ಸೆಕ್ಸಿ ಟೂನ್ ಕ್ವೀನ್ ಸವಿತಾ ಬಾಬಿಯಾಗಿ ರಮ್ಯಶ್ರೀ
ಸವಿತಾ ಬಾಬಿ ಯಾರಿಗೆ ತಾನೇ ಗೊತ್ತಿಲ್ಲ. ಅಂತರ್ಜಾಲದಲ್ಲಿ ಪೋರ್ನ್ ಟೂನ್ಸ್ ಸಾಮ್ರಾಜ್ಯದ ಅಧಿನಾಯಕಿಯಾದ ಈ ಪಾತ್ರಧಾರಿಣಿ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಈಗ ಕಾಮಿಕ್ಸ್ ಜಗತ್ತಿನ ಈ ಸೆಕ್ಸಿ ಪಾತ್ರವನ್ನು ಬೆಳ್ಳಿತೆರೆಗೆ ತರಲಾಗುತ್ತಿದೆ.
ಸವಿತಾ ಬಾಬಿ ಪಾತ್ರಕ್ಕೆ ಸರಿ ಹೊಂದುವ ನಾಯಕಿಯ ಹುಡುಕಾಟಕ್ಕೆ ಹೆಚ್ಚಿನ ಸಮಯ ವ್ಯರ್ಥವಾಗಿಲ್ಲ. ಕಾಂಡೋಮ್ ಜಾಹೀರಾತುಗಳ ರಾಣಿ ರಮ್ಯಶ್ರೀಯನ್ನು ಅವಿರೋಧವಾಗಿ ಸವಿತಾ ಬಾಬಿಯ ರೆಡ್ ಡ್ರೆಸ್ ಒಳಗೆ ತೂರಿಸಲು ತೆಲುಗು ನಿರ್ಮಾಪಕರು ಸಿದ್ಧರಾಗಿದ್ದಾರೆ.
ಮಾದಕ, ರೋಮಾಂಚನಕಾರಿ ಕಥೆಯುಳ್ಳ ಈ ಚಿತ್ರಕ್ಕೆ ಹೊಸ ನಿರ್ದೇಶಕನೊಬ್ಬನನ್ನು ನಿರ್ಮಾಪಕರು ಕರೆತಂದಿದ್ದಾರೆ.
'ಸವಿತಾ ಆಂಟಿ' ಎಂದು ಚಿತ್ರಕ್ಕೆ ಹೆಸರಿಡಲಾಗಿದ್ದು, ರಿಲೀಸ್ ಮಾತ್ರ ಎಲ್ಲಿ ಯಾವಾಗ ಎಂಬುದನ್ನು ಗುಟ್ಟಾಗಿ ಇಡಲಾಗಿದೆ. ಚಿತ್ರದ ಕಥೆಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದ್ದು, ಪ್ರೇಕ್ಷಕರ ಮೈಮನ ತಟ್ಟುವಂತಿರುತ್ತದಂತೆ.
ಚಿತ್ರ ಮುಗಿಯುವವರೆಗೂ ಹೆಚ್ಚಿನ ವಿವರಗಳನ್ನು ಹೊರ ಹಾಕದೇ ಗುಟ್ಟಾಗೇ ಎಲ್ಲವನ್ನು ಮುಗಿಸಲು ನಿರ್ಮಾಪಕರು ನಿರ್ಧರಿಸಿದ್ದಂತಿದೆ.
ಕೈಲಿ ಚಿತ್ರಗಳಿಲ್ಲದೆ ಕೊಳೆಯುತ್ತಿದ್ದ ರಮ್ಯಶ್ರೀಗೆ ಸವಿತಾ ಬಾಬಿ ದೆಸೆಯಿಂದ ಭಾಗ್ಯದ ಬಾಗಿಲು ತೆರೆಯುತ್ತದೆ ಎನ್ನಲಾಗಿದೆ. ಸವಿತಾ ಬಾಬಿಗೆ ಪೈಪೋಟಿ ನೀಡುವಂತೆ ತೆರೆದೆದೆ ಪ್ರದರ್ಶನ ನೀಡಲು ರಮ್ಯಶ್ರೀ ಕೂಡಾ ತಯಾರಿ ನಡೆಸಿದ್ದಾಳೆ ಎಂಬ ಗುಸುಗುಸು ಪಿಸುಮಾತು ಟಾಲಿವುಡ್ ಗೋಡೆಗಳ ಸಂದಿಗಳಿಂದ ಪ್ರತಿದನಿಸುತ್ತಿದೆ.


Click it and Unblock the Notifications











