ಸಾಹುಕಾರ್ ಜಾನಕಿ ಸೆಪ್ಟೆಂಬರ್ 10ರಂದು ನಿಮ್ಮ ಕಣ್ಮುಂದೆ

By Rajendra

Actress Sahukar Janaki
ಭಾಷೆಗಳ ಗಡಿಮೀರಿ ಪ್ರಮುಖ ನಟಿಯಾಗಿ ಹೆಸರು ಮಾಡಿರುವ ಸಾಹುಕಾರ್ ಜಾನಕಿ ಅವರು ಚಲನಚಿತ್ರ ಜಗತ್ತಿಗೆ ಬರುವ ಮೊದಲು ಆಕಾಶವಾಣಿ ಕಲಾವಿದೆಯಾಗಿದ್ದರು. ಈ ತಿಂಗಳ ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಅವರು ಕನ್ನಡ ಚಿತ್ರರಸಿಕರೊಂದಿಗೆ ಮುಖಾಮುಖಿಯಾಗಲಿದ್ದಾರೆ.

'ದೇವಕನ್ನಿಕಾ' ಜಾನಕಿ ಅವರು ಅಭಿನಯಿಸಿದ ಮೊದಲ ಕನ್ನಡ ಚಿತ್ರ. 'ಸಾಹುಕಾರ' ಚಿತ್ರದಲ್ಲಿನ ಅವರ ಅವಿಸ್ಮರಣೀಯ ಅಭಿನಯ ಜಾನಕಿ ಅವರ ಹೆಸರಿನೊಂದಿಗೆ ಶಾಶ್ವತವಾಗಿ ಸೇರಿಹೋಗಿದೆ.ಗೌರಿ, ಭಾಗ್ಯ, ಚಕ್ರ, ಕನ್ಯಾರತ್ನ, ರತ್ನಗಿರಿ ರಹಸ್ಯ, ಸ್ಕೂಲ್ ಮಾಸ್ಟರ್ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿರುವ ಸಾಹುಕಾರ್ ಜಾನಕಿ ಅವರದು ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹೆಗ್ಗಳಿಕೆ.

ತಾಯಿಗೆ ತಕ್ಕ ಮಗ, ಕುಲಪುತ್ರ, ಶಬ್ದವೇದಿ ಹೀಗೆ ಹಲವಾರು ಚಿತ್ರಗಳಲ್ಲಿ ಪೋಷಕ ಪಾತ್ರಧಾರಿಯಾಗಿ ಅಭಿನಯಿಸಿರುವ ಜಾನಕಿ ಅವರಿಗೆ ಕನ್ನಡ ವಾಕ್ಚಿತ್ರ ಅಮೃತೋತ್ಸವ, ಕಲೈಮಾಮಣಿ, ಎಂಜಿಆರ್ ಪ್ರಶಸ್ತಿಗಳು ಸಂದಿವೆ.

ಸ್ಥಳ ಎಂದಿನಂತೆ ಪ್ರಿಯದರ್ಶಿನಿ ಚಿತ್ರಮಂದಿರ, ಬಾದಾಮಿ ಹೌಸ್, ಜೆ ಸಿ ರಸ್ತೆ, ಬೆಂಗಳೂರು: 02. ಶನಿವಾರ 10ನೇ ಸೆಪ್ಟೆಂಬರ್ 2011ರಂದು ಸಂಜೆ 4.30ಕ್ಕೆ ಸಾಹುಕಾರ್ ಜಾನಕಿ ನಿಮ್ಮ ಮುಂದಿರುತ್ತಾರೆ. ಹೋಗಿ ಮಾತನಾಡಿಸಿ. ಹಿರಿಯ ಕಲಾವಿದೆಯ ಅಂತರಂಗದ ಮಾತುಗಳಿಗೆ ಕಿವಿಗೊಡಿ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Veteran Kannada actress Sahukar Janaki will be the Guest of Honour at the Belli Hejje event organized by the Karnataka Chalanachitra Academy on Sepetmbe 10. She has acted in School Master, Devakannika, Saahukara and other movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X