ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದಲ್ಲಿ ತ್ರಿಷಾ ಕೃಷ್ಣನ್
ಗೀತರಚನೆಕಾರ ಕವಿರಾಜ್ ಈಗ ಫುಲ್ ಬಿಜಿ. ಮೂರು ದೊಡ್ಡ ಬಜೆಟ್ ಚಿತ್ರದ ಎಲ್ಲಾ ಹಾಡುಗಳನ್ನು ಕವಿರಾಜ್ ಒಬ್ಬರೇ ಬರೆದಿದ್ದಾರೆ. ಗಣೇಶ್ ಅಭಿನಯದ 'ಕೂಲ್', ಚಿರಂಜೀವಿ ಸರ್ಜಾ, ರಮ್ಯಾ ಅಭಿನಯದ 'ದಂಡಂದಶಗುಣಂ' ಮತ್ತು ರವಿಚಂದ್ರನ್, ರಮೇಶ್ ಅಭಿನಯದ 'ಹ್ಯಾಪಿ' ಚಿತ್ರಗಳಿಗೆ ಕವಿರಾಜ್ ಪೆನ್ ಹಿಡಿದಿದ್ದಾರೆ. ಅಲ್ಲದೆ ಇವರು ಸಾಹಿತ್ಯ ನೀಡಿರುವ ಬಿಡುಗಡೆಗೆ ಸಿದ್ದವಾಗಿರುವ ಬಹು ನಿರೀಕ್ಷಿತ 'ಸಂಜು ವೆಡ್ಸ್ ಗೀತಾ' ಚಿತ್ರದ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ.
ವಿಷಯ ಏನಂದರೆ ಕವಿರಾಜ್ ಈಗ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ. ಚಿತ್ರದ ಹೆಸರು 'ಬುಲ್ ಬುಲ್' ಆದರೆ ಇದೊಂದು ರಿಮೇಕ್ ಚಿತ್ರ. ಇದು ತೆಲುಗಿನಲ್ಲಿ ಸೂಪರ್ ಹಿಟ್ ಆದ 'ಡಾರ್ಲಿಂಗ್' ಚಿತ್ರದ ಅವತರಣಿಕೆ. ಮೂಲ ಚಿತ್ರದಲ್ಲಿ ಪ್ರಭಾಸ್ ಮತ್ತು ಕಾಜಲ್ ಅಗರವಾಲ್ ಅಭಿನಯಿಸಿದ್ದರು.
'ಬುಲ್ ಬುಲ್' ಚಿತ್ರಕ್ಕೆ ದರ್ಶನ್ ತೂಗುದೀಪ್ ನಾಯಕ. ನಾಯಕಿ ಸ್ಥಾನಕ್ಕೆ ತೆಲುಗು, ತಮಿಳಿನ ಬಿಜಿ ನಟಿ ತ್ರಿಷಾ ಕೃಷ್ಣನ್ ತರಲು ನಿರ್ಮಾಪಕ ಮತ್ತು ನಿರ್ದೇಶಕರು ನಿರ್ಧರಿಸಿದ್ದಾರೆ. ಈ ಬಗ್ಗೆ ಚಿತ್ರ ತಂಡ ತ್ರಿಷಾ ಅವರನ್ನು ಹೇಗಾದರೂ ಮಾಡಿ ಕರೆತರಲು ಚೆನ್ನೈ ನಲ್ಲಿದೆ. ಚಿತ್ರಕ್ಕಿರುವ ಬಜೆಟ್ ಮತ್ತು ಕಾಲ್ ಶೀಟ್ ಹೊಂದಿಕೆಯಾದರೆ ತ್ರಿಷಾ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡುವುದು ಗ್ಯಾರಂಟಿ.


Click it and Unblock the Notifications











