಿನ' ಹಾಗೂ 'ಪೊಲೀಸ್ ಕ್ವ್ವಾಟ್ರಸ್' ಚಿತ್ರಗಳಲ್ಲಿ ಅಭಿನಯಿಸಿದ್ದರು. ಈಗಾಗಲೆ ಬೆಂಗಳೂರು ಭೂಗತ ಜಗತ್ತಿನ ಬಗ್ಗೆ, ರೌಡಿಯಿಸಂ ಬಗ್ಗೆ ಸಾಕಷ್ಟು ಚಿತ್ರಗಳು ಬಂದು ಹೋಗಿವೆ. ಬೆಂಗಳೂರು 79 ಚಿತ್ರದಲ್ಲಿ ವಿಶೇಷ ಏನಿರಬಹುದು? ಎಂಬ ಸಣ್ಣ ಕುತೂಹಲವಂತೂ ಇದ್ದೇ ಇದೆ.

More from Filmibeat

English summary
After a long break actress Radhika back to Gandhinagar. But this time she has not acting in a film producing film titled as Bangalore 79. The caption for the title says Beware of Criminals! Newcomer HS Sahana is directing the film with Guruprashanth Rai as cameraman and Devi Krupa as music director.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X