»   » ರಾಜಕೀಯದಲ್ಲಿ ನಟ ಚಿರಂಜೀವಿಯ 'ಸ್ವಯಂಕೃಷಿ'

ರಾಜಕೀಯದಲ್ಲಿ ನಟ ಚಿರಂಜೀವಿಯ 'ಸ್ವಯಂಕೃಷಿ'

Posted By:
Subscribe to Filmibeat Kannada

ಹೈದರಾಬಾದ್, ಫೆ.7: ನಟ ಚಿರಂಜೀವಿ ರಾಜಕೀಯ ಸೇರುತ್ತಾರಾ? ಇಲ್ಲವಾ? ಎಂಬ ಬಗ್ಗೆ ಆಂಧ್ರಪ್ರದೇಶದಲ್ಲಿ ಸುದೀರ್ಘ ಚರ್ಚೆಗಳೇ ನಡೆದು ಹೋಗಿವೆ. ರಾಜಕೀಯಕ್ಕೆ ಬರುತ್ತಾರೋ ಇಲ್ಲವೋ ಎಂಬ ಬಗ್ಗೆ ಚಿರಂಜೀವಿ ಮಾತ್ರ ತುಟಿ ಬಿಚ್ಚಿಲ್ಲ. ಎಲ್ಲದಕ್ಕೂ ಅವರ ಮೌನವೇ ಉತ್ತರವಾಗಿತ್ತು.

ಆದರೆ ಚಿರಂಜೀವಿ ಅಭಿಮಾನಿಗಳ ಸಂಘ ಚಿರಂಜೀವಿ ಹೊಸ ರಾಜಕೀಯ ಪಕ್ಷ ಕಟ್ಟುತ್ತಿರುವ ಬಗ್ಗೆ ಸುಳಿವು ನೀಡಿದೆ. ಚಿರಂಜೀವಿ ಕಟ್ಟಲಿರುವ ಹೊಸ ರಾಜಕೀಯ ಪಕ್ಷದ ಹೆಸರು 'ಸ್ವಯಂ ಕೃಷಿ' ಎಂದು. ಪಕ್ಷದ ಚಿಹ್ನೆ ಕಣ್ಣು. ಹೊಸ ಪಕ್ಷವನ್ನು ಏಪ್ರಿಲ್ 7ರಂದು ಉದ್ಘಾಟನೆ ಮಾಡಲಿರುವುದಾಗಿ ಚಿರಂಜೀವಿ ಅಭಿಮಾನಿ ಸಂಘದ ಅಧ್ಯಕ್ಷರಾದ ಸತ್ತಿಬಾಬು ಬುಧವಾರ ತಿಳಿಸಿದ್ದಾರೆ.

ಸ್ವಯಂಕೃಷಿ ಎಂಬುದು 1987ರಲ್ಲಿ ತೆರೆಕಂಡ ಚಿರಂಜೀವಿ ನಟಸಿದ ಒಂದು ಕಲಾತ್ಮಕ ಚಿತ್ರದ ಹೆಸರು. ಅದರಲ್ಲಿ ಅವರು ಓದು ಬರಹ ಬಾರದ ಬಡ ಚಮ್ಮಾರನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಆ ಚಿತ್ರದಲ್ಲಿ ಮುಂದೆ ಅವರು ಪಾದರಕ್ಷೆಗಳನ್ನು ತಯಾರಿಸುವ ಕಂಪನಿಯ ಮಾಲೀಕರಾಗುತ್ತಾರೆ. ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಸಹಾ ಸಿಕ್ಕಿತ್ತು. ಪದ್ಮಶ್ರೀ ಕೆ.ವಿಶ್ವನಾಥ್ ಚಿತ್ರವನ್ನು ನಿರ್ದೇಶಿಸಿದ್ದರು.

ಈಗಾಗಲೇ ಅವರು ಆಂಧ್ರಪ್ರದೇಶದಲ್ಲಿ ರಕ್ತದ ಬ್ಯಾಂಕ್ ಹಾಗೂ ಕಣ್ಣಿನ ಬ್ಯಾಂಕನ್ನು ಸ್ಥಾಪಿಸಿ ಸಾಕಷ್ಟು ಜನಕ್ಕೆ ನೆರವಾಗಿದ್ದಾರೆ. ಹಾಗಾಗಿ ಅವರ ಹೊಸ ಪಕ್ಷಕ್ಕೆ ಕಣ್ಣಿನ ಚಿಹ್ನೆ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.

(ಏಜೆನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada