ಹರೀಶ್ ರಾಜ್ ಕಲಾಕಾರ್ ಚಿತ್ರಕ್ಕೆ ಕ್ಲೀನ್ ಸೆನ್ಸಾರ್

ಮಂಡಳಿಯ ತೀರ್ಪಿಗೆ ಸಂತಸ ವ್ಯಕ್ತ ಪಡೆಸಿರುವ ನಿರ್ಮಾಪಕರು ಮಾಸಾಂತ್ಯದಲ್ಲಿ ಚಿತ್ರವನ್ನು ತೆರೆಗೆ ತರುವ ಯತ್ನದಲಿದ್ದಾರೆ. ಜನಪ್ರಿಯ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಣೆ ಮಾಡಿರುವ ಹರೀಶ್ ರಾಜ್ ಸಾಕಷ್ಟು ಚಲನಚಿತ್ರಗಳಲ್ಲಿ ಅಭಿನಯಿಸಿ ಅನುಭವವಿರುವವರು. ಶೀರ್ಷಿಕೆಗೆ ಅನುಗುಣವಾಗುವಂತೆ ಹರೀಶ್ ರಾಜ್ ಚಿತ್ರದ ಹಲವು ವಿಭಾಗಗಳ ಜಾವಾಬ್ದಾರಿಯನ್ನು ತಾವೇ ಹೊತ್ತಿದ್ದಾರೆ. ನಿರ್ಮಾಪಕರಾದ ಇವರು ಚಿತ್ರದ ನಾಯಕರೂ ಹೌದು. ಕಲಾಕಾರ್ ನಿಗೆ ಕಥೆ, ಚಿತ್ರಕಥೆ ಬರೆದಿರುವ ಹರೀಶ್ ನಿರ್ದೇಶಕರಾಗೂ ಕಾರ್ಯ ನಿರ್ವಹಿಸಿದ್ದಾರೆ.
'ಚಿಕ್ಕ ಮಗಳೂರ ಚಿಕ್ಕ ಮಲ್ಲಿಗೆ ರಾಧಿಕಾ ಗಾಂಧಿ ಚಿತ್ರದ ನಾಯಕಿಯಾಗಿದ್ದು, ಚೆಲುವೆ ಸುಮನ್ ರಂಗನಾಥ್ ಗಮನಾರ್ಹ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸುಧಾ ನರಸಿಂಹರಾಜು, ಅವಿನಾಶ್(ಹಾಸ್ಯಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ), ರಾಜರಾವ್, ವಿಶ್ವ ಮುಂತಾದವರು ಚಿತ್ರದ ಉಳಿದ ತಾರಾಬಳಗದಲಿದ್ದಾರೆ. ಗಿರಿಧರ್ ದಿವಾನ್ ಸಂಗೀತ, ಎಚ್.ಎಂ.ರಾಮಚಂದ್ರ ಛಾಯಾಗ್ರಹಣ, ಶ್ರೀ(ಕ್ರೇಜಿ ಮೈಂಡ್ಸ್) ಸಂಕಲನ ಈ ಚಿತ್ರಕ್ಕಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಸದಭಿರುಚಿ ಚಿತ್ರಗಳ ಕಲಾಕರ್ ಹರೀಶ್ ರಾಜ್
ಯೋಗೀಶ್ ಸಂಭಾವನೆ ದಿನಕ್ಕೆ ಸಾವಿರ ರುಪಾಯಿ!
ದರ್ಶನ್ ರಿಂದ ಹೊರಾಂಗಣ ಚಿತ್ರೀಕರಣ ಘಟಕ
ತೋಪು ಕನ್ನಡ ನಿರ್ದೇಶಕರ ಯಶಸ್ವಿ ಸೂತ್ರಗಳು
ಕನ್ನಡ ಚಿತ್ರೋದ್ಯಮದ ತ್ರೈಮಾಸಿಕ ಫಲಿತಾಂಶ!


Click it and Unblock the Notifications











