twitter
    For Quick Alerts
    ALLOW NOTIFICATIONS  
    For Daily Alerts

    ಸೂರಪ್ಪನ ಕೈಗೆ ಬಳ್ಳಾರಿ ಕೈದಿ ನಂ.697 ಸಿನಿಮಾ ಟೈಟಲ್

    By Rajendra
    |

    Bellary Kaidi Number 697 film
    ಬಳ್ಳಾರಿಯ ಗಾಲಿ ಜನಾರ್ದನರೆಡ್ಡಿ ಹೈದರಾಬಾದಿನ ಪುರಾತನ ಚಂಚಲಗೂಡಾ ಕಾರಾಗೃಹಕ್ಕೆ ರವಾನೆಯಾಗುತ್ತಿದ್ದಂತೆ. ಅವರಿಗೆ ಸಿಕ್ಕ ಸಂಖ್ಯೆ ಕೈದಿ ನಂಬರ್ 697. ಈಗ ಇದೇ ಸಂಖ್ಯೆಯನ್ನು ಸಿನಿಮಾ ಮಾಡಲು ಹೊರಟಿದ್ದಾರೆ ಕನ್ನಡ ಚಲನಚಿತ್ರ ನಿರ್ಮಾಪಕ ಸೂರಪ್ಪ ಬಾಬು.

    'ಬಳ್ಳಾರಿ ಕೈದಿ ನಂಬರ್ 697' ಎಂಬ ಶೀರ್ಷಿಕೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸೂರಪ್ಪ ಬಾಬು ನೋಂದಾಯಿಸಿಕೊಂಡಿದ್ದಾರೆ. ಶೀಘ್ರದಲ್ಲೆ ಚಿತ್ರೀಕರಣವನ್ನೂ ಆರಂಭಿಸುವುದಾಗಿಯೂ ಅವರು ತಿಳಿಸಿದ್ದಾರೆ. ಈ ಹಿಂದೆ ಸೂರಪ್ಪ ಬಾಬು ಬಳ್ಳಾರಿ ಗಣಿ ಮಾಫಿಯಾ ಬಗ್ಗೆ ಬೆಳಕು ಚೆಲ್ಲುವ 'ಪೃಥ್ವಿ' ಚಿತ್ರವನ್ನು ನಿರ್ಮಿಸಿದ್ದರು.

    ಪುನೀತ್ ರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿದ್ದ 'ಪೃಥ್ವಿ'ಚಿತ್ರ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಅದರ ಮುಂದುವರಿದ ಭಾಗವಾಗಿ ಬಳ್ಳಾರಿ ಕೈದಿ ನಂಬರ್ 697 ಚಿತ್ರ ಬರಲಿದೆಯಂತೆ. ಪೃಥ್ವಿ ಚಿತ್ರವನ್ನು ಜೇಕಬ್ ವರ್ಗೀಸ್ ಆಕ್ಷನ್ ಕಟ್ ಹೇಳಿದ್ದರು.

    ಆದರೆ ಈ ಚಿತ್ರವನ್ನು ಯಾವುದೇ ರಾಜಕೀಯ ವೈಮನಸ್ಯದಿಂದ ನಿರ್ಮಿಸುತ್ತಿಲ್ಲ. ಚಿತ್ರದ ಶೀರ್ಷಿಕೆಗೂ ಬಳ್ಳಾರಿ ರೆಡ್ಡಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ ಸೂರಪ್ಪ.ಚಿತ್ರದ ನಾಯಕ ನಟ, ನಿರ್ದೇಶಕ ಇನ್ನಷ್ಟೆ ನಿರ್ಧರವಾಗಬೇಕಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    The arrest of former Karnataka Tourism Minister G Janardhana Reddy has become big sensation in the media. Kannada film producer Soorappa Babu is making a film Bellary Khaidi No. 697 to cash in on the current political situation in Karnataka.
    Wednesday, September 7, 2011, 10:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X