ಅಮೂಲ್ಯ ಸಹೋದರ ದೀಪಕ್ ಕೂಡ ಅದೇ ಮಾತು

ಮನಸಾಲಜಿ ಚಿತ್ರದ ಬಳಿಕ ಅಮೂಲ್ಯ ಅವರಿಗೆ ಹಲವಾರು ಆಫರ್‌ಗಳು ಬಂದಿದ್ದವು. ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಶೈಲೂ', ಶೈಲೇಂದ್ರ ಬಾಬು ಅವರ 'ಆಟ', ಯೋಗರಾಜ್ ಭಟ್ ಅವರ ಹೊಸ ಚಿತ್ರಕ್ಕೂ ಆಫರ್‌ಗಳು ಬಂದಿದ್ದವು. ಆದರೆ ಓದಿನ ಕಡೆಗೆ ಅಮೂಲ್ಯ ಹೆಚ್ಚು ಗಮನಹರಿಸಿರುವ ಕಾರಣ ಆಕೆ ಬಂದ ಅವಕಾಶಗಳನ್ನೆಲ್ಲಾ ಬೇಡ ಎಂದಿದ್ದಾರೆ.
ಚಿತ್ರರಂಗದಲ್ಲಿ ನೆಮ್ಮದಿ ಇಲ್ಲ. ಅಮೂಲ್ಯ ಓದ ಬೇಕು ಎಂದು ನಿರ್ಧರಿಸಿದ್ದಾರೆ. ಆಕೆಯ ನಿರ್ಧಾರಕ್ಕೆ ನಮ್ಮ ಕುಟುಂಬದ ಬೆಂಬಲ ಇದ್ದೇ ಇದೆ ಎಂದಿದ್ದಾರೆ. ಅಮೂಲ್ಯ ಅವರು ಎಂದೂ ಪೂರ್ಣ ಪ್ರಮಾಣದಲ್ಲಿ ಚಿತ್ರರಂಗದಲ್ಲಿ ತೊಡಗಿಕೊಂಡಿರಲಿಲ್ಲ. ಕಾಲೇಜಿಗೆ ರಜೆ ಇದ್ದಾಗ ಮಾತ್ರ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದರು. ಹಾಲಿಡೇ ಹೀರೋಯಿನ್ ಎನ್ನಿಸಿಕೊಂಡಿದ್ದರು. (ಏಜೆನ್ಸೀಸ್)
More from Filmibeat
English summary
Kannada films actress Amoolya says goodbye to her film career. The actress made her kitty nil well in advance and also stopped accepting forthcoming offers. Manasology may be her last kannada film. She will concentrates on her education Sources close to Amoolya said.


Click it and Unblock the Notifications











