ವಿಷ್ಣುವರ್ಧನ ಶತದಿನೋತ್ಸವ ಆಚರಿಸಲಿ: ನಟ ದರ್ಶನ್
ಚಿಂಗಾರಿ ಬಿಡುಗಡೆಗೆ ಮುಖ್ಯ ಅತಿಥಿಯಾಗಿ ಬಂದಿದ್ದ ಸುದೀಪ್ ದರ್ಶನ್ ಪಕ್ಕದಲ್ಲೇ ಆಸೀನರಾಗಿದ್ದರು. ಸದೀಪ್ ಹಾಗೂ ತಮ್ಮ ಕುರಿತು ದರ್ಶನ್ "ಚಿತ್ರರಂಗಕ್ಕೆ ಕಾಲಿಟ್ಟ ಹೊಸತರಲ್ಲಿ ನಮ್ಮಿಬ್ಬರನ್ನೂ 'ಏಲಿಯನ್ (ಅನ್ಯಗ್ರಹ ಜೀವಿಗಳು)' ತರಹ ಇದ್ದಾರೆಂದು ಟೀಕಿಸಿದವರಿದ್ದರು. ಆದರೆ ಅದೆಲ್ಲಾ ಸುಳ್ಳಾಯಿತು.
ನಾವಿಬ್ಬರೂ 'ಬೆಸ್ಟ್ ಪ್ರೆಂಡ್ಸ್'. ನಮ್ಮಿಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇಬ್ಬರೂ ತುಂಬಾ ಬ್ಯುಸಿ ಇರುವುದರಿಂದ ಒಟ್ಟಿಗೆ ಓಡಾಡಲು, ಕಾಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಫೋನಿನಲ್ಲಿ ಆಗಾಗ ಮಾತುಕತೆ ನಡೆಸುತ್ತಿರುತ್ತೇವೆ. ಸುದೀಪ್ ಅವರ ವಿಷ್ಣುವರ್ಧನ್ ಚಿತ್ರ ಶತದಿನೋತ್ಸವ ಆಚರಿಸಲಿ" ಎಂದರು.
ಈಗ ಹೊಸಬರ ಕಾಲ. ಹೊಸಬರು ಚಿತ್ರರಂಗಕ್ಕೆ ಬಂದಂತೆಲ್ಲಾ ನಾವಿಬ್ಬರೂ ನಿಧಾನವಾಗಿ ಪಕ್ಕಕ್ಕೆ ಸರಿಯುತ್ತಿದ್ದೇವೇನೋ ಎನಿಸುತ್ತಿದೆ. ಇದಕ್ಕೆ ನಾವಿಬ್ಬರೂ ತೊಟ್ಟಿರುವ ಕನ್ನಡಕವೇ ಸಾಕ್ಷಿ" ಎಂದು ಹಾಸ್ಯದ ಹೊನಲು ಹರಿಸಿದರು. ಪಕ್ಕದಲ್ಲಿದ್ದ ಸುದೀಪ್, ದರ್ಶನ್ ಮಾತನ್ನು 'ಹೌದು' ಎಂದು ತಲೆ ಅಲ್ಲಾಡಿಸುವ ಮೂಲಕ ಅನುಮೋದಿಸಿದರು. (ಒನ್ ಇಂಡಿಯಾ ಕನ್ನಡ)


Click it and Unblock the Notifications











