ಸೂರಪ್ಪನ ಕೈಗೆ ಬಳ್ಳಾರಿ ಕೈದಿ ನಂ.697 ಸಿನಿಮಾ ಟೈಟಲ್

'ಬಳ್ಳಾರಿ ಕೈದಿ ನಂಬರ್ 697' ಎಂಬ ಶೀರ್ಷಿಕೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸೂರಪ್ಪ ಬಾಬು ನೋಂದಾಯಿಸಿಕೊಂಡಿದ್ದಾರೆ. ಶೀಘ್ರದಲ್ಲೆ ಚಿತ್ರೀಕರಣವನ್ನೂ ಆರಂಭಿಸುವುದಾಗಿಯೂ ಅವರು ತಿಳಿಸಿದ್ದಾರೆ. ಈ ಹಿಂದೆ ಸೂರಪ್ಪ ಬಾಬು ಬಳ್ಳಾರಿ ಗಣಿ ಮಾಫಿಯಾ ಬಗ್ಗೆ ಬೆಳಕು ಚೆಲ್ಲುವ 'ಪೃಥ್ವಿ' ಚಿತ್ರವನ್ನು ನಿರ್ಮಿಸಿದ್ದರು.
ಪುನೀತ್ ರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿದ್ದ 'ಪೃಥ್ವಿ'ಚಿತ್ರ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಅದರ ಮುಂದುವರಿದ ಭಾಗವಾಗಿ ಬಳ್ಳಾರಿ ಕೈದಿ ನಂಬರ್ 697 ಚಿತ್ರ ಬರಲಿದೆಯಂತೆ. ಪೃಥ್ವಿ ಚಿತ್ರವನ್ನು ಜೇಕಬ್ ವರ್ಗೀಸ್ ಆಕ್ಷನ್ ಕಟ್ ಹೇಳಿದ್ದರು.
ಆದರೆ ಈ ಚಿತ್ರವನ್ನು ಯಾವುದೇ ರಾಜಕೀಯ ವೈಮನಸ್ಯದಿಂದ ನಿರ್ಮಿಸುತ್ತಿಲ್ಲ. ಚಿತ್ರದ ಶೀರ್ಷಿಕೆಗೂ ಬಳ್ಳಾರಿ ರೆಡ್ಡಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ ಸೂರಪ್ಪ.ಚಿತ್ರದ ನಾಯಕ ನಟ, ನಿರ್ದೇಶಕ ಇನ್ನಷ್ಟೆ ನಿರ್ಧರವಾಗಬೇಕಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
The arrest of former Karnataka Tourism Minister G Janardhana Reddy has become big sensation in the media. Kannada film producer Soorappa Babu is making a film Bellary Khaidi No. 697 to cash in on the current political situation in Karnataka.
ಬಳ್ಳಾರಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಸಿಬಿಐ ಕೆಎಫ್ಸಿಸಿ bellary janardhan reddy cbi illegal mining kfcc


Click it and Unblock the Notifications











