ನಟ ದರ್ಶನ್‌ಗೆ ಒಳ್ಳೆ ಫ್ಯೂಚರ್ ಇದೆ, ನಟಿ ಶ್ರುತಿ

ದರ್ಶನ್‌ಗೆ ಜಾಮೀನು ಸಿಕ್ಕಿದ್ದು ಕೇಳಿ ಖುಷಿಯಾಗುತ್ತಿದೆ. ಗಂಡ ಹೆಂಡತಿ ಚೆನ್ನಾಗಿದ್ದರೆ ಸಂಸಾರ ಚೆನ್ನಾಗಿದೆ ಎಂಥಲೆ ಅಲ್ಲವೆ. ವಿಜಯಲಕ್ಷ್ಮಿ ಕುಟುಂಬ ಚೆನ್ನಾಗಿರಲಿ ಎಂಬುದೇ ನನ್ನ ಆಸೆ. ನಾವೆಲ್ಲರೂ ಮನುಷ್ಯರು. ನಾವೇನು ದೇವರಲ್ಲವಲ್ಲ. ದೇವರು ಮನುಷ್ಯನಿಗೆ ತಪ್ಪು ಮಾಡುವಂತಹ ಚಾನ್ಸ್ ಕೊಡ್ತಾನೆ. ಹಾಗೆಯೇ ಅದನ್ನು ತಿದ್ದಿಕೊಳ್ಳುವ ಅವಕಾಶವನ್ನೂ ಕೊಡುತ್ತಾರೆ ಎಂದು ಅವರು ಕೊಂಚ ವೇದಾಂತಕ್ಕೆ ಹೊರಳಿದರು.
ದರ್ಶನ್ ಅವರಿಗೆ ಫ್ಯಾನ್ಸ್ ಬೆಂಬಲವಿದೆ. ಅವರ ತಂದೆ ತಾಯಿ ಆಶೀರ್ವಾದವೂ ಇದೆ. ಅವರು ತಪ್ಪು ತಿದ್ದಿಕೊಂಡು ಮುನ್ನಡೆಯಲಿ. ಅವರಿಗೆ ಒಳ್ಳೆಯ ಫ್ಯೂಚರ್ ಇದೆ. ಒಳ್ಳೆಯ ಹೆಂಡತಿ ಮಗು ಇದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಲಿ. ಅವರ ಇತ್ತೀಚಿನ ಸಾರಥಿ ಚಿತ್ರ ಚೆನ್ನಾಗಿ ಓಡುತ್ತಿದೆ ಎಂದು ಕೇಳಿದೆ. ತುಂಬಾ ಸಂತೋಷವಾಯಿತು ಎಂದು ತಮ್ಮ ನಾಲ್ಕು ಮಾತುಗಳನ್ನು ಮುಗಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Kananda film actress Shruti expressed her happyness over Darshan's release. She advises that in future both the couple Spend time together and accept that some problems can’t be solved. More over Darshan has a good future.


Click it and Unblock the Notifications











