ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಸೂಪರ್'

ಈ ಚಿತ್ರವಲ್ಲದೇ, ಪ್ರದರ್ಶನವಾಗುತ್ತಿರುವ ಉಳಿದ ಚಿತ್ರಗಳೆಂದರೆ ಪುಟ್ಟಕ್ಕನ ಹೈವೇ. ಬೆಟ್ಟದ ಜೀವ, ನನ್ನ ಗೋಪಾಲ, ಗಾಂಧಿ ಸ್ಮೈಲ್ಸ್, ಹೆಜ್ಜೆಗಳು, ಪ್ರಾರ್ಥನೆ, ಶಬ್ಧಮಣಿ, ಒಲವೇ ಮಂದಾರ, ಚಿಂಟು ಸ್ಕೂಲ್ ಮುಂತಾದವು. 2009-10ನೇ ಸಾಲಿನ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿರುವ 'ರಸಋಷಿ ಕುವೆಂಪು' ಮತ್ತು ತುಳು ಚಿತ್ರ 'ಗಗ್ಗರ' ವಿಶ್ವ ಸಿನಿಮಾ ವಿಭಾಗದಲ್ಲಿ ಸ್ಥಾನ ಪಡೆದಿವೆ.
ಡಿಸೆಂಬರ್ 15ರಿಂದ ಎಂಟು ದಿನಗಳ ಕಾಲ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿರುವ ಚಲನಚಿತ್ರೋತ್ಸವದಲ್ಲಿ ಓಂಪುರಿ, ಅನಂತ್‌ನಾಗ್ ಮತ್ತು ದರುಯಿಶ್ ಮೆಹ್ರ್‌ಜುಯಿ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಈ ಚಿತ್ರೋತ್ಸವವನ್ನು ಕರ್ನಾಟಕ ಸರ್ಕಾರದ ಆಶ್ರಯದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸುತ್ತಿದೆ.
English summary
Bengaluru International Film Festival starts from Dec. 15, 2011 at Bangalore. Super Star Upendra movie Super (Symbol) and Puttakkana Highway will be Screened there.


Click it and Unblock the Notifications